Advertisement
ಬೆಂಗಳೂರು ವಲಯದಲ್ಲಿ ಕೆಲಸ ಮಾಡುವ ಸಿಬಂದಿಗೆ 500 ರೂ., ಉಳಿದೆಡೆ 380 ರೂ. ದಿನಭತ್ತೆ ನೀಡಲಾಗುತ್ತಿತ್ತು. ಈಗ ಅದು ಎಲ್ಲರಿಗೂ 750 ರೂ.ಗೇರಿದೆ. ಎಪ್ರಿಲ್‌ನಿಂದಲೇ ಪರಿಷ್ಕೃತ ದಿನಭತ್ತೆ ಜಾರಿಯಾಗಿದೆ. ಮಾಸಿಕ (1 ರಜೆಯ ಹೊರತು) ಸುಮಾರು 21,750 ರೂ. ದಿನಭತ್ತೆ ಸಿಗಲಿದೆ.
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಕಡೆಯಲ್ಲಿ 1,500 ಗೃಹರಕ್ಷಕ ಸಿಬಂದಿ ದಿನಗೂಲಿ ಆಧಾರದ ಮೇಲೆ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸರಕಾರದ ವೇತನ ತಾರತಮ್ಯ ಅವರು ಕುಪಿತರಾಗಿದ್ದು, ಪೊಲೀಸ್ ಇಲಾಖೆ ಹೊರತು
ಅನ್ಯ ಇಲಾಖೆಯಲ್ಲಿ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ದಿನಕ್ಕೆ 380 ರೂ.ಗಳಂತೆ ತಿಂಗಳಪೂರ್ತಿ ದುಡಿದರೆ 9 ಸಾವಿರ ರೂ. ಸಿಗುತ್ತದೆ. ಅನಾರೋಗ್ಯ, ಇನ್ನಾವುದೋ ಕಾರಣಕ್ಕೆ ರಜೆ ಹಾಕಿದರೆ ಕಡಿತವಾಗುತ್ತದೆ. ನಾವು ಜೀವನ ಭದ್ರತೆಗಾಗಿ ಪರದಾಡುವ ಸ್ಥಿತಿ ಬಂದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.