Advertisement

ಆರ್‌ಟಿಇ ಸೀಟುಗಳಿಗೆ ಬೇಡಿಕೆ ಹೆಚ್ಚಳ

12:41 AM Mar 20, 2022 | Team Udayavani |

ಬೆಂಗಳೂರು: ಕೊರೊನಾದಿಂದ ಮಧ್ಯಮ ಮತ್ತು ಕೆಳ ವರ್ಗದವರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಆರ್‌ಟಿಇ ಸೀಟುಗಳಿಗೆ ಶೇ.25ರಷ್ಟು  ಬೇಡಿಕೆ ಹೆಚ್ಚಾಗಿದೆ.

Advertisement

ಪ್ರಸಕ್ತ ಸಾಲಿನಲ್ಲಿ 18,555 ಸೀಟುಗಳಿದ್ದು, 20,414 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ   1,276 ಸೀಟುಗಳಿಗೆ 3,989 ಅರ್ಜಿಗಳು ಸಲ್ಲಿಕೆಯಾಗಿವೆ. ಅನಂತರದ ಸ್ಥಾನದಲ್ಲಿ ಮೈಸೂರು ಜಿಲ್ಲೆಯ 928 ಸೀಟುಗಳಿಗೆ 2,600 ಅರ್ಜಿಗಳು ಸಲ್ಲಿಕೆಯಾಗಿವೆ.

2021-22ರಲ್ಲಿ ಲಭ್ಯವಿದ್ದ 14,036 ಸೀಟುಗಳಿಗೆ 11,531 ಅರ್ಜಿ ಸಲ್ಲಿಕೆಯಾಗಿ, 3,070 ಸೀಟುಗಳು ಭರ್ತಿಯಾಗಿದ್ದವು. 2020-21ರಲ್ಲಿ 17,453 ಸೀಟುಗಳಿಗೆ 11,026 ಅರ್ಜಿ  ಸಲ್ಲಿಕೆಯಾಗಿ 3,700 ಸೀಟು  ಭರ್ತಿಯಾಗಿದ್ದವು.  ಮಧ್ಯಮ ವರ್ಗದವರ ಆದಾಯಕ್ಕೆ ಬಲವಾದ ಹೊಡೆತ ಬಿದ್ದಿರುವ ಕಾರಣ ಖಾಸಗಿ ಶಾಲೆಗಳ ದುಬಾರಿ ಶುಲ್ಕ ಪಾವತಿಸಲು ಸಾಧ್ಯವಾಗದಿರುವುದು ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ.

2 ವರ್ಷ  ಶಾಲೆಗಳು ಸರಿಯಾಗಿ ನಡೆದಿರಲಿಲ್ಲ. ಜತೆಗೆ  ಪೋಷಕರಿಗೂ ಆರ್ಥಿಕವಾಗಿ ಸಮಸ್ಯೆಯಾಗಿರುವ ಕಾರಣ ಆರ್‌ಟಿಇ ಸೀಟುಗಳಿಗೆ ಬೇಡಿಕೆ ಹೆಚ್ಚಾಗಿರಬಹುದು ಎಂದು ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇ ಶಕ  ಪ್ರಸನ್ನಕುಮಾರ್‌ ಎಂ. ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next