Advertisement

ವಿಶ್ವದ ಮೊದಲ ನಾಸಿಕ ಲಸಿಕೆ “ಇನ್‌ಕೊವ್ಯಾಕ್‌’ಈಗ ಸಾರ್ವಜನಿಕರಿಗೆ ಲಭ್ಯ

12:19 AM Jan 27, 2023 | Team Udayavani |

ಹೊಸದಿಲ್ಲಿ: ಕೊರೊನಾ ನಿಗ್ರಹಕ್ಕಾಗಿ ಭಾರತ್‌ ಬಯೋಟೆಕ್‌ ಅಭಿವೃದ್ಧಿಪಡಿಸಿದ ವಿಶ್ವದ ಮೊದಲ ನಾಸಿಕ ಲಸಿಕೆ “ಇನ್‌ಕೊವ್ಯಾಕ್‌’ ಗುರುವಾರದಿಂದ ಸಾರ್ವಜನಿಕರಿಗೆ ಲಭ್ಯವಾಗಿದೆ.

Advertisement

ಸರಕಾರಕ್ಕೆ ಈ ಲಸಿಕೆ ಪ್ರತೀ ಡೋಸ್‌ಗೆ 325 ರೂ.ಗಳಲ್ಲಿ ಲಭ್ಯವಿರಲಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ 800 ರೂ.ಗೆ ಸಿಗಲಿದೆ. ಒಂದು ಡೋಸ್‌ ಲಸಿಕೆ ಪಡೆದ 28 ದಿನಗಳ ಬಳಿಕ 2ನೇ ಡೋಸ್‌ ಪಡೆಯಬೇಕು. ಬೂಸ್ಟರ್‌ ಡೋಸ್‌ ಲಸಿಕೆ ಪಡೆದವರು ನಾಸಿಕ ಲಸಿಕೆ ಪಡೆಯುವಂತಿಲ್ಲ ಎಂದು ಕಂಪೆನಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next