Advertisement

ಡಿಜಿಟಲ್‌ ಪಾವತಿ ಭಾರೀ ಏರಿಕೆ

12:12 AM Apr 30, 2021 | Team Udayavani |

ಮುಂಬಯಿ: ಕೋವಿಡ್ ಸೋಂಕು ಆರಂಭವಾದ ಬಳಿಕ ದೇಶದಲ್ಲಿ ಡಿಜಿಟಲ್‌ ಪಾವತಿ, ವಿಶೇಷವಾಗಿ ರಖಂ ಕ್ಷೇತ್ರದಲ್ಲಿ ಭಾರೀ ಪ್ರಗತಿ ಕಂಡಿದೆ ಎಂದು ಆರ್‌ಬಿಐ ಅಂಕಿಅಂಶಗಳು ಹೇಳಿವೆ.

Advertisement

ಸೋಂಕಿನ ಆತಂಕ ಮತ್ತು ನಿರ್ವಹಣೆ ಸುಲಭ ಎಂಬ ಕಾರಣಕ್ಕೆ ಕಳೆದ ಒಂದು ವರ್ಷದಲ್ಲಿ ಅನೇಕ ಮಂದಿ ಡಿಜಿಟಲ್‌ ಪಾವತಿಯನ್ನು ನೆಚ್ಚಿಕೊಂಡಿದ್ದಾರೆ. ನೆಫ್ಟ್, ಎನ್‌ಇಟಿಸಿ, ಬಿಬಿಪಿಎಸ್‌ಗಳು ಹಿಂದಿನ ವರ್ಷಕ್ಕೆ ಹೋಲಿಸಿದರೆ ಗಮನಾರ್ಹ ಪ್ರಗತಿ ದಾಖಲಿಸಿವೆ.

ಇತರ ರಖಂ ಪಾವತಿ ವೇದಿಕೆಗಳಾದ ಯೂನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌ (ಯುಪಿಐ), ಇಮ್ಮಿಡಿಯೇಟ್‌ ಪೇಮೆಂಟ್‌ ಸರ್ವೀಸ್‌ (ಐಎಂಪಿಎಸ್‌) ಮತ್ತು ನ್ಯಾಶನಲ್‌ ಅಟೊಮೇಟೆಡ್‌ ಕ್ಲಿಯರಿಂಗ್‌ ಹೌಸ್‌ (ಎನ್‌ಎಸಿಎಚ್‌)ಗಳಲ್ಲಿ 2021ರಲ್ಲಿ ಪಾವತಿ ಮೊತ್ತ ಮತ್ತು ಪ್ರಮಾಣ ಎರಡೂ ಇಮ್ಮಡಿಯಾಗಿವೆ ಎಂದು ಆರ್‌ಬಿಐ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next