ಹೊಸದಿಲ್ಲಿ: ಈ ಬಾರಿಯ ಬಜೆಟ್‌ನಲ್ಲಿ ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು 2.5 ಲಕ್ಷ ರೂ.ಗಳಿಂದ 3 ಲಕ್ಷಕ್ಕೆ ಏರಿಕೆ ಮಾಡುವ ಸಾಧ್ಯತೆ ಯಿದೆ.
ಅಷ್ಟೇ ಅಲ್ಲ, ಆದಾಯ ತೆರಿಗೆಯ 80 ಸಿ ವಿಭಾಗದ ಅಡಿಯಲ್ಲಿ ಈಗ ಇರುವ 1.5 ಲಕ್ಷ ರೂ. ಮಿತಿಯನ್ನೂ ಏರಿಕೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ವಿತ್ತ ಪರಿಣತರು ಹೇಳುವಂತೆ, ಈ ಏರಿಕೆಯಿಂದ ಕುಸಿಯು ತ್ತಿರುವ ಆರ್ಥಿಕ ಸ್ಥಿತಿಗತಿಗೆ ಆಸರೆಯಾಗಲಿದೆ. ಮೂಲಗಳ ಪ್ರಕಾರ ಮೊದಲ ಬಾರಿ ಮನೆ ಖರೀದಿದಾರರಿಗೆ ಹಲವು ರಿಯಾಯಿತಿ ನೀಡುವ ಸಾಧ್ಯತೆಯಿದೆ. ಇದು 2022ರ ವೇಳೆಗೆ ಎಲ್ಲರಿಗೂ ಸೂರು ಎಂಬ ಸರಕಾರದ ಗುರಿಗೆ ಪೂರಕವಾಗಿರಲಿದೆ.
ಮಧ್ಯಂತರ ಬಜೆಟ್ ಮಂಡಿಸಿದ್ದ ಪಿಯೂಷ್ ಗೋಯೆಲ್ ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಆದರೆ 5 ಲಕ್ಷದ ವರೆಗೆ ಆದಾಯ ಹೊಂದಿರುವವರಿಗೆ ಸಂಪೂರ್ಣ ಆದಾಯ ತೆರಿಗೆ ವಿನಾಯಿತಿ ನೀಡುವ ಭರವಸೆ ನೀಡಿದ್ದರು. ಸದ್ಯ 2.5 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ಅನ್ವಯವಾಗುವುದಿಲ್ಲ. 2.5 ಲಕ್ಷ ರೂ. ಇಂದ 5 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ. 5 ತೆರಿಗೆ ಹಾಗೂ ಶೇ. 4 ಸೆಸ್ ವಿಧಿಸಲಾಗುತ್ತದೆ.
Advertisement