Advertisement

ಐಟಿಆರ್‌ ಸಲ್ಲಿಕೆಗೆ ಇಂದು ಕೊನೇ ದಿನ; ರಿಟರ್ನ್ಸ್ ಫೈಲ್‌ ಮಾಡದಿದ್ದರೆ ಏನಾಗುತ್ತೆ ಗೊತ್ತಾ?

07:43 PM Jul 30, 2022 | Team Udayavani |

ನವದೆಹಲಿ: ನೀವಿನ್ನೂ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಿಲ್ಲವೇ? ಇನ್ನು ನಿಮಗೆ ಉಳಿದಿರುವುದು ಇವತ್ತೂಂದೇ ದಿನ! 2021-22ರ ಹಣಕಾಸು ವರ್ಷದ ಐಟಿಆರ್‌ ಫೈಲಿಂಗ್‌ನ ಜು.31ರ ಗಡುವು ವಿಸ್ತರಣೆ ಮಾಡುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿರುವ ಕಾರಣ, ರಿಟರ್ನ್ಸ್ ಸಲ್ಲಿಕೆಗೆ ಭಾನುವಾರವೇ ಕಡೇ ದಿನವಾಗಿದೆ. ಒಂದು ವೇಳೆ ಭಾನುವಾರ ನಿಮಗೆ ರಿಟರ್ನ್ಸ್ ಸಲ್ಲಿಕೆ ಸಾಧ್ಯವಾಗದೇ ಇದ್ದರೆ ಏನು ಮಾಡಬೇಕು?

Advertisement

ಹೆಚ್ಚುವರಿ ಶುಲ್ಕದೊಂದಿಗೆ ಸಲ್ಲಿಕೆ
ಜು.31ರ ಡೆಡ್‌ಲೈನ್‌ನೊಳಗೆ ಸಲ್ಲಿಕೆ ಮಾಡಲು ಆಗದವರಿಗೆ ಇದೇ ವರ್ಷದ ಡಿ.31ರೊಳಗೆ ಸಲ್ಲಿಸಲು ಅವಕಾಶವಿದೆ. ಆದರೆ, ನೀವು ಕಡ್ಡಾಯವಾಗಿ “ವಿಳಂಬ ಶುಲ್ಕ’ವನ್ನು ಪಾವತಿಸಬೇಕಾಗುತ್ತದೆ. ಇದು ನಿಮಗೆ ಸ್ವಲ್ಪಮಟ್ಟಿಗೆ ಹೊರೆಯಾಗುವುದರ ಜೊತೆಗೆ, ಆರ್ಥಿಕವಾಗಿ ಪ್ರತಿಕೂಲ ಪರಿಣಾಮವೂ ಬೀರಬಹುದು.

ವಿಳಂಬ ಶುಲ್ಕವೆಷ್ಟು?
– ನಿಮ್ಮ ವಾರ್ಷಿಕ ಆದಾಯ 5 ಲಕ್ಷ ರೂ.ವರೆಗೆ ಇದ್ದರೆ 1,000 ರೂ.
– ಆದಾಯ 5 ಲಕ್ಷ ರೂ.ಗಳಿಗಿಂತ ಹೆಚ್ಚಿದ್ದರೆ ವಿಳಂಬ ಶುಲ್ಕ 5,000 ರೂ.
– ಒಟ್ಟಾರೆ ಆದಾಯವು ಮೂಲ ವಿನಾಯ್ತಿ ಮಿತಿಯೊಳಗೆ ಇದ್ದರೆ, ವಿಳಂಬ ಶುಲ್ಕ ಪಾವತಿಸಬೇಕಾಗಿಲ್ಲ

ಬೇರೇನು ಪರಿಣಾಮ?
– ಒಮ್ಮೆ ರಿಟರ್ನ್ಸ್ ಸಲ್ಲಿಕೆ ಮಾಡಿದರೆ, ಮರುಪಾವತಿ ಆಗುವವರೆಗೂ ಮಾಸಿಕ ಶೇ.0.5ರಷ್ಟು ಬಡ್ಡಿಗೆ ತೆರಿಗೆದಾರನು ಅರ್ಹನಾಗಿರುತ್ತಾರೆ. ಆದರೆ, ವಿಳಂಬವಾಗಿ ರಿಟರ್ನ್ಸ್ ಸಲ್ಲಿಸುವವನಿಗೆ ಈ ಬಡ್ಡಿಯನ್ನು ನೀಡಲಾಗುವುದಿಲ್ಲ
– ಜತೆಗೆ, ವಿಳಂಬವಾಗಿ ಐಟಿಆರ್‌ ಫೈಲಿಂಗ್‌ ಮಾಡುವಾಗ ಯಾವುದಾದರೂ ಹಳೆಯ ತೆರಿಗೆ ಬಾಕಿಯಿದ್ದರೆ ಅದಕ್ಕೂ ನೀವೇ ದಂಡದ ರೂಪದಲ್ಲಿ ಬಡ್ಡಿ ಪಾವತಿಸಬೇಕು.

4.5 ಕೋಟಿ ಸಲ್ಲಿಕೆ
ಪ್ರಸಕ್ತ ವರ್ಷ 4.5 ಕೋಟಿಗೂ ಅಧಿಕ ಐಟಿಆರ್‌ ಫೈಲಿಂಗ್‌ ಆಗಿದ್ದು, ಈ ಪೈಕಿ 3.41 ಕೋಟಿ ರಿಟರ್ನ್ಸ್ ಅನ್ನು ದೃಢೀಕರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ ಮಾಹಿತಿ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next