ಹೊಸದಿಲ್ಲಿ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ಚಾಂದಿನಿ ಚೌಕ್ ಪ್ರದೇಶದಲ್ಲಿರುವ ಖಾಸಗಿ ಕಂಪೆನಿಯ ಮೇಲೆ ದಾಳಿ ನಡೆಸಿ 300 ಕ್ಕೂ ಹೆಚ್ಚು ಲಾಕರ್‌ಗಳನ್ನು ಪರಿಶೀಲಿಸಿ 35 ಕೋಟಿಯಷ್ಟು ಕಪ್ಪು ಹಣವನ್ನು ಜಪ್ತಿ ಮಾಡಿದ್ದಾರೆ.
300 ಲಾಕರ್‌ಗಳ ಪೈಕಿ 140 ಲಾಕರ್‌ಗಳನ್ನು ತೆರೆದು ಪರಿಶೀಲನೆ ನಡೆಸಿದಾಗ ಅಪಾರ ಪ್ರಮಾಣದ ಕಪ್ಪು ಹಣ ಪತ್ತೆಯಾಗಿದೆ.
ತಿಂಗಳ ಕಾಲ ನಡೆಸಿದ ತನಿಖೆಯಿಂದ, ದಾಖಲೆಯಿಲ್ಲದ 30 ಲಾಕರ್‌ಗಳನ್ನು ಪತ್ತೆ ಹಚ್ಚಲಾಗಿದ್ದು ಅವುಗಳಲ್ಲಿ 10 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ.
ದಾಳಿಗೊಳಗಾದ ಫಕೀರ್ ಚಂದ್ ಲಾಕರ್ ಮತ್ತು ವಾಲ್ಟ್ ಪ್ರೈ.ಲಿ ಕಂಪೆನಿ ಐಟಿ ಆರೋಪಗಳನ್ನು ತಳ್ಳಿಹಾಕಿದ್ದು, ನಾವು ಆರ್‌ಬಿಐ ಮಾರ್ಗದರ್ಶನವನ್ನು ಅನುಸರಿಸಿದ್ದೇವೆ ಎಂದಿದೆ.
ಹಲವು ಲಾಕರ್‌ಗಳನ್ನು ಕೆವೈಸಿ ಇಲ್ಲದೆ ಮಂಜೂರು ಮಾಡಲಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.