Advertisement

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ

02:09 AM Jul 27, 2024 | Team Udayavani |

ಹೊಸದಿಲ್ಲಿ: ಝಾರ್ಖಂಡ್‌ ಮತ್ತು ಪಶ್ಚಿಮ ಬಂಗಾಲದ ಗಡಿ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸಬೇಕು ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಆಗ್ರಹಿಸಿದ್ದಾರೆ. ಆ ಪ್ರದೇಶಗಳು ಕೇಂದ್ರಾಡಳಿತವಾಗದಿದ್ದರೆ ಅಲ್ಲಿನ ಹಿಂದೂಗಳು ಕಣ್ಮರೆಯಾಗುವಂಥ ಪರಿಸ್ಥಿತಿ ಬರಲಿದೆ ಎಂದೂ ಎಚ್ಚರಿಸಿದ್ದಾರೆ.

Advertisement

ಲೋಕಸಭೆಯಲ್ಲಿ ಶುಕ್ರವಾರ ಈ ವಿಚಾರ ಪ್ರಸ್ತಾವಿಸಿರುವ ದುಬೆ, ನೆರೆಯ ಬಾಂಗ್ಲಾದೇಶ ದಿಂದ ಪಶ್ಚಿಮ ಬಂಗಾಲಕ್ಕೆ ಅಕ್ರಮವಾಗಿ ಮುಸ್ಲಿಮರು ಬರುತ್ತಿದ್ದಾರೆ. ಪ.ಬಂಗಾಲದ ಮಾಲ್ಡಾ ಮತ್ತು ಮುರ್ಷಿ ದಾಬಾದ್‌ನಿಂದ ಬಂದು ಝಾರ್ಖಂಡ್‌ನ‌ ಸಂತಾಲ್‌ ಪರಗಣದಂಥ ಗ್ರಾಮಗಳಲ್ಲಿ ಸೇರಿಕೊಂಡು ಹಿಂದೂ ಬುಡಕಟ್ಟು ಸಮುದಾಯದ ಮಹಿಳೆಯರನ್ನು ಮದುವೆಯಾಗುತ್ತಿದ್ದಾರೆ. ಪರಿಣಾಮ ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತಿದೆ. ಇದು ಹೀಗೆಯೇ ಮುಂದುವರಿದರೆ ಮುಂದೆ ಹಿಂದೂಗಳು ಕಣ್ಮರೆಯಾಗಲಿದ್ದಾರೆ.

ಈ ಕಾರಣಕ್ಕಾಗಿ ಮಾಲ್ಡಾ, ಮುರ್ಷಿದಾಬಾದ್‌, ಅರಾರಿಯಾ, ಕೃಷ್ಣಗಂಜ್‌, ಕಾಟಿಹಾರ್‌, ಸಂತಾಲ್‌ ಪರಗಣವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು ಮತ್ತು ಈ ಪ್ರದೇಶಗಳಲ್ಲಿ ಎನ್‌ಆರ್‌ಸಿ(ರಾಷ್ಟ್ರೀಯ ನಾಗರಿಕ ನೋಂದಣಿ) ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next