Advertisement

ತೆರಿಗೆ ಮಾಹಿತಿದಾರರಿಗೆ ಹೆಚ್ಚಿನ ಪುರಸ್ಕಾರ

09:15 AM Apr 07, 2018 | Team Udayavani |

ಹೊಸದಿಲ್ಲಿ: ಆದಾಯ ತೆರಿಗೆ ಇಲಾಖೆಯು ತೆರಿಗೆದಾರರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದ್ದು, ತೆರಿಗೆ ತಪ್ಪಿಸಿರುವ ಹಾಗೂ ಬೇನಾಮಿ ವಹಿವಾಟುಗಳ ಬಗ್ಗೆ ಮಾಹಿತಿ ನೀಡುವವರಿಗೆ ಕೊಡುವ ಪುರಸ್ಕಾರದ ಮೊತ್ತವನ್ನು ಹೆಚ್ಚಿಸಲು ನಿರ್ಧರಿಸಿದೆ. 2015ರಲ್ಲಿ ಜಾರಿಗೆ ಬಂದ ನಿಯಮದ ಪ್ರಕಾರ ಮಾಹಿತಿದಾರರಿಗೆ 1 ಲಕ್ಷ ರೂ. ಪುರಸ್ಕಾರ ನೀಡಲಾಗುತ್ತಿದೆ. ನಂತರದಲ್ಲಿ 15 ಲಕ್ಷ ರೂ.ಗಿಂತ ಹೆಚ್ಚು ತೆರಿಗೆಯನ್ನು ವಸೂಲಿ ಮಾಡಿದ್ದಲ್ಲಿ, ಶೇ.10ರಷ್ಟು ಮೊತ್ತವನ್ನು ಮಾಹಿತಿ ನೀಡಿದವರಿಗೆ ಪುರಸ್ಕಾರ ರೂಪದಲ್ಲಿ ನೀಡಲಾಗುತ್ತಿದೆ. ಆದರೆ ಹಲವು ಪ್ರಕರಣಗಳಲ್ಲಿ ಮಾಹಿತಿದಾರರು ಹಣ ಪಡೆಯಲು ತುಂಬಾ ಸಮಯದವರೆಗೆ ಕಾಯಬೇಕಾಗುತ್ತದೆ. ಇದರಿಂದಾಗಿ ಬಹುತೇಕರು ಮಾಹಿತಿ ನೀಡಲು ಮುಂದೆ ಬರುವುದಿಲ್ಲ. ಹೀಗಾಗಿ ಪುರಸ್ಕಾರದ ಮೊತ್ತವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next