Advertisement
ಪಾರ್ಟ್ ಟೈಂ ಹಾಗೂ ಫುಲ್ ಟೈಂಈ ಎರಡೂ ವೇಳೆಗಳಲ್ಲೂ ಉದ್ಯಮಕ್ಕೆ ಕಾಮಿಕ್‌ನಲ್ಲಿ ಅವಕಾಶವಿದೆ. ನಿಮ್ಮ ಕೆಲಸ ಬೇರೆಯಾಗಿದ್ದು, ಕಾರ್ಟೂನ್ ಬಿಡಿಸುವುದು ನಿಮ್ಮ ಹವ್ಯಾಸವಾಗಿದ್ದರೆ ಕಾಮಿಕ್ ರೈಟಿಂಗ್‌ನ್ನು ಪಾರ್ಟ್ ಟೈಂ ಉದ್ಯೋಗವಾಗಿ ಆಯ್ಕೆ ಮಾಡಿಕೊಳ್ಳಬಹುದು. ಆಸಕ್ತಿಯನ್ನೇ ಉದ್ಯೋಗವನ್ನಾಗಿ ಮಾಡಿಕೊಳ್ಳುವವರಾದರೆ ಫುಲ್‌ಟೈಂ ಕೆಲಸವಾಗಿಯೂ ಪರಿವರ್ತಿಸಿಕೊಳ್ಳಬಹುದು. ಯಾವುದಾದರೂ ಒಂದು ಸಂಸ್ಥೆಯಿಂದ ಕಾಮಿಕ್ ಆರ್ಟ್‌ನಲ್ಲಿ ಪದವಿ ಪಡೆದುಕೊಂಡು ಒಂದು ಸಂಸ್ಥೆ ಆರಂಭಿಸಬಹುದು. ದಿನನಿತ್ಯದ ಓದಿನ ಜತೆಗೆ ಹೊಸತನ್ನು ಹುಡುಕುವ ಹವ್ಯಾಸವಿದ್ದರೆ ಈ ಉದ್ಯಮದಲ್ಲಿ ಯಶಸ್ಸು ಖಂಡಿತ.
ಚಿತ್ರ ಬಿಡಿಸುವ ಹವ್ಯಾಸವಿರುವ ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಆದಾಯ ಮೂಲವೇ ಸರಿ. ಉತ್ತಮ ಕಾಮಿಕ್‌ಗಳನ್ನು ಪತ್ರಿಕೆಗಳಿಗೆ ಕೊಡುವುದು, ಇನ್ನೊಬ್ಬರ ಚಿತ್ರ ಬಿಡಿಸುವುದರ ಮೂಲಕ ಹಣ ಸಂಪಾದನೆ ಮಾಡಬಹುದು. ಕಾಮಿಕ್ ಬುಕ್‌ಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ. ಅವುಗಳನ್ನು ಓದುವವರ ಸಂಖ್ಯೆಯೂ ಅಧಿಕವಾಗಿದೆ. ಆ ಕಾರಣಕ್ಕೆ ಈ ಕ್ಷೇತ್ರದಲ್ಲಿ ಉದ್ಯೋಗದ ಅವಕಾಶವೂ ಅಧಿಕವಾಗಿದೆ. ಕಾಲೇಜಿಗೆ ಹೋಗುತ್ತಾ ಒಂದಷ್ಟು ಹಣ ಸಂಪಾದಿಸಬೇಕೆಂದು ಬಯಸುವ ವಿದ್ಯಾರ್ಥಿಗಳಲ್ಲಿ ಚಿತ್ರಕಲೆಯಲ್ಲಿ ಆಸಕ್ತಿ ಇದ್ದು, ವ್ಯಂಗಚಿತ್ರಗಳನ್ನು ಚಿತ್ರಿಸುವ ಉತ್ಸಾಹವಿದ್ದರೆ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು
Related Articles
ಕಾಮಿಕ್ ಆರ್ಟ್ ಎಂಬುದು ಒಂದು ಡಿಗ್ರಿಯಾಗಿದ್ದು ಇದರಲ್ಲಿ ಡಿಜಿಟಲ್ ಹಾಗೂ ನಾರ್ಮಲ್ ಕಾಮಿಕ್‌ನ ಬಗ್ಗೆ ಕಲಿಯಲು ಅವಕಾಶಗಳಿವೆ. ಅಥವಾ ಯಾವುದೇ ಡಿಗ್ರಿ ಪಡೆದರೂ ಕಾಮಿಕ್ ರಚನೆಯಲ್ಲಿ ತೊಡಗಿಸಿಕೊಳ್ಳಬಹುದು. ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ಆಸಕ್ತಿ ಹಾಗೂ ಚಿತ್ರ ಬಿಡಿಸುವ ಕಲೆ. ಯಾವುದೇ ಒಂದು ವಿಷಯವನ್ನು ನೋಡಿದಾಗಲೂ ಅದನ್ನು ಹೊಸತಾಗಿ ಹೇಗೆ ಬರೆಯಬಹುದು ಎಂದು ತಿಳಿದುಕೊಂಡವನು ಉತ್ತಮ ಕಾಮಿಕ್ ಬರಹಗಾರನಾಗಲು ಸಾಧ್ಯ. ಕಾಮಿಕ್ ಆರ್ಟ್ ಡಿಗ್ರಿ ಪ್ರೊಫೆಶನಲ್ ಡಿಗ್ರಿಯಾಗಿದ್ದು, ಕೆಲಸ ಲಭಿಸುತ್ತದೆ.
Advertisement
– ಸುಶ್ಮಿತಾ ಶೆಟ್ಟಿ ಸಿರಿಬಾಗಿಲು