Advertisement
ಈ ಹೊಸ ಪೋರ್ಟಲ್‌ನಲ್ಲಿ, ಆದಾಯ ತೆರಿಗೆ ರಿಟರ್ನ್ಸ್ ಮತ್ತು ಮರುಪಾವತಿ ಸಮಸ್ಯೆಯ ತ್ವರಿತ ಪ್ರಕ್ರಿಯೆಯೊಂದಿಗೆ ಹಲವಾರು ವಿಶೇಷತೆಗಳು ಇರಲಿದೆ.
- ಒಂದೇ ಡ್ಯಾಶ್ ಬೋರ್ಡ್ ನಲ್ಲಿ ಎಲ್ಲಾ ವಹಿವಾಟುಗಳು ಮತ್ತು ಅಪ್ ಲೋಡ್ ಗಳು ಅಥವಾ ಬಾಕಿ ಇರುವ ಕಾರ್ಯಗಳು ಕಾಣಸಿಗುತ್ತದೆ. ಆದ್ದರಿಂದ ತೆರಿಗೆದಾರರು ತಮ್ಮ ಎಲ್ಲಾ ಅಗತ್ಯತೆಗಳನ್ನು ಒಂದೇ ಪುಟದಲ್ಲಿ ನೋಡಬಹುದಾಗಿದೆ.
- ಐಟಿಆರ್ ನನ್ನು ಸ್ವಂತವಾಗಿ ಭರ್ತಿ ಮಾಡಲು, ತೆರಿಗೆದಾರರಿಗೆ ತಮ್ಮ ಐಟಿಆರ್ 1, 4 /ಆನ್‌ಲೈನ್ ಅಥವಾ ಆಫ್ ಲೈನ್, ಐಟಿಆರ್ 2/ ಆಫ್ ಲೈನ್ ತುಂಬಲು ಸಹಾಯ ಮಾಡಲು ಕೆಲವು ಪ್ರಶ್ನೆಗಳೊಂದಿಗೆ ಐಟಿಆರ್ ರೆಡಿ ಸಾಫ್ಟ್ ವೇರ್ ಇರುತ್ತದೆ. ಈ ಸಾಫ್ಟ್‌ವೇರ್ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಐಟಿಆರ್ 3, 5, 6, 7 ಗೆ ಶೀಘ್ರದಲ್ಲೇ ಇಂತಹ ಸೌಲಭ್ಯ ನೀಡಲಾಗುವುದು.
- ಸಂಬಳ, ಮನೆ ಆಸ್ತಿ, ವ್ಯವಹಾರ / ವೃತ್ತಿ ಸೇರಿದಂತೆ ತಮ್ಮ ಆದಾಯದ ಕೆಲವು ವಿವರಗಳನ್ನು ಒದಗಿಸಲು ತಮ್ಮ ಪ್ರೊಫೈಲ್ ನನ್ನು ಪೂರ್ವಭಾವಿಯಾಗಿ ನವೀಕರಿಸಲು ಸಾಧ್ಯವಾಗುತ್ತದೆ. ಇದನ್ನು ಅವರ ಐಟಿಆರ್ ಪ್ರಿ-ಫೈಲಿಂಗ್ ನಲ್ಲಿ ಬಳಸಬಹುದಾಗಿದೆ
- ಇನ್ನು ಆದಾಯ ತೆರಿಗೆಯ ಹೊಸ ವೆಬ್ ಸೈಟ್ ನಲ್ಲಿ ತೆರಿಗೆದಾರರ ಪ್ರಶ್ನೆಗಳಿಗೆ ಉತ್ತರಿಸಲು ಹೊಸ ಕಾಲ್ ಸೆಂಟರ್ ಕೂಡ ಇರಲಿದ್ದು, ಆಧುನಿಕ ಸೌಲಭ್ಯಗಳಾದ ವಿವರವಾದ FAQ ಗಳು, ಬಳಕೆದಾರರ ಕೈಪಿಡಿ, ವೀಡಿಯೊಗಳು ಮತ್ತು ಚಾಟ್‌ಬಾಟ್ / ಲೈವ್ ಏಜೆಂಟ್ ಸಹ ಒದಗಿಸಲಾಗುವುದು.
- ಹೊಸ ಪೋರ್ಟಲ್‌ನಲ್ಲಿ ಹೊಸ ಆನ್ ಲೈನ್ ತೆರಿಗೆ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಮತ್ತು ಅದರಲ್ಲಿ ಅನೇಕ ಹೊಸ ಪಾವತಿ ಆಯ್ಕೆಗಳನ್ನು ನೀಡಲಾಗುವುದು. ಇವುಗಳಲ್ಲಿ ನೆಟ್ ಬ್ಯಾಂಕಿಂಗ್, ಯುಪಿಐ, ಕ್ರೆಡಿಟ್ ಕಾರ್ಡ್ ಮತ್ತು ಆರ್‌ಟಿಜಿಎಸ್ / ನೆಫ್ಟ್ ಪಾವತಿ ಆಯ್ಕೆಗಳಿವೆ.
- ತೆರಿಗೆಗೆ ಸಂಬಂಧಿಸಿದ ಕೆಲಸವನ್ನು ಮೊಬೈಲ್ ಆ್ಯಪ್ ಮೂಲಕವೂ ಮಾಡಲು ಸಾಧ್ಯವಾಗುತ್ತದೆ.