ಮುಂಡರಗಿ: ಲಾಕ್‌ಡೌನ್ ಸಡಿಲಿಕೆ ನಂತರ ಸರ್ಕಾರ ಮಂಗಳವಾರದಿಂದ ಬಸ್ ಸಂಚಾರ ಆರಂಭಿಸಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರು ಬರುತ್ತಿಲ್ಲ. ಬಸ್ ಸಂಚಾರ ಆರಂಭಗೊಂಡು ಐದು ದಿನವಾದರೂ ಮುಂಡರಗಿ ಘಟಕದ ಬಸ್‌ಗಳು ಬೆರಳೆಣಿಕೆ ಪ್ರಯಾಣಿಕರನ್ನು ಹತ್ತಿಸಿಕೊಂಡು ಸಂಚರಿಸುತ್ತಿವೆ.
ಇಲ್ಲಿನ ಬಸ್ ನಿಲ್ದಾಣದಲ್ಲಿ ವಿವಿಧ ಮಾರ್ಗಗಳಿಗೆ ಬಸ್ ಓಡಿಸಲು ಬಸ್ ನಿಲ್ಲಿಸಿದ್ದರೂ ಪ್ರಯಾಣಿಕರು ಬರುತ್ತಿಲ್ಲ. ಹೀಗಾಗಿ ಚಾಲಕ, ನಿರ್ವಾಹಕರು ಪ್ರಯಾಣಿಕ ರಿಗಾಗಿ ಕಾಯ್ದು ಕುಳಿತುಕೊಳ್ಳುವಂತಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಿಗೆ ಪ್ರಯಾಣಿಕರೇ ಬರುತ್ತಿಲ್ಲ. ಮುಂಡರಗಿ ಘಟಕದಿಂದ 25 ಬಸ್‌ಗಳನ್ನು ಓಡಿಸಲು ನಿರ್ಧರಿಸಲಾಗಿದೆ. ಚಾಲಕ- ನಿರ್ವಾಹಕರು ಇದ್ದರೂ ಪ್ರಯಾಣಿಕರ ಕೊರತೆಯಿಂದ ಬಸ್‌ಗಳು ನಿಲ್ದಾಣದಲ್ಲೇ ನಿಲ್ಲುತ್ತಿವೆ. ಶನಿವಾರ 25 ಬಸ್‌ಗಳಲ್ಲಿ 19 ಬಸ್‌ಗಳು ಮಾತ್ರ ಓಡಾಟ ನಡೆಸಿವೆ.
ಗದಗ-ಮುಂಡರಗಿ ಮಾರ್ಗದಲ್ಲಿ ನೂರಕ್ಕೂ ಹೆಚ್ಚು ಸಲ ಓಡಾಡುತ್ತಿದ್ದ ಬಸ್‌ಗಳು ಬರೀ 10 ಪ್ರಯಾಣಿಕರನ್ನು ಹತ್ತಿಸಿಕೊಂಡು 8 ಸಲ ಮಾತ್ರ ಓಢುತ್ತಿವೆ. ಕೊಪ್ಪಳಕ್ಕೆ ಎರಡು ಸಲ ಮಾತ್ರ ಓಡಾಟ ನಡೆಸಿದ್ದು, ಅದು ಕೂಡಾ ಕಡಿಮೆ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಿವೆ. ಹಮ್ಮಿಗಿಗೆ ಒಂದೇ ಬಸ್ ಹೋಗಿದ್ದರೂ ಪ್ರಯಾಣಿಕರ ಕೊರತೆ ಕಾಡಿದೆ. ಹೆಬ್ಟಾಳ ಗ್ರಾಮಕ್ಕೆ ಹೋಗಿದ್ದ ಬಸ್‌ನಲ್ಲಿ ಒಬ್ಬನೇ ಪ್ರಯಾಣಿಕನಿದ್ದ. ಕೇವಲ ಹತ್ತು ರೂ. ಕಲೆಕ್ಷನ್ ಆಗಿದ್ದರೆ, ಬರುವಾಗ 102 ರೂ. ಕಲೆಕ್ಷನ್ ಆಗಿದೆ. ಹೂವಿನಹಡಗಲಿಗೆ ಎರಡು ಸಲ ಬಸ್ ಓಡಾಡಿದ್ದರೂ ಒಂದು ಸಲ 8 ಜನ, ಮತ್ತೂಮ್ಮೆ 6 ಜನ ಪ್ರಯಾಣಿಸಿದ್ದಾರೆ. ಇನ್ನು ರಾಜಧಾನಿ ಬೆಂಗಳೂರಿಗೆ ಬೆಳಗ್ಗೆ ಎರಡು ಬಸ್ ಬಿಡಲಾಗಿದ್ದು, ಒಂದು ಬಸ್‌ನಲ್ಲಿ ಮೂವತ್ತು ಪ್ರಯಾಣಿಕರು, ಇನ್ನೊಂದರಲ್ಲಿ 25 ಜನ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಒಟ್ಟಾರೆ ಐದು ದಿನವಾದರೂ ಇಲ್ಲಿನ ಮುಂಡರಗಿ ಘಟಕಕ್ಕೆ ನಿರೀಕ್ಷಿತ ಪ್ರಯಾಣಿಕರು, ಆದಾಯ ಬರುತ್ತಿಲ್ಲ.
ಆದಾಯಕ್ಕಿಂತಲೂ ನಷ್ಠವೇ ಅಧಿಕ: ಕಳೆದ ಮಂಗಳವಾರದಿಂದ ಪ್ರಾರಂಭವಾಗಿರುವ ಪಟ್ಟಣದ ಸಾರಿಗೆ ಸಂಸ್ಥೆ ಘಟಕದ ಬಸ್ ಓಡಾಟದಿಂದ ಆದಾಯಕ್ಕಿಂತ ನಷ್ಟವೇ ಆಗಿದೆ. ಮಂಗಳವಾರ ದಿನ 2 ಬಸ್ ಓಡಾಟದಿಂದ 2,610 ರೂ. ಬುಧವಾರ 4 ಬಸ್‌ಗಳ ಓಡಾಟದಿಂದ 6,935 ರೂ. ಗುರುವಾರ 6 ಬಸ್‌ಗಳ ಓಡಾಟದಿಂದ 31,000 ರೂ. ಶುಕ್ರವಾರ 17 ಬಸ್‌ಗಳ ಓಡಾಟದಿಂದ 23,000 ರೂ. ಆದಾಯ ಸಂಗ್ರಹವಾಗಿದೆ. ಒಟ್ಟಾರೆ ನಾಲ್ಕು ದಿನಗಳಲ್ಲಿ
ಕೇವಲ 63,545 ರೂ. ಆದಾಯ ಸಂಗ್ರಹವಾಗಿದೆ. ಪ್ರತಿದಿನ ಘಟಕಕ್ಕೆ 8 ಲಕ್ಷ ರೂ. ನಷ್ಟವಾಗುತ್ತಿದೆ ಎಂದು ಸಾರಿಗೆ ಸಂಸ್ಥೆ ಘಟಕದ ವ್ಯವಸ್ಥಾಪಕ ವಿಜಯಕುಮಾರ ಕುಮಟಳ್ಳಿ ತಿಳಿಸಿದ್ದಾರೆ.
ನಿತ್ಯ ಬಸ್‌ಗೆ ಸ್ಯಾನಿಟೈಸ್
ನರಗುಂದ: ಕೋವಿಡ್ ಲಾಕ್‌ಡೌನ್ ದಿಂದ ಸುಮಾರು 55 ದಿನಗಳವರೆಗೆ ಬಂದ್ ಆಗಿದ್ದ ಬಸ್ ಸಂಚಾರ ಕಳೆದ ಐದು ದಿನಗಳಿಂದ ಪುನಾರಂಭಗೊಂಡಿದೆ. ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ನರಗುಂದ ಸಾರಿಗೆ ಘಟಕ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿದೆ. ಪ್ರತಿ ಒಂದು ಟ್ರಿಪ್ ಸಂಚಾರ ಪೂರೈಸಿದ ಎಲ್ಲ ಬಸ್ ಗಳ ಒಳ ಮತ್ತು ಹೊರಗೆ ಸ್ಯಾನಿಟೈಸರ್ ಮಾಡುತ್ತಿದೆ. ಶನಿವಾರದಿಂದ ಪ್ರತಿ ಒಮ್ಮೆ ಸಂಚಾರ ಪೂರೈಸಿ ಬಂದ್ ಎಲ್ಲ ಬಸ್‌ಗಳ ಒಳಗೆ, ಹೊರಗೆ ಸಂಪೂರ್ಣ ಸುರಕ್ಷಾ ಕವಚದೊಂದಿಗೆ ಸ್ಯಾನಿಟೈಸರ್ ಮಾಡಲಾಗುತ್ತಿದೆ. ಪ್ರತಿದಿನ ನರಗುಂದ ಘಟಕದಿಂದ 15 ಶೆಡ್ನೂಲ್ ಪ್ರಾರಂಭಿಸಲಾಗಿದೆ. ನರಗುಂದದಿಂದ ಹುಬ್ಬಳ್ಳಿ,
ಗದಗ, ರೋಣ, ಮುನವಳ್ಳಿಗೆ ಬಸ್ ಸಂಚಾರ ಪ್ರಾರಂಭಿಸಲಾಗಿದೆ ಎಂದು ಸಾರಿಗೆ ಸಂಸ್ಥೆ ಸಿಬ್ಬಂದಿ ತಿಳಿಸಿದ್ದಾರೆ.