Advertisement

ಪೊಲೀಸರ ವೇತನ ಹೆಚ್ಚಳ

11:39 PM Sep 14, 2019 | Team Udayavani |

ಬೆಂಗಳೂರು: ಹಿರಿಯ ಐಪಿಎಸ್‌ ಅಧಿಕಾರಿ ರಾಘವೇಂದ್ರ ಔರಾದ್ಕರ್‌ ವರದಿ ಅನುಸಾರ ಸೇವಾ ಹಿರಿತನದಡಿ ಪೊಲೀಸರ ವೇತನ ಪರಿಷ್ಕರಿಸಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯ ಪೊಲೀಸರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಆದೇಶದ ಪ್ರಕಾರ ಆಗಸ್ಟ್‌ನಿಂದಲೇ ವೇತನ ಪರಿಷ್ಕರಣೆ ಆಗಿದೆ. ಈಗಾಗಲೇ ಸಿಬ್ಬಂದಿ ಖಾತೆಗೆ ವೇತನ ಜಮೆ ಆಗಿರುವುದರಿಂದ ಪರಿಷ್ಕರಣೆಯಿಂದ ಬಾಕಿ ಇರುವ ವೇತನ ಪಾವತಿ ಬರುವ ತಿಂಗಳು ಆಗಲಿದೆ.

Advertisement

ಇನ್ಸ್‌ಪೆಕ್ಟರ್‌, ಕಾನ್ಸ್‌ಸ್ಟೇಬಲ್‌, ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಹಾಗೂ ನಾನ್‌ ಐಪಿಎಸ್‌ ಅಧಿಕಾರಿಗಳ ಸಂಬಳವನ್ನು ಸೇವಾ ಹಿರಿತನದಡಿ ಪರಿಷ್ಕರಣೆಗೊಳಿಸಿ ಆದೇಶಿಸಲಾಗಿದೆ. 2018ರ 6ನೇ ವೇತನ ಆಯೋಗದ ಶಿಫಾರಸುಗಳ ಜತೆಗೆ ಸೇವಾ ಹಿರಿತನದ ಆಧಾರದ ಮೇಲೆ ಪೊಲೀಸರ ವೇತನ ಪರಿಷ್ಕೃತಗೊಂಡಿದೆ.

ಅದರಂತೆ ಕಾನ್ಸ್‌ಸ್ಟೇಬಲ್‌ಗ‌ಳ ವೇತನ 2,100ರಿಂದ 5,650 ರೂ.ವರೆಗೆ ಏರಿಕೆ ಆಗಿದೆ. ಹೆಡ್‌ ಕಾನ್ಸ್‌ಸ್ಟೇಬಲ್‌ಗ‌ಳಿಗೆ 4,150ರಿಂದ 7,500 ರೂ.ವರೆಗೆ, ಎಎಸ್‌ಐಗಳಿಗೆ 2,700ರಿಂದ 5,600 ರೂ., ಇನ್ಸ್‌ಪೆಕ್ಟರ್‌ಗಳಿಗೆ 2,200ರಿಂದ 5,700, ನಾನ್‌ ಐಪಿಎಸ್‌ಗಳಿಗೆ 3,300ರಿಂದ 2,500 ರೂ.ವರೆಗೆ ವೇತನ ಹೆಚ್ಚಳ ಆಗಿದೆ.

ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ವೇತನ ಆದೇಶದಲ್ಲಿ ಸಬ್‌ಇನ್ಸ್‌ಪೆಕ್ಟರ್‌ ಮತ್ತು ಡಿವೈಎಸ್ಪಿ, ಎಸಿಪಿ ದರ್ಜೆ ಹುದ್ದೆಯನ್ನು ಕೈಬಿಡಲಾಗಿದೆ. ಆದರೆ, ಈ ಅಧಿಕಾರಿಗಳ ವೇತನವನ್ನೂ ಸೇವಾ ಹಿರಿತನ ಆಧಾರದಡಿ ವಿಭಾಗಿಸಬೇಕಿದೆ. ಕೆಲ ದಿನಗಳಲ್ಲಿ ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆಯೇ ವೇತನ ಶ್ರೇಣಿ ಏರಿಕೆಯಾಗಿದ್ದರೂ ಹುದ್ದೆಗಳ ಅನುಸಾರ ವೇತನ ಪರಿಷ್ಕರಣೆಯಲ್ಲಿ ತುಸು ಗೊಂದಲ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಔರಾದ್ಕರ್‌ ವರದಿ ಜಾರಿ ಆಗಿರಲಿಲ್ಲ. ಈಗ ಗೊಂದಲ ನಿವಾರಣೆಯಾಗಿದ್ದು, ಪೊಲೀಸರಿಗೆ ನೆಮ್ಮದಿ ತಂದಿದೆ.

Advertisement

ವೇತನ ಶ್ರೇಣಿ ವಿವರ
ಹುದ್ದೆ ಪರಿಷ್ಕರಣೆಗೆ ಮುನ್ನ ಪರಿಷ್ಕೃತ ವೇತನ
ಕಾನ್ಸ್‌ಸ್ಟೇಬಲ್‌ 21,400-42,000 23,500-47,650
ಹೆಡ್‌ಕಾನ್ಸ್‌ಸ್ಟೇಬಲ್‌ 23,500-47,650 27,650-56,400
ಎಎಸ್‌ಐ 27,650-52,650 30,350-58,250
ಇನ್ಸ್‌ಪೆಕ್ಟರ್‌ 40,900-80,100 43,100-83,900
ನಾನ್‌ ಐಪಿಎಸ್‌ 67,550-1,04,600 70,850-1,09,600

Advertisement

Udayavani is now on Telegram. Click here to join our channel and stay updated with the latest news.

Next