Advertisement
ನಗರದ ಮುನಿಸಿಪಲ್ ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಳವಡಿಸಿಕೊಂಡಲ್ಲಿ ಆರೋಗ್ಯದ ಬಗ್ಗೆ ನಿರ್ಭಿತಿಯಿಂದ ಜೀವನ ನಡೆಸಲು ಈ ಯೋಗವು ಸಹಕಾರಿಯಾಗಲಿದೆ. ಹೀಗಾಗಿ ಆರೋಗ್ಯ ಪೂರ್ಣ ಬದುಕಿಗೆ ಯೋಗ ಅತ್ಯುತ್ತಮ ಸಾಧನವಾಗಲಿದೆ ಎಂದರು.
Related Articles
Advertisement
ಜಿಪಂ ಸಿಇಒ ಡಾ| ಕೆ.ವಿ.ರಾಜೇಂದ್ರ ಮಾತನಾಡಿ, ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯು ಅತ್ಯಂತ ಲವಲವಿಕೆಯಿಂದ ಇರುತ್ತಾನೆ. ಹೀಗಾಗಿ ಎಲ್ಲರೂ ನಿರಂತರವಾಗಿ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು. ಸದೃಢ ಆರೋಗ್ಯಕ್ಕೆ ಯೋಗ ಸಾಧನವು ಬಹುಮುಖ್ಯವಾಗಿದೆ ಎಂದರು. ಜಿಪಂ ಅಧ್ಯಕ್ಷೆ ಸಿ.ಭಾರತಿ ಮಾತನಾಡಿದರು.
ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ನಿರ್ಮಲಾಜಿಯವರು ಯೋಗಾಭ್ಯಾಸದ ಕುರಿತು ಉಪನ್ಯಾಸ ನೀಡಿದರು. ನಂತರ ಮೈದಾನದಲ್ಲಿ ಕೆಲಹೊತ್ತು ಯೋಗಾಭ್ಯಾಸ ನಡೆಯಿತು. ಶಿಬಿರದಲ್ಲಿ ಡಿಸಿ, ಎಸ್ಪಿ, ಸಿಇಒ, ಜಿಪಂ ಅಧ್ಯಕ್ಷೆ, ಉಪಾಧ್ಯಕ್ಷರು ಮೇಯರ್, ಉಪಮೇಯರ್ ಸೇರಿದಂತೆ ಈಶ್ವರೀಯ ವಿವಿಯ ನೂರಾರು ಯೋಗ ಸಾಧಕರು, ವಿದ್ಯಾರ್ಥಿಗಳೊಂದಿಗೆ ಕುಳಿತು ಯೋಗಾಭ್ಯಾಸದಲ್ಲಿ ತೊಡಗಿದ್ದರು.
ಉಪಾಧ್ಯಕ್ಷೆ ಪಿ.ದೀನಾ ಮಂಜುನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಎನ್.ಬಸರೆಡ್ಡಿ, ಮೇಯರ್ ಆರ್.ಸುಶೀಲಾಬಾಯಿ, ಉಪಮೇಯರ್ ಉಮಾದೇವಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕಿ ಪಿ.ಶೋಭಾ, ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಹಮತ್ ಉಲ್ಲಾ, ಡಾ| ಅನಿಲಕುಮಾರ್, ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ಡಾ|ವಂದನಾ ಗಾಳಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿ ಬಿ.ಕೆ.ನಿರ್ಮಲಾಜಿ, ಜಿಲ್ಲೆಯ ಆಯಾ ತಾಲೂಕಿನ ನೋಡಲ್ ಅಧಿಕಾರಿಗಳಾದ ಡಾ| ವಿಜಯಕುಮಾರ, ಡಾ| ರೂಪಸಿಂಗ್ ರಾಥೋಡ, ಡಾ| ವಿಜಯೇಂದ್ರಚಾರ್, ಡಾ| ಕೊಟ್ರೇಶ, ಡಾ| ಶಶಿಧರ ರಾಮದುರ್ಗ, ಡಾ| ರಾಜೇಶ್ವರಿ, ಡಾ| ಗುರುಬಸವರಾಜ, ಡಾ| ಉಮೇಶ ಕಾಖಂಡಕಿ ಇದ್ದರು. ಯೋಗ ತರಬೇತುದಾರರಾದ ರಾಜೇಂದ್ರರೆಡ್ಡಿ, ಉಷಾ ಹಾಗೂ ಜಗದೀಶ ಅವರು ನಾನಾ ಭಂಗಿಯ ಯೋಗಾಭ್ಯಾಸ ತಿಳಿಸಿಕೊಟ್ಟರು. ನಂತರ ಮೈದಾನದಲ್ಲಿ ಯೋಗ ಜಾಗೃತಿ ಶಿಬಿರದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಜಾಥಾವು ಮೈದಾನದಿಂದ ಡಾ| ರಾಜ್ ರಸ್ತೆ, ಗಡಿಗಿ ಚನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಕೆ.ಸಿ.ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು.