Advertisement

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

06:26 PM Apr 23, 2024 | Team Udayavani |

ಧಾರವಾಡ: ಭಯೋತ್ಪಾದನೆ ಮತ್ತು ಕೋಮುವಾದ ಒಂದೇ ನಾಣ್ಯದ ಎರಡು ಮುಖ. ಇದನ್ನು ಬೇರು ಸಹಿತ ಕಿತ್ತು ಹಾಕುವ ಪ್ರಯತ್ನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಡುತ್ತಿದ್ದಾರೆ. ಆದರೆ ಇದನ್ನು ಪ್ರೋತ್ಸಾಹಿಸುವ ಕೆಲಸವನ್ನು ಕಾಂಗ್ರೆಸ್​ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಮೇಲೆ ಹಿಂದು ಸಮಾಜದ ಜನರ ಮೇಲೆ ಹಲ್ಲೆ ಮಾಡುವುದು ಸಾಮಾನ್ಯವಾಗಿದೆ. ಜೈ ಶ್ರೀರಾಮ ಎನ್ನುವವರ ಮೇಲೆ, ಹನುಮಾನ ಚಾಲೀಸ್​ ಹಾಕಿದ್ದಕ್ಕೆ ಹೀಗೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡಿದವರ ಮೇಲೆ ಪ್ರಕರಣ ಸಹ ದಾಖಲಾಗುತ್ತಿಲ್ಲ ಎಂದು ದೂರಿದರು.

ಹಳೇ ಹುಬ್ಬಳ್ಳಿ ಪೊಲೀಸ್​ ಠಾಣೆ ಎದುರು ಪಿಎಫ್​ಐ, ಎಸ್​ಡಿಪಿಐ ಜತೆಗೂಡಿ ಗಲಾಟೆ ಮಾಡಿದ್ದರು. ದಂಗೆಯಲ್ಲಿ ಬಂಧನವಾದವರ ಬಿಡುಗಡೆ ಮಾಡಿಸಲು ನಿಂತಿದ್ದರು. ದಲಿತ ಸಮುದಾಯಕ್ಕೆ ಸೇರಿದ ಅಖಂಡ ಶ್ರೀನಿವಾಸ ಮನೆ ಮೇಲೆ ದಾಳಿ ಆಗಿತ್ತು. ಆ ಆರೋಪಿಗಳನ್ನು ಸಹ ಬಿಡುಗಡೆ ಮಾಡಿಸಿದರು. ಪಾಕಿಸ್ತಾನ್​ ಜಿಂದಾಬಾದ್​ ಎಂದಾಗಲೂ ಎಂದಿಲ್ಲ ಎಂದು ವಾದಿಸಿದ ಕಾಂಗ್ರೆಸ್​ ನಾಯಕರು, ಕೊನೆಗೆ ಒಬ್ಬರನ್ನು ಬಂಧಿಸಿದರು. ದಿನೇ ದಿನೇ ಕೊಲೆ, ಗಲಭೆ ನಡೆಯುತ್ತಲೇ ಇವೆ. ನಮ್ಮ ಪರ ಸರ್ಕಾರವಿದೆ ಎಂಬ ಮನೋಭಾವ ಅಪರಾಧಿಗಳಿಗೆ ಬಂದಿದೆ. ಈ ರೀತಿಯ ಪ್ರವೃತ್ತಿ ನಮ್ಮ ಸಂಸತಿ ಮೇಲೆ ಪ್ರಹಾರ ನಡೆದಿದೆ ಎಂದರು.

ತಮ್ಮ ಚಿಹ್ನೆಯ ಧ್ವಜದಲ್ಲಿ ಕೇಸರಿ ಇದೆ ಎಂದು ರಾಹುಲ್​ ಗಾಂಧಿ ಅದನ್ನು ಬಿಟ್ಟಿದ್ದಾರೆ. ತಮ್ಮ ಧ್ವಜ ಬಿಟ್ಟು, ಮುಸ್ಲಿಂ ಲೀಗ್​ನ ಹಸಿರು ಧ್ವಜ ಹಿಡಿದು ನಾಮಪತ್ರ ಸಲ್ಲಿಸಲು ಹೋಗಿದ್ದಾರೆ. ತಮ್ಮ ಧ್ವಜ, ಚಿಹ್ನೆಯನ್ನೇ ಕೈ ಬಿಟ್ಟಿದ್ದಾರೆ. ಇದೊಂದು ದುರಂತ ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next