Advertisement

ನಳ್ಳಿ ನೀರಿನ ದರ ಹೆಚ್ಚಳ; 3,000 ಲೀಟರ್‌ ವರೆಗೆ ಹೆಚ್ಚಳವಿಲ್ಲ

08:02 PM Dec 19, 2019 | Sriram |

ಕಾಸರಗೋಡು: 2014 ರ ಬಳಿಕ ಜಲ ಪ್ರಾಧಿಕಾರ ನಳ್ಳಿ ನೀರಿನ ದರ ಮತ್ತೆ ಹೆಚ್ಚಿಸುವ ತೀರ್ಮಾನ ಕೈಗೊಂಡಿದೆ. ಇದೇ ಸಂದರ್ಭದಲ್ಲಿ ಬಿಪಿಎಲ್‌ ವಿಭಾಗ ದವರಿಗೆ 15,000 ಲೀ. ಮತ್ತು ಇತರ ವಿಭಾಗದವರಿಗೆ 3,000 ಲೀ. ನೀರು ಹಿಂದಿನಂತೆ ನೀಡಲಾಗುವುದು. ಅನಂತರ ಬಳಸುವ ನೀರಿನ ದರ ಹೆಚ್ಚಿಸಲಾಗುವು ದೆಂದು ಜಲಪ್ರಾಧಿಕಾರ ತಿಳಿಸಿದೆ.

Advertisement

ಜಲಪ್ರಾಧಿಕಾರ ಈಗ 3,000 ಕೋಟಿ ರೂ.ಗಳ ನಷ್ಟದಲ್ಲಿದೆ. ಒಂದು ಲೀಟರ್‌ ನೀರಿನಲ್ಲಿ ಪ್ರಾಧಿಕಾರ 0.4 ಪೈಸೆ ಮಾತ್ರವೇ ವಸೂಲಿ ಮಾಡುತ್ತಿದೆ. ಕುಡಿಯಲು, ಆಹಾರ ಮತ್ತಿತರ ಅಗತ್ಯಗಳಿಗೆ ಮಾತ್ರವೇ ಜಲಪ್ರಾಧಿಕಾರದ ನೀರು ಬಳಸಬೇಕೆಂದು ನಿಬಂಧನೆ ಇದ್ದರೂ, ಕೆಲವರು ತಮ್ಮ ವಾಹನ ಗಳನ್ನು ತೊಳೆಯಲು ಮತ್ತು ಹೂದೋಟಕ್ಕೂ ಜಲಪ್ರಾಧಿ ಕಾರದ ನೀರನ್ನು ಬಳಸುತ್ತಿರು ವುದನ್ನು ಪತ್ತೆಹಚ್ಚಿದೆ. ಜಲ ಪ್ರಾಧಿಕಾರ ರಾಜ್ಯದಲ್ಲಿ ಒಟ್ಟು 25 ಲಕ್ಷ ನೀರಿನ ಸಂಪರ್ಕ ನೀಡಿದೆ. ಮುಂದಿನ ವರ್ಷ ಇನ್ನೂ 10 ಲಕ್ಷದಷ್ಟು ಹೆಚ್ಚುವರಿ ಸಂಪರ್ಕ ಒದಗಿಸಲು ತೀರ್ಮಾನಿಸಿದೆ.
ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚು ನೀರು ಬಳಸುವವರಿಂದ ಹೆಚ್ಚು ದರ ವಸೂಲಿ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ.

ವಿದ್ಯುತ್‌ ಬಳಕೆ ವತಿಯಿಂದ ಮಾತ್ರ ಪ್ರಾಧಿಕಾರ ಪ್ರತೀ ತಿಂಗಳು ತಲಾ 23 ಕೋಟಿ ರೂ. ವಿದ್ಯುತ್‌ ಬಿಲ್‌ ಪಾವತಿಸಬೇಕಾಗಿ ಬರುತ್ತಿದೆ. ಇತ್ತೀಚೆಗೆ ವಿದ್ಯುತ್‌ ದರ ಪಾವತಿಸಬೇಕಾಗಿ ಬಂದಿದೆ. ಇದರಿಂದ ಮಾತ್ರವಾಗಿ ಪ್ರತಿ ವರ್ಷ 60 ಕೋಟಿ ರೂ. ಹೆಚ್ಚುವರಿ ಆರ್ಥಿಕ ಹೊರೆ ಪ್ರಾಧಿಕಾರಕ್ಕೆ ಉಂಟಾಗಿದೆ. ಹೀಗೆ ಪ್ರಾಧಿಕಾರಕ್ಕೆ ವರ್ಷಕ್ಕೆ 3.25 ಕೋಟಿ ರೂ.ಗಳ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಈ ನಷ್ಟವನ್ನು ಸರಿದೂಗಿಸಲು ನೀರಿನ ದರ ಹೆಚ್ಚಿಸುವ ತೀರ್ಮಾನ ಪ್ರಾಧಿಕಾರ ಕೈಗೊಂಡಿದೆ. ಇದರಂತೆ ಪ್ರತೀ ತಿಂಗಳ 15000 ಲೀಟರ್‌ ನೀರ್‌ ಉಪಯೋಗಿಸುವವರಿಂದ ಒಂದು ಲೀಟರ್‌ ನೀರಿನ ದರವನ್ನು 4 ರೂ.ನಿಂದ 6 ರೂ. ಗೇರಿಸಲು ಪ್ರಾಧಿಕಾರ ತೀರ್ಮಾನಿಸಿದೆ.

ಅದಕ್ಕಿಂತ ಕಡಿಮೆ ನೀರು ಉಪಯೋಗಿಸುವ ಬಿಪಿಎಲ್‌ ವಿಭಾಗದವರಿಗೆ ದರ ಹೆಚ್ಚಳಗೊಳಿಸದಿರುವ ತೀರ್ಮಾನವನ್ನೂ ಪ್ರಾಧಿಕಾರ ಕೈಗೊಂಡಿದೆ. ರಾಜ್ಯ ಸಚಿವ ಸಂಪುಟ ಚರ್ಚೆ ಬಳಿಕವಷ್ಟೇ ನೀರಿನ ದರ ಏರಿಸುವ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next