Advertisement

ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಿ

04:02 PM Feb 23, 2020 | Suhan S |

ಚನ್ನಪಟ್ಟಣ: ಪರಿಸರ ನಾಶದಿಂದಾಗುವ ದುಷ್ಪರಿಣಾಮಗಳನ್ನು ಸಮಾಜಕ್ಕೆ ತಿಳಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡ ಬೇಕಾಗಿದೆ ಎಂದು ಮುಖ್ಯ ಶಿಕ್ಷಕ ಎಂ.ಕೆ. ಶಶಿಕುಮಾರ್‌ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಯಲಚಿಪಾಳ್ಯ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ರಾಂಪುರದ ನೇಗಿಲ ಯೋಗಿ ಸಾಂಸ್ಕೃತಿಕ ಟ್ರಸ್ಟ್‌ ವತಿಯಿಂದ “ಕಾಡನ್ನು ಬೆಂಕಿಯಿಂದ ರಕ್ಷಿಸಿ- ಅರಣ್ಯ ಸಂರಕ್ಷಣೆ ನಮ್ಮ ಹೊಣೆ’ ಎಂಬ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳಲ್ಲಿ ಪರಿಸರ ಜಾಗೃತಿ ಭಾವ ಬಿತ್ತಿದರೆ, ಭವಿಷ್ಯದ ದಿನಗಳಲ್ಲಿ  ಉತ್ತಮ ಫಲ ನೀಡುತ್ತದೆ ಎಂದರು.

ಯುವ ಕವಿ ಮಂಜೇಶ್‌ ಬಾಬು ಮಾತನಾಡಿ, ಕಿಡಿಗೇಡಿಗಳು ಹಚ್ಚುವ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವಿರಾರು ಎಕರೆ ಅರಣ್ಯ ಪ್ರದೇಶ ನಾಶವಾಗುತ್ತಿವೆ. ಪರಿಸರವೆಂದರೆ ಬರಿ ಹಸಿರಲ್ಲ, ಪ್ರಾಣಿ-ಪಕ್ಷಿಗಳು ಸಹ ಮನುಷ್ಯನ ಬದುಕಿನಲ್ಲಿ ಯಾವ ಪಾತ್ರ ವಹಿಸುತ್ತದೆ ಎಂಬುದನ್ನು ಮಕ್ಕಳಿಗೆ ತಿಳಿಸಬೇಕು. ಅನೇಕ ವನ್ಯ ಮೃಗ-ಪಕ್ಷಿಗಳು ವಿನಾಶದ ಅಂಚಿಗೆ ತಲುಪುತ್ತಿರುವುದು ಅತ್ಯಂತ ಶೋಚನೀಯ ಸ್ಥಿತಿ. ಅನೇಕ ಬಗೆಯ ಔಷಧಿಯ ಗುಣಗಳುಳ್ಳ ಸಸ್ಯಸಂಪತ್ತು ನಾಶವಾಗುತ್ತಿರುವುದು ಕಳವಳ ಪಡ ಬೇಕಾದ ಸಂಗತಿ ಎಂದರು.

ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್‌ನ ಸಂಸ್ಥಾಪಕ ಕಾರ್ಯದರ್ಶಿ ವಿಜಯ್‌ ರಾಂಪುರ, ಜಾನಪದ ಗಾಯಕ ಚೌ.ಪು. ಸ್ವಾಮಿ, ಶಿಕ್ಷಕ ಮುತ್ತಯ್ಯ ಹಾಜರಿದ್ದರು. ಯಲಚಿಪಾಳ್ಯ ಗ್ರಾಮದ ಬೀದಿಗಳಲ್ಲಿ ಪರಿಸರ ಪ್ರೇಮ ಮೂಡಿಸುವ ಘೋಷಣೆಗಳೊಂದಿಗೆ ಜಾಥಾ ನಡೆಸಲಾಯಿತು. ಗಾಯಕ ಚೌ.ಪು.ಸ್ವಾಮಿ ಜಾಗೃತಿ ಗೀತೆಗಳನ್ನು ಪ್ರಸ್ತುತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next