ನವದೆಹಲಿ: 2047ರ ವೇಳೆಗೆ ದೇಶದ 140 ದಶಲಕ್ಷ ಜನರಿಗೆ 60 ವರ್ಷ ದಾಟಲಿದ್ದು, ಭಾರತವು ಹಿರಿಯರ ಸಮಾಜವಾಗಿ ರೂಪುಗೊಳ್ಳಲಿದೆ. ಇದು ದೇಶದ ಪಿಂಚಣಿ ನಿಧಿಯ ಮೇಲಿನ ಒತ್ತಡವನ್ನು ಹೆಚ್ಚಿಸಲಿದೆ.
ಈ ಹಿನ್ನೆಲೆಯಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ) ನಿವೃತ್ತಿ ವಯೋಮಿತಿಯನ್ನು ಹೆಚ್ಚಳ ಮಾಡುವ ಬಗ್ಗೆ ಸಲಹೆ ನೀಡಿದೆ.
ತನ್ನ “2047ರ ದೂರದೃಷ್ಟಿ’ ಡಾಕ್ಯುಮೆಂಟ್‌ನಲ್ಲಿ ಈ ಬಗ್ಗೆ ಉಲ್ಲೇಖಿಸಿದೆ.
ಇಪಿಎಫ್ಒ ಸಲಹೆ ಬಗ್ಗೆ ಪ್ರತಿಕ್ರಿಯಿಸಿರುವ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು, “ನಿವೃತ್ತಿ ವಯಸ್ಸನ್ನು ಏರಿಕೆ ಮಾಡುವುದರಿಂದ ಇಪಿಎಫ್ಒ ಅಥವಾ ಇತರೆ ಪಿಂಚಣಿ ನಿಧಿಗಳಲ್ಲಿ ದೀರ್ಘಾವಧಿಗೆ ಅಧಿಕ ಮೊತ್ತದ ಪಿಂಚಣಿಯು ಜಮೆಯಾಗುತ್ತದೆ. ಇದರಿಂದ ಹಣದುಬ್ಬರವನ್ನು ನಿಯಂತ್ರಿಸಲೂ ಸಾಧ್ಯವಾಗುತ್ತದೆ’ ಎಂದಿದ್ದಾರೆ.
ಇದನ್ನೂ ಓದಿ:ಮಳೆ ಅವಾಂತರ; 7 ಸಚಿವರು ಬಿಲ ಸೇರಿಕೊಂಡಿದ್ದೇಕೆ?: ಕಾಂಗ್ರೆಸ್ ಪ್ರಶ್ನೆ
ಇಪಿಎಫ್ಒ ಸುಮಾರು 60 ದಶಲಕ್ಷ ಚಂದಾದಾರರನ್ನು ಹೊಂದಿದ್ದು, 12 ಲಕ್ಷಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಪಿಎಫ್ ಮತ್ತು ಪಿಂಚಣಿ ಮೊತ್ತವನ್ನು ಹೊಂದಿದೆ.