Advertisement

2020ರ ಆರ್ಥಿಕ ವರ್ಷದ ಕ್ಯಾಲೆಂಡರ್ ನಲ್ಲಿದೆ ತೆರಿಗೆ ಪಾವತಿದಾರರಿಗೆ ಹಲವು ಮಾಹಿತಿಗಳು

10:06 AM Jan 07, 2020 | Hari Prasad |

ಹೊಸದಿಲ್ಲಿ: ಆದಾಯ ತೆರಿಗೆ ಇಲಾಖೆಯ 2020ರ ಕ್ಯಾಲೆಂಡರ್‌ ಅನ್ನು ಬಿಡುಗಡೆ ಮಾಡಿದ್ದು, ತೆರಿಗೆ ಸಂಬಂಧಿತ ಪ್ರಮುಖ ದಿನಾಂಕಗಳ ಮಾಹಿತಿ ವಿವರಗಳನ್ನು ನೀಡಿದೆ. ತೆರಿಗೆ ಪಾವತಿದಾರರಿಗೆ ಆದಾಯ ಸಲ್ಲಿಸಲು ಈ ಕ್ಯಾಲೆಂಡರ್‌ ನೆರವಾಗಲಿದ್ದು, ಪ್ರಮುಖ ದಿನಾಂಕಗಳ ಮಾರ್ಗದರ್ಶನ ನೀಡಲಿದೆ.

Advertisement

ತೆರಿಗೆ ರಿರ್ಟನ್ಸ್‌ನ ಸುಲಭ ಮಾರ್ಗಗಳ ಜತೆಗೆ ಐಟಿಆರ್‌ ಅನ್ನು ಸಲ್ಲಿಸುವ ಪ್ರಕ್ರಿಯೆಯ ಕುರಿತು ಮಾಹಿತಿ ಇದ್ದು, 2019ರ ಡಿಸೆಂಬರ್‌ 31ಕ್ಕೆ ಕೊನೆಗೊಂಡ ತ್ತೈಮಾಸಿಕದಲ್ಲಿ ಬಾಕಿ ಇರುವ ಟಿಸಿಎಸ್‌ ಮತ್ತು ಟಿಡಿಎಸ್‌ ಮರುಪಾವತಿಸಲು ಸಹ ಈ ಕ್ಯಾಲೆಂಡರ್‌ ನೆನಪಿಸುತ್ತದೆ.

ಆರ್ಥಿಕ ಕ್ಷೇತ್ರ ವಹಿವಾಟು ಆಧರಿತ ಪ್ರಮುಖ ದಿನಾಂಕಗಳು
– ಮಾರ್ಚ್‌ 31- ಮೌಲ್ಯಮಾಪನ ಪೂರ್ಣಗೊಳ್ಳದ 2019-20ರ ವಾರ್ಷಿಕ ವರ್ಷದಲ್ಲಿ ತಡವಾಗಿ ಅಥವಾ ಪರಿಷ್ಕೃತ ಆದಾಯ ಸಲ್ಲಿಸುವ ಕೊನೆಯ ದಿನಾಂಕ.
– ಮೇ 15- 2020ರ ಮಾರ್ಚ್‌ 31ಕ್ಕೆ ಕೊನೆಗೊಂಡ ತ್ತೈಮಾಸಿಕದಲ್ಲಿ ಟಿಸಿಎಸ್‌ ತ್ತೈಮಾಸಿಕ.
– ಮೇ 31- 2019-20ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಹಣಕಾಸಿನ ವಹಿವಾಟಿನ ಹೇಳಿಕೆಗಳು
– ಜೂನ್‌ 15- 2019-20ನೇ ಹಣಕಾಸು ವರ್ಷದಲ್ಲಿ ಪಾವತಿಸಿದ ಸಂಬಳ ಮತ್ತು ತೆರಿಗೆಯ ಕಡಿತಕ್ಕೆ ಸಂಬಂಧಿಸಿದಂತೆ ನೌಕರರಿಗೆ ಟಿಡಿಎಸ್‌ ಪ್ರಮಾಣಪತ್ರ.
– 2021-22ಕ್ಕೆ ಮುಂಗಡ ತೆರಿಗೆಯ ಮೊದಲ ಕಂತು
– ಜುಲೈ 24- ಆದಾಯ ತೆರಿಗೆ ದಿನಾಚರಣೆ
– ಜುಲೈ 31- (ಎ) ಕಾರ್ಪೊರೇಟ್‌ ಅಥವಾ (ಬಿ) ಕಾರ್ಪೊರೇಟ್‌ ರಹಿತ ಎಲ್ಲ ಮೌಲ್ಯಮಾಪನಗಳ ವಾರ್ಷಿಕ ವರ್ಷ 2020-21ರ ಐಟಿಆರ್‌ ಖಾತೆ ಲೆಕ್ಕಪರಿಶೋಧನೆ
– ಸೆಪ್ಟೆಂಬರ್‌ 15- ವಾರ್ಷಿಕ ವರ್ಷ 2021-22ಕ್ಕೆ ಮುಂಗಡ ತೆರಿಗೆಯ ಎರಡನೇ ಕಂತು
– ಸೆಪ್ಟೆಂಬರ್‌ 30- (ಎ) ಕಾರ್ಪೊರೇಟ್‌ ಅಥವಾ (ಬಿ) ಕಾರ್ಪೊರೇಟ್‌ ರಹಿತ ಮೌಲ್ಯಮಾಪಕದ ವಾರ್ಷಿಕ ವರ್ಷ 2020-21ರ ಐಟಿಆರ್‌ ಪುಸ್ತಕಗಳ ಲೆಕ್ಕ ಪರಿಶೋಧನೆ
– ನವೆಂಬರ್‌ 30- ಅಂತಾರಾಷ್ಟ್ರೀಯ ಅಥವಾ ನಿರ್ದಿಷ್ಟ ದೇಶಿಯ ವಹಿವಾಟು ಹೊಂದಿರುವ ಮೌಲ್ಯಮಾಪಕರಿಗೆ ಸಂಬಂಧಿಸಿದ ವಾರ್ಷಿಕ ವರ್ಷ 2020-21ರ ಲೆಕ್ಕಪರಿಶೋಧನಾ ವರದಿ ಮತ್ತು IqBì ದಿನ
– ಡಿಸೆಂಬರ್‌ 15- ವಾರ್ಷಿಕ ವರ್ಷ 2021-22ಕ್ಕೆ ಮುಂಗಡ ತೆರಿಗೆಯ ಎರಡನೇ ಕಂತು ದಿನ

Advertisement

Udayavani is now on Telegram. Click here to join our channel and stay updated with the latest news.

Next