Advertisement
ಅವರು ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಒಳ ಮೀಸಲಾತಿ ಬೇಡಿಕೆ ನಮ್ಮ ಆಗಿನ ಸಮ್ಮಿಶ್ರ ಸರ್ಕಾರದ ಆರಂಭದಲ್ಲೂ ಇತ್ತು, ಒಳಮೀಸಲಾತಿ ಸದಾಶಿವ ಆಯೋಗದ ವರದಿ ಸರ್ಕಾರದಲ್ಲಿ ಇದ್ದದ್ದು ನಿಜ ಆದರೆ ನಾಲ್ಕು ವರ್ಷಗಳು ತೆಗೆದುಕೊಳ್ಳದ ತೀರ್ಮಾನ ರಾಜ್ಯ ಸರ್ಕಾರ ಕೊನೆ ಕ್ಯಾಬಿನೆಟ್‌ನಲ್ಲಿ ತೆಗೆದುಕೊಳ್ಳೋದು ಇದು ಏನು ಎಂಬ ಪ್ರಶ್ನೆ ಉದ್ಬವವಾಗುತ್ತದೆ, ಅಂದರೇ ಇದು ಮಾಡಿದಂಗೂ ಇರಬೇಕು ಹಾಗೂ ಆಗದಂಗೂ ಇರಬೇಕು ಇದು ಚುನಾವಣಾ ಗಿಮಿಕ್ ಎಂದು ತಿಳಿಸಿದ ಅವರು ಇದನ್ನು ಕಾನೂನಾತ್ಮಕವಾಗಿ ನೋಡೊದಾದ್ರೇ ಒಳಮೀಸಲಾತಿಯನ್ನು ಯಾವ ರೀತಿ ಸಮರ್ಥನೆ ಮಾಡಿಕೊಳ್ತಾರೆ ಗೊತ್ತಿಲ್ಲಾ ಇದು ಮುಂದೆ ಬರೋ ದಿನಗಳಲ್ಲಿ ತಿರ್ಮಾನ ಆಗುತ್ತೇ ಎಂದು ತಿಳಿಸಿದರು.
Related Articles
Advertisement
ರಾಹುಲ್ ಗಾಂಧಿ ಅನರ್ಹತೆ ಪ್ರಜಾತಂತ್ರ ವಿರೋಧಿ;-
ಕಾಂಗ್ರೆಸ್ ಪಕ್ಷದ ಪ್ರಮುಖ ಯುವ ನಾಯಕ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಿದ ಕ್ರಮವನ್ನು ತೀವ್ರವಾಗಿ ಖಂಡಿಸಿದ ಡಾ.ಜಿ.ಪರಮೇಶ್ವರ ಇದು ಪ್ರಜಾತಂತ್ರ ವಿರೋಧಿ ಕ್ರಮವಾಗಿದೆ, ಗುಜರಾತ್ ರಾಜ್ಯದ ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿ ಅವರನ್ನು ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರೆಂದು ಪರಿಗಣಿಸಿ ಎರಡು ವರ್ಷಗಳ ಶಿಕ್ಷೆ ವಿಧಿಸಿದ ಬೆನ್ನ ಹಿಂದೆಯೇ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿರುವುದು ತರಾತುರಿಯ ಕ್ರಮವಾಗಿದೆ, ಇದರ ಹಿಂದೆ ಬಿಜೆಪಿ ನಾಯಕರ ಷಡ್ಯಂತ್ರ ಅಡಗಿದೆ ಎಂದರು. ಅವರು ನನಗೆ ನ್ಯಾಯಾಲಯ ಮತ್ತು ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ, ಗೌರವಗಳಿವೆ, ನ್ಯಾಯಾಲಯ ತೀರ್ಪು ನೀಡಿದ ತಕ್ಷಣವೇ ಅವರ ಲೋಕಸಭಾ ಸದಸ್ಯತ್ವ ರದ್ದುಪಡಿಸಿರುವುದು ಸರಿಯೇ, ನ್ಯಾಯಾಲಯವೇ ತಿಂಗಳ ಕಾಲ ಸಮಯ ನೀಡಿರುವಾಗ ಲೋಕಸಭೆಯ ಕಾರ್ಯದರ್ಶಿ ಉತ್ಪಲ್‌ಕುಮಾರ್ ಅವರು ಆತುರಾತುರವಾಗಿ ರಾಹುಲ್‌ಗಾಂಧಿ ಅವರನ್ನು ಅನರ್ಹಗೊಳಿಸಿ ಅದೇಶ ಹೊರಡಿಸಿರುವುದು ಸಮಂಜಸವೇ ಎಂಬುದನ್ನು ಬಿಜೆಪಿಯ ನಾಯಕರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.