Advertisement

ಬೈಂದೂರು: 4,615 ಮತದಾರರ ಸಂಖ್ಯೆ ಹೆಚ್ಚಳ

12:31 PM Apr 22, 2019 | keerthan |

ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರವನ್ನೊಳಗೊಂಡ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಎ. 23 ರಂದು ಚುನಾವಣೆ ನಡೆಯಲಿದ್ದು, ಈಗಾಗಲೇ ಮತದಾನಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಲಾಗುತ್ತಿದೆ.

Advertisement

ಕಳೆದ ನವೆಂಬರ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಒಟ್ಟು 2,21, 972 ಮಂದಿ ಮತದಾರರಿದ್ದರೆ, ಈ ಬಾರಿಯ ಚುನಾವಣೆಯಲ್ಲಿ ಒಟ್ಟು ಮತದಾರರ ಸಂಖ್ಯೆ 2,26,587 ಕ್ಕೆ ಏರಿಕೆಯಾಗಿದೆ. ಅಂದರೆ 6 ತಿಂಗಳಲ್ಲಿ 4,615 ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಈ ಬಾರಿ 1,16,349 ಮಂದಿ ಮಹಿಳೆಯರು ಹಾಗೂ 1,10,237 ಮಂದಿ ಪುರುಷ ಮತದಾರರು ಸೇರಿ ಒಟ್ಟು 2,26,587 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಕಳೆದ ನವೆಂಬರ್‌ನಲ್ಲಿ ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ 1,14,050 ಮಹಿಳೆಯರು ಹಾಗೂ 1,07,922 ಪುರುಷರು ಸೇರಿ ಒಟ್ಟು 2,21,972 ಮಂದಿ ಮತದಾರರಿದ್ದರು.

21,268 ಮತದಾರರ ಹೆಚ್ಚಳ
ಕಳೆದ 2014 ರಲ್ಲಿ ನಡೆದ ಲೋಕಸಭಾ ಚುನಾವಣೆಗೂ ಈ ಚುನಾವಣೆಯ ಮಧ್ಯೆ ಒಟ್ಟು 21,268 ಮಂದಿ ಮತದಾರರ ಸಂಖ್ಯೆ ಹೆಚ್ಚಳವಾದಂತಾಗಿದೆ. 2014 ರಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 1,07,635 ಮಹಿಳೆಯರು ಹಾಗೂ 97,669 ಮಂದಿ ಪುರುಷರು ಸೇರಿ ಒಟ್ಟು 2,05,319 ಮಂದಿ ಮತದಾರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next