ಬೇಕು. ಆ ಮೂಲಕ ಜಿಲ್ಲೆಯಲ್ಲಿ ಉದ್ಯೋಗ ಖಾತರಿಯ ಪ್ರಗತಿ ಸಾಧಿಸುವಂತಾಗ ಬೇಕು. ಸಾಮುದಾಯಿಕ ಕೆಲಸ ಕಾರ್ಯ ಹೆಚ್ಚಾಗಬೇಕು. ಕೆರೆಗಳ ಹೂಳೆತ್ತುವ ಕೆಲಸಗಳನ್ನು ಸಾಮೂಹಿಕವಾಗಿ ದುಡಿಯುವ ಕೈಗಳು ನಿರ್ವಹಿಸುವಂತಾಗಬೇಕು ಎಂದು ಕೃಷಿ ಇಲಾಖಾ ಸಹಾಯಕ ನಿರ್ದೇಶಕ ಮೋಹನ್‌ರಾಜ್ ಹೇಳಿದರು.
Advertisement
ಅವರು ಜೂ. 25ರಂದು ಪಡುಬಿದ್ರಿ ಗ್ರಾ. ಪಂ. ಸಭಾಭವನದಲ್ಲಿ ನಡೆದ 2019 –20ನೇ ಸಾಲಿನ ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಅಧಿನಿಯಮದ ಪ್ರಥಮ ಹಂತದ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡಿದರು.
ಉದ್ಯೋಗ ಖಾತರಿ ಯೋಜನೆಯಡಿ ಮೀನುಗಾರಿಕೆಯಲ್ಲಿ ಕೈರಂಪಣಿ, ನಾಡ ದೋಣಿ ಮೀನುಗಾರಿಕೆಯ ಸಹಿತ ಭತ್ತದ ಕೃಷಿಯನ್ನು ಸೇರಿಸುವಂತೆಯೂ ಬಾವಿ ತೋಡುವಂತಹ ಕೆಲಸಕ್ಕೆ ಸಣ್ಣ ಹಾಗೂ ಅತಿ ಸಣ್ಣ ರೈತರು ಭಾಗಿಯಾಗುವುದಕ್ಕೆ ಯಾವುದೇ ನಿರ್ದಿಷ್ಟ ಅಧಿಸೂಚನೆ ಇಲ್ಲದಿ
ದ್ದರೂ ಕನಿಷ್ಠ 50 ಸೆಂಟ್ಸ್ ಭೂಮಿಯನ್ನು ಹೊಂದಿರಬೇಕೆಂಬ ನಿಯಮ ಅನುಸರಿಸು ತ್ತಿರುವುದನ್ನು ಸಡಿಲಿಸಿ 10 ಅಥವಾ 15 ಸೆಂಟ್ಸ್‌ಗಳಿಗೆ ಇಳಿಸಬೇಕೆಂದು ಸಭೆಯಲ್ಲಿ ಆಗ್ರಹಿಸಿ ಠರಾವು ಮಂಡಿಸಲಾಯಿತು. ಸಾಮಾಜಿಕ ಪರಿಶೋಧನೆಯ ತಾಲೂಕು ಸಂಯೋಜಕ ರಾಜು ಮೂಲ್ಯ,
ಸಭೆಯಲ್ಲಿ ಪರಿಶೋಧನೆಯ ವೇಳೆ ಗಮನಿಸಲಾದ ಆಕ್ಷೇಪಣೆ ತಿಳಿಸಿ ಪಡುಬಿದ್ರಿ ಗ್ರಾ.ಪಂ.ನಲ್ಲಿ 732 ಉದ್ಯೋಗ ಚೀಟಿಗಳಿದ್ದು ಪ್ರಥಮ ಹಂತದಲ್ಲಿ 2,44,496 ರೂ.ಗಳನ್ನು ಕೂಲಿಯಾಗಿ ಪಾವತಿಸಲಾಗಿದೆ. ಇದು ಪಡುಬಿದ್ರಿ ಯಂತಹ ಪಂಚಾಯತ್‌ನಲ್ಲಿ ಕನಿಷ್ಠ 15 ಲಕ್ಷಗಳವರೆಗಾದರೂ ಆಗಬೇಕಾಗಿರು ವುದು ಪ್ರಗತಿಯ ದೃಷ್ಟಿಯಲ್ಲಿ ಅತ್ಯವಶ್ಯಕ ಎಂದವರು ತಿಳಿಸಿದರು.
Related Articles
ಕೃಷಿ ಅಧಿಕಾರಿಯಾಗಿ ಸಭೆಯಲ್ಲಿದ್ದ ಸಹಾಯಕ ನಿರ್ದೇಶಕ ಮೋಹನ್‌ರಾಜ್ ಕಾಮಿನಿ ನದಿಗೆ ಯುಪಿಸಿಎಲ್ ಕಲ್ಲಿದ್ದಲು ನೀರನ್ನು ಬಿಡಲಾಗಿದ್ದು ಒಂದೇ ದಿನದಲ್ಲಿ ಸಹಸ್ರಾರು ಮೀನುಗಳ ಮಾರಣ ಹೋಮವಾಗಿದೆ. ಕೃಷಿಕರು ಬಿತ್ತಿದ ಬಿತ್ತನೆ ಬೀಜ ನಾಶ ಹೊಂದಿದೆ ಎಂಬ ಪಡುಹಿತ್ಲುವಿನ ಲೋಹಿತಾಶ್ವ ಎಂಬವರ ಪ್ರಶ್ನೆಗೆ ಉತ್ತರಿಸಿ ಮೊದಲಾಗಿ ನೀರು ಕಲುಷಿತಗೊಂಡಿರುವುದನ್ನು ಪರಿಸರ ಇಲಾಖೆಯ ಪರಿಶೀಲನೆಗೊಳಪಡಿಸಿ ದೃಢೀಕರಿಸಿಕೊಳ್ಳಬೇಕು. ಆ ಬಳಿಕ ರೈತರು ತಮ್ಮ ಗ್ರಾ.ಪಂ. ಮೂಲಕ ಯೋಜನಾ ಕಂಪೆನಿಗೂ ನೋಟಿಸ್ ನೀಡಬೇಕು. ಎಲ್ಲವೂ ಖಾತರಿಗೊಂಡಾಗ ರೈತರ ಪ್ರತೀ ಹೆಕ್ಟೇರ್ ಕೃಷಿ ಭೂಮಿಗೆ 7,000 ರೂ. ಪರಿಹಾರವನ್ನು ಇಲಾಖೆಯಿಂದ ನೀಡಬಹುದಾದ ಸೌಲಭ್ಯಗಳಿವೆ ಎಂದವರು ತಿಳಿಸಿದರು.
Advertisement
ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷೆ ದಮಯಂತಿ ವಿ. ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವೈ. ಸುಕುಮಾರ್ ಉಪಸ್ಥಿತರಿದ್ದರು. ಗ್ರಾ. ಪಂ.ಪಿಡಿಒ ಪಂಚಾಕ್ಷರೀ ಸ್ವಾಮಿ ಕೆರಿಮಠ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.