ಗಳಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಉಡುಪಿಯ ಎರಡು ಕಾಲೇಜುಗಳು ದಾಖಲೆ ಸೇರ್ಪಡೆ ಸಾಧಿಸಿವೆ.
Advertisement
ಎರಡೂ ಜಿಲ್ಲೆಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಸ್ತುತ ವರ್ಷ 6,958 ಮಂದಿ ದಾಖಲಾಗಿದ್ದು, ಕಳೆದ ವರ್ಷ ಇದು 6,810 ಆಗಿತ್ತು. ದ.ಕ.ದಲ್ಲಿ 2018-19ರಲ್ಲಿ 3,762 ಮಂದಿ ದಾಖಲಾಗಿದ್ದರೆ ಈ ಬಾರಿ 3,851 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಉಡುಪಿಯಲ್ಲಿ ಕಳೆದ ವರ್ಷ 3,048 ಮಂದಿ ಸೇರಿದ್ದರು, ಈ ಬಾರಿ ಅದು 3,107ಕ್ಕೇರಿದೆ.
ಉಭಯ ಜಿಲ್ಲೆಗಳಲ್ಲಿ 31 ಸರಕಾರಿ ಪ್ರ. ದರ್ಜೆ ಕಾಲೇಜುಗಳಿವೆ. ಒಟ್ಟು ದಾಖಲಾತಿ ಹೆಚ್ಚಳವಾಗಿದೆಯಾದರೂ 22 ಕಾಲೇಜುಗಳಲ್ಲಿ ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ. ಹೆಚ್ಚಳ ಆಗಿರು ವುದು 9 ಕಾಲೇಜುಗಳಲ್ಲಿ ಮಾತ್ರ. ಮಂಗಳೂರಿನ ಬಲ್ಮಠ ಸರಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ 2018-19ರಲ್ಲಿ 290 ದಾಖಲಾತಿ ಇದ್ದರೆ ಈ ವರ್ಷ 298 ಆಗಿದೆ. ಹಂಪನಕಟ್ಟೆ ವಿವಿ ಕಾಲೇಜಿನಲ್ಲಿ ಕಳೆದ ವರ್ಷ 499- ಈ ವರ್ಷ 520, ಉಪ್ಪಿನಂಗಡಿ ಸರಕಾರಿ ಪ.ಪೂ. ಕಾಲೇಜಿನಲ್ಲಿ ಕಳೆದ ವರ್ಷ 271- ಈ ವರ್ಷ 276, ಪುಂಜಾಲಕಟ್ಟೆ ಸ.ಪ್ರ.ದ. ಕಾಲೇಜಿನಲ್ಲಿ ಕಳೆದ ವರ್ಷ 172- ಈ ವರ್ಷ 202, ವಿಟ್ಲ ಸ.ಪ್ರ.ದ. ಕಾಲೇಜಿನಲ್ಲಿ ಕಳೆದ ವರ್ಷ 94- ಈ ವರ್ಷ 136 ದಾಖಲಾತಿ ಆಗಿದೆ. ಉಡುಪಿಯ ತೆಂಕನಿಡಿಯೂರು ಕಾಲೇಜಿನಲ್ಲಿ ಕಳೆದ ವರ್ಷ 260- ಈ ವರ್ಷ 330, ಹೆಬ್ರಿ ಕಾಲೇಜಿನಲ್ಲಿ ಕಳೆದ ವರ್ಷ 144- ಈ ವರ್ಷ 198, ಹಿರಿಯಡ್ಕ ಕಾಲೇಜಿನಲ್ಲಿ ಕಳೆದ ವರ್ಷ 113- ಈ ವರ್ಷ 123, ಕುಂದಾಪುರ ಕೋಟೇಶ್ವರ ಕಾಲೇಜಿನಲ್ಲಿ ಕಳೆದ ವರ್ಷ 398- ಈ ವರ್ಷ 487 ಮಂದಿ ದಾಖಲಾಗಿದ್ದಾರೆ.
Related Articles
ಬಿಸಿಎ, ಬಿಎಸ್‌ಡಬ್ಲ್ಯುಗೆ ನಿರಾಸಕ್ತಿ ಬಹುತೇಕ ಕಾಲೇಜುಗಳಲ್ಲಿ ವಾಣಿಜ್ಯ ಪದವಿಗೆ ಬಹುಬೇಡಿಕೆ. ಉದ್ಯೋಗಾವಕಾಶ ಹೆಚ್ಚಳ ಇದಕ್ಕೆ ಕಾರಣ ಎನ್ನುತ್ತಾರೆ ಪ್ರಾಂಶುಪಾಲರು. ಬಳಿಕ ಕ್ರಮವಾಗಿ ಕಲೆ, ವಿಜ್ಞಾನ ಪದವಿ, ಬಿಬಿಎಗೆ ಬೇಡಿಕೆ ಇದೆ. ಉಭಯ ಜಿಲ್ಲೆಯ ಸ.ಪ್ರ.ದ. ಕಾಲೇಜುಗಳ ಪೈಕಿ ನಾಲ್ಕರಲ್ಲಿ ಬಿಸಿಎ, ಐದರಲ್ಲಿ ಬಿಎಸ್‌ಡಬ್ಲ್ಯು ಕೋರ್ಸ್ ಇದ್ದರೂ ವಿದ್ಯಾರ್ಥಿಗಳು ನಿರಾಸಕ್ತಿ ತೋರಿಸುತ್ತಿದ್ದು, ಕಡಿಮೆ ದಾಖಲಾತಿ ಆಗಿದೆ ಎನ್ನುತ್ತಾರೆ ಆಯಾ ಸಂಸ್ಥೆಗಳ ಸಿಬಂದಿ.
Advertisement
ದಾಖಲೆಯ ಸೇರ್ಪಡೆಕೋಟೇಶ್ವರ ಸ.ಪ್ರ.ದ. ಕಾಲೇಜು ಮತ್ತು ಉಡುಪಿಯ ತೆಂಕನಿಡಿ ಯೂರು ಕಾಲೇಜಿನಲ್ಲಿ ಈ ವರ್ಷ ದಾಖಲೆ ಸಂಖ್ಯೆಯ ಸೇರ್ಪಡೆಯಾಗಿದೆ. ಕಳೆದ ವರ್ಷಕ್ಕಿಂತ ಕ್ರಮವಾಗಿ 89 ಮತ್ತು 70 ವಿದ್ಯಾರ್ಥಿಗಳು ಹೆಚ್ಚಳವಾಗಿ ದ್ದಾರೆ. ಸರಕಾರಿ ಕಾಲೇಜಿನಲ್ಲಿ ದಾಖಲಾತಿ ಇಷ್ಟೊಂದು ಹೆಚ್ಚಳವಾಗಿರುವುದು ಖುಷಿ ತಂದಿದೆ ಎನ್ನುತ್ತಾರೆ ಪ್ರಾಂಶುಪಾಲರು. ಏರಿಕೆಗೆ ಕ್ರಮ
ಸರಕಾರಿ ಕಾಲೇಜುಗಳಲ್ಲಿ ಎಲ್ಲ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಪ್ರಸ್ತುತ ಬಿಕಾಂ ಪದವಿಗೆ ಜಾಸ್ತಿ ಬೇಡಿಕೆ ಇದೆ. ಆದರೆ ಕೆಲವು ವರ್ಷಗಳಿಂದೀಚೆಗೆ ಕಲಾ ಪದವಿಗೆ ಪ್ರವೇಶ ತುಂಬಾ ಇಳಿಕೆಯಾಗಿದೆ. ಇದಕ್ಕೆ ಕಾರಣ ನೋಡಿಕೊಂಡು ಹೆಚ್ಚಳಕ್ಕೆ ಶ್ರಮಿಸಲಾಗುವುದು.
– ಡಾ| ಅಪ್ಪಾಜಿ ಗೌಡ,
ಜಂಟಿ ನಿರ್ದೇಶಕರು,
ಕಾಲೇಜು ಶಿಕ್ಷಣ ಇಲಾಖೆ, ದ.ಕ. – ಧನ್ಯಾ ಬಾಳೆಕಜೆ