Advertisement

ರಿಟರ್ನ್ಸ್ ಇ-ವೆರಿಷಿಕೇಷನ್‌ ಅವಧಿ 30 ದಿನಕ್ಕೆ ಇಳಿಕೆ

08:08 PM Aug 01, 2022 | Team Udayavani |

ನವದೆಹಲಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ ಬಳಿಕ ಅದನ್ನು ಇ-ವೆರಿಫಿಕೇಷನ್‌ಗೆ ಒಳಪಡಿಸುವ ಸಮಯದ ಮಿತಿಯನ್ನು 120ರಿಂದ 30 ದಿನಗಳಿಗೆ ಇಳಿಕೆ ಮಾಡಲಾಗಿದೆ.

Advertisement

ಈ ಬಗ್ಗೆ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಜು.29ರಂದೇ ಆದೇಶ ಹೊರಡಿಸಿತ್ತು.

ಅದರಂತೆ ರಿಟರ್ನ್ಸ್ ಸಲ್ಲಿಕೆ ಮಾಡಿದ ದಿನದಿಂದ 30 ದಿನಗಳು ಎಂದು ಮಂಡಳಿ ತಿಳಿಸಿದೆ. ಒಂದು ವೇಳೆ ಜೂ.29 ಕ್ಕಿಂತ ಮೊದಲೇ ರಿಟರ್ನ್ಸ್ ಅನ್ನು ಸಲ್ಲಿಕೆ ಮಾಡಿದ್ದರೆ ಅದನ್ನು 120 ದಿನಗಳ ಒಳಗಾಗಿ ಇ-ವೆರಿಫಿಕೇಷನ್‌ಗೆ ಒಳಪಡಿಸಬೇಕಾಗುತ್ತದೆ ಎಂದು ಸಿಬಿಡಿಟಿಯ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ರಿಟರ್ನ್ಸ್ ಸಲ್ಲಿಕೆ ಮಾಡಿದ ಬಳಿಕ ಅದನ್ನು ಇ-ವೆರಿಫಿಕೇಷನ್‌ಗೆ ಒಳಪಡಿಸದೇ ಇದ್ದರೆ, ಸಲ್ಲಿಕೆ ಪೂರ್ತಿಯಾಗುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next