Advertisement

ಸ. ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆ; ಮೂಲ ಸೌಕರ್ಯ ಸವಾಲು! 

08:05 PM Aug 22, 2021 | Team Udayavani |

ಮಹಾನಗರ: ಕೊರೊನಾ ಆತಂಕದ ಮಧ್ಯೆಯೂ ಈ ಬಾರಿ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯು ನಿರೀಕ್ಷೆಗೂ ಮೀರಿದ್ದು ಮಂಗಳೂರು ದಕ್ಷಿಣ, ಉತ್ತರ, ಮೂಡುಬಿದಿರೆ ವ್ಯಾಪ್ತಿಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ 1,098 ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ.

Advertisement

ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾ ಧಿಕಾರಿ ವ್ಯಾಪ್ತಿಯ ಒಟ್ಟು 75 ಸರಕಾರಿ ಶಾಲೆಗಳ ಪೈಕಿ 8 ಶಾಲೆಯಲ್ಲಿ 258 ವಿದ್ಯಾ ರ್ಥಿಗಳ ದಾಖಲಾತಿ ಏರಿಕೆಯಾಗಿದೆ. ಮಂಗಳೂರು ದಕ್ಷಿಣ ವ್ಯಾಪ್ತಿಗೆ ಒಳಪಟ್ಟ 86 ಸರಕಾರಿ ಶಾಲೆಗಳ ಪೈಕಿ 22 ಶಾಲೆಯಲ್ಲಿ ಒಟ್ಟು 575 ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿದ್ದರೆ, ಮೂಡುಬಿದಿರೆ ವ್ಯಾಪ್ತಿಯ ಒಟ್ಟು 63 ಶಾಲೆಗಳ ಪೈಕಿ 4ರಲ್ಲಿ ಒಟ್ಟು 265 ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ.

ಶಾಲಾವಾರು ಏರಿಕೆಯಾದ ವಿವರ:

ಮಂಗಳೂರು ಉತ್ತರ

ಮಂಗಳೂರು ಉತ್ತರ ವ್ಯಾಪ್ತಿಗೆ ಸೇರಿದ ಬೆಂಗ್ರೆ ಕಸ್ಬಾ ಶಾಲೆಯಲ್ಲಿ 83, ಕುದ್ರೋಳಿ ಶಾಲೆ 13, ಮುಲ್ಲಕಾಡ್‌ ಆರ್‌ಎಂಎಸ್‌ಎ 18, ಕರಂಬಾರ್‌ ಶಾಲೆ 16, ಕಾಟಿಪಳ್ಳ 8ನೇ ಬ್ಲಾಕ್‌ 16, ಮದ್ಯಶಾಲೆ 64, ಪಂಜಿಮೊಗರು ಶಾಲೆ 28 ಹಾಗೂ ಮೂಲ್ಕಿ ಕೆ.ಎಸ್‌. ರಾವ್‌ ನಗರ ಶಾಲೆ 20 ವಿದ್ಯಾರ್ಥಿಗಳ ದಾಖಲಾತಿ ಕಳೆದ ವರ್ಷಕ್ಕಿಂತ ಏರಿಕೆಯಾಗಿದೆ.

Advertisement

ಮಂಗಳೂರು ದಕ್ಷಿಣ

ಅತ್ತಾವರ ಶಾಲೆ 41, ದೇರಳಕಟ್ಟೆ ಶಾಲೆ 67, ಮುಚ್ಚಾರು ಶಾಲೆ 24, ಕೊಳವೂರು ಮುತ್ತೂರು 27, ಇನೋಳಿ ಶಾಲೆ 15, ಮಲಾರ್‌ ಶಾಲೆ 26, ಪಾವೂರು ಶಾಲೆ 15, ರಾಜಗುಡ್ಡೆ ಶಾಲೆ 15, ಅಂಬ್ಲಿಮೊಗರು ಆರ್‌ಎಂಎಸ್‌ಎ ಶಾಲೆ 15, ಅಸೈ ಮದಕ ಶಾಲೆ 18, ಕಲ್ಕಟ್ಟ ಶಾಲೆ 15, ಮುನ್ನೂರು ಶಾಲೆ 22, ಪದವು ಶಾಲೆ 14, ನಾಲ್ಯಪದವು ಶಾಲೆ 103, ಬಬ್ಬುಕಟ್ಟೆ ಶಾಲೆ 13, ಪೆರ್ಮನ್ನೂರು ಉರ್ದು ಶಾಲೆ 28, ಅಜ್ಜಿನಡ್ಕ ಶಾಲೆ 13, ಉಚ್ಚಿಲಗುಡ್ಡೆ ಶಾಲೆ 19, ನಾರ್ಲ ಪಡೀಲ್‌ ಶಾಲೆ 13, ತಲಪಾಡಿ ಪಟ್ಣ ಶಾಲೆ 12, ತಿರು ವೈಲು ಶಾಲೆ 20, ಒಂಬತ್ತುಕೆರೆ ಶಾಲೆ 40.

ಮೂಡುಬಿದಿರೆ

ಬೆಳುವಾಯಿ ಮೈನ್‌ ಶಾಲೆ 74, ಮಿಜಾರ್‌ ಪ್ರಾಥಮಿಕ ಶಾಲೆ 23, ಮೂಡುಬಿದಿರೆ ಮೈನ್‌ 123, ಅಳಿಯೂರು ಶಾಲೆ 45.

ಶಿಕ್ಷಕರ ಕೊರತೆ ಸಾಧ್ಯತೆ :

ಸ. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಅಲ್ಲಿ ಮೂಲಸೌಲಭ್ಯ ವ್ಯವಸ್ಥೆಗಳು ಇವೆಯೇ ಎಂಬ ಬಗ್ಗೆ ಹಲವು ಪ್ರಶ್ನೆ ಎದುರಾಗಿದೆ. ಯಾಕೆಂ ದರೆ, ಭೌತಿಕ ತರಗತಿ ಆರಂಭವಾದ ಬಳಿಕ ವಿದ್ಯಾರ್ಥಿಗಳಿಗೆ ತರಗತಿ ಕೊಠಡಿ, ಪೀಠೊಪಕರಣದ ವ್ಯವಸ್ಥೆ ಇದೆಯೇ? ಎಂಬ ಮುಖ್ಯ ಪ್ರಶ್ನೆ ಎದುರಾಗಿದೆ. ಜತೆಗೆ ಹಾಲಿ ಸರಕಾರಿ ಶಾಲೆಗಳಲ್ಲಿಯೇ ಶಿಕ್ಷಕರ ಸಂಖ್ಯೆ ಕನಿಷ್ಠ ಪ್ರಮಾಣದಲ್ಲಿರುವ ಕಾರಣ ಅಂತಹ ಶಾಲೆಯಲ್ಲಿ ಶಿಕ್ಷಕರ ಕೊರತೆ ಎದುರಾಗುವ ಸಾಧ್ಯತೆಯಿದೆ. ಇದನ್ನು ಹೇಗೆ ನಿಭಾಯಿಸಲಾಗುತ್ತದೆ ಎಂಬ ಪ್ರಶ್ನೆ ಎದುರಾಗಿದೆ. ಆನ್‌ಲೈನ್‌ ತರಗತಿ ವೇಳೆಗೆ ಈ ಸಮಸ್ಯೆ ಎದುರಾಗದಿದ್ದರೂ ಭೌತಿಕ ತರಗತಿ ಆರಂಭವಾದರೆ ಇಂತಹ ಪ್ರಶ್ನೆಗಳಿಂದಾಗಿ ಸಮಸ್ಯೆ ಸೃಷ್ಟಿಯಾಗುವ ಸಾಧ್ಯತೆಯಿದೆ.

ಕೆಲವು ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಏರಿಕೆಯಾಗಿದೆ. ಅಂತಹ ಶಾಲೆಗಳಲ್ಲಿ ಭೌತಿಕ ತರಗತಿ ಆರಂಭವಾಗುವ ಸಂದರ್ಭ ಸೂಕ್ತ ಮೂಲಸೌಲಭ್ಯ ವ್ಯವಸ್ಥೆ ಮಾಡಲು ಈಗಾಗಲೇ ಆಯಾ ವ್ಯಾಪ್ತಿಯ ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಭೌತಿಕ ತರಗತಿ ಆರಂಭವಾಗುವಾಗ ಶಿಕ್ಷಕರ ಕೊರತೆ ಆಗದಂತೆ ನೋಡಿಕೊಳ್ಳಲು ಶಿಕ್ಷಕರನ್ನು ಎರವಲು ಸೇವೆಯಲ್ಲಿ ನಿಯೋಜಿ ಸಲಾಗುತ್ತದೆ. ಅಗತ್ಯವಿರುವಲ್ಲಿಗೆ ಅತಿಥಿ ಶಿಕ್ಷಕರ ನಿಯೋಜನೆಗೆ ಕ್ರಮ ಕೈಗೊಳ್ಳಲಾಗುವುದು. ಹೀಗಾಗಿ ಎಲ್ಲೂ ಕೂಡ ಶಿಕ್ಷಕರ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು. -ಮಲ್ಲೇಸ್ವಾಮಿ, ಡಿಡಿಪಿಐ, ದ.ಕ.

 

-ದಿನೇಶ್‌ ಇರಾ

 

Advertisement

Udayavani is now on Telegram. Click here to join our channel and stay updated with the latest news.

Next