Advertisement

ಕೋವಿಡ್ ಸೋಂಕು ಹೆಚ್ಚಳ ಅಪಾಯಕಾರಿ

04:47 PM May 15, 2021 | Team Udayavani |

ಚಳ್ಳಕೆರೆ: ಎರಡನೇ ಹಂತದ ಕೊರೊನಾ ನಿಯಂತ್ರಣದಲ್ಲಿ ತಾಲೂಕು ಆರೋಗ್ಯ ಇಲಾಖೆ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಆದರೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದ್ದರಿಂದ ಕೊರೊನಾ ನಿಯಂತ್ರಿಸಲು ತಾಲೂಕು ಮಟ್ಟದ ಅಧಿಕಾರಿಗಳು ಜಾಗ್ರತರಾಗಿ ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಟಿ. ರಘುಮೂರ್ತಿ ಸೂಚಿಸಿದರು.

Advertisement

ಶುಕ್ರವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಬಸವ ಜಯಂತಿ ನಂತರ ನಡೆದ ಕೊರೊನಾ ನಿಯಂತ್ರಣ ಟಾಸ್ಕ್ಫೋರ್ಸ್‌ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗಗಳಲ್ಲೂ ಕೊರೊನಾದಿಂದ ಮರಣಹೊಂದುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಈ ಬೆಳವಣಿಗೆಗೆ ಅಪಾಯ ಮತ್ತು ಆತಂಕಕಾರಿ ಎಂದರು.

ತಾಲೂಕು ಆಕ್ಸಿಜನ್‌ ಪೂರೈಕೆ ನೋಡಲ್‌ ಅಧಿಕಾರಿ, ತಾಪಂ ಇಒ ಪ್ರಕಾಶ್‌ ಮಾತನಾಡಿ, ಗ್ರಾಮೀಣ ಭಾಗದ ಚರಂಡಿ ಹಾಗೂ ರಸ್ತೆಗಳ ಸ್ವತ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಪ್ರತಿಯೊಂದು ಗ್ರಾಮದಲ್ಲೂ ಈಗಾಗಲೇ ಸೋಡಿಯಂ ದ್ರಾವಣವನ್ನು ಸಿಂಪಡಿಸಲಾಗಿದೆ ಎಂದು ತಿಳಿಸಿದರು.

ತಹಶೀಲ್ದಾರ್‌ ಎಂ.ಮಲ್ಲಿಕಾರ್ಜುನ್‌ ಮಾತನಾಡಿ, ನಗರದಲ್ಲಿ ಮೃತಪಟ್ಟ ಕೊರೋನಾ ಪಾಸಿಟಿವ್‌ ಸೋಂಕಿತರನ್ನು ಗ್ರಾಮೀಣ ಭಾಗಗಳಿಗೆ ಸಾಗಿಸಲು ಸೂಕ್ತ ವ್ಯವಸ್ಥೆ ಇಲ್ಲ. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಬಾಡಿಗೆ ವಾಹನವನ್ನು ಪಡೆದು ಮೃತಪಟ್ಟವರನ್ನು ಅವರ ಗ್ರಾಮಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಸಿ.ಬಿ. ಜಯಲಕ್ಷ್ಮೀ ಕೃಷ್ಣಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್‌ ಗೌಡ, ಸದಸ್ಯರಾದ ಚಳ್ಳಕೆರೆಯಪ್ಪ, ವಿರೂಪಾಕ್ಷಿ, ತಾಪಂ ಸದಸ್ಯ ಎಚ್‌. ಸಮರ್ಥರಾಯ, ಡಿವೈಎಸ್ಪಿ ಕೆ.ವಿ. ಶ್ರೀಧರ್‌, ಇನ್ಸ್‌ಸ್ಟೆಕ್ಟರ್‌ ಜೆ.ಎಸ್‌.ತಿಪ್ಪೇಸ್ವಾಮಿ, ಬಿಇಒ ಕೆ.ಎಸ್‌. ಸುರೇಶ್‌, ಪೌರಾಯುಕ್ತ ಪಿ. ಪಾಲಯ್ಯ, ಇಂಜಿನಿಯರ್‌ ವಿಜಯಭಾಸ್ಕರ್‌, ನಗರಸಭೆ ಮಾಜಿ ಸದಸ್ಯ ಎಚ್‌.ವಿ. ಪ್ರಸನ್ನಕುಮಾರ್‌, ಕೆ.ಎಂ. ಜಗದೀಶ್‌, ಆರ್‌. ಪ್ರಸನ್ನಕುಮಾರ್‌, ಹೂವಿನ ಜಗದೀಶ್‌, ಸ್ವಾಮಿ, ಕೃಷ್ಣಮೂರ್ತಿ ಮತ್ತಿತರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next