Advertisement
ಇನ್‘ಕಾಗ್ನಿಟೋ ಎಂಬುದು ಅಜ್ಞಾತ, ಗುರುತು ಮರೆಸಿಕೊಳ್ಳುವುದು ಎಂಬರ್ಥವನ್ನು ನೀಡುತ್ತದೆ. ಖಾಸಗಿಯಾಗಿ ಬ್ರೌಸಿಂಗ್ ಮಾಡಲು ಅಂದರೇ ಇತರರು ನೆಟ್ ಜಾಲಾಟವನ್ನು ಹಿಂಬಾಲಿಸದಂತೆ ತಡೆಯುವ ವ್ಯವಸ್ಥೆ ಇದಾಗಿದೆ. ಯಾವುದೇ ಬ್ರೌಸರ್‘ನಲ್ಲಿರಬಹುದಾದ ಅಂತರ್ಜಾಲದ ಚಟುವಟಿಕೆಗಳನ್ನು ಬೇರೆಯವರಿಗೆ ತಿಳಿಯದಂತೆ ಮಾಡುವುದು. ಬ್ರೌಸರ್ ಮುಚ್ಚಿದಾಗ ಸರ್ಚ್ ಹಿಸ್ಟರಿ ಸ್ವಯಂಚಾಲಿತವಾಗಿ ಅಳಿಸಿ ಹೋಗುವ ವ್ಯವಸ್ಥೆ ಇದರಲ್ಲಿ ಕಂಡುಬರುವುದು.
Related Articles
Advertisement
ಆನ್‘ಲೈನ್‘ನಲ್ಲಿ ನೀವು ಏನನ್ನಾದರೂ ಖರೀದಿಸಲು ಮುಂದಾಗುವುದಿದ್ದರೆ ಈ ಮೋಡ್ ಬಳಸುವುದು ಬಹಳ ಸುರಕ್ಷಿತ. ಯಾಕೆಂದರೆ ಸಾಮಾನ್ಯ ಬ್ರೌಸರ್ ಬಳಸಿದಾಗ ನೀವು ಏನು ಸರ್ಚ್ ಮಾಡಿದ್ದೀರಿ ಎಂಬುದನ್ನು ಆಧರಿಸಿ ಅದಕ್ಕೆ ಸಂಬಂಧಿಸಿದ ಜಾಹೀರಾತುಗಳು ಆಗಾಗ ಕಾಣಿಸಿಕೊಳ್ಳುತ್ತದೆ. ಇನ್‘ಕಾಗ್ನಿಟೋದಿಂದ ಜಾಹೀರಾತುಗಳ ಕಿರಿಕಿರಿ ಕೂಡ ತಪ್ಪುತ್ತದೆ.
ಸೈಬರ್‘ಗಳಲ್ಲಿ ಅಥವಾ ಇತರರ ಕಂಪ್ಯೂಟರ್ ಗಳಲ್ಲಿ ಇಂಟರ್’ನೆಟ್ ಬಳಸುತ್ತಿರುವಿರಿ ಎಂದಾದರೇ ಈ ಮೋಡ್ ಬಳಸುವುದು ಸೂಕ್ತ. ಸಾಮಾನ್ಯ ಗೂಗಲ್ ಕ್ರೋಮ್ ಬ್ರೌಸರ್ ಬಳಸಿದಾಗ ನೀವು ಸರ್ಚ್ ಮಾಡಿದ ಡಾಟಾಗಳು ಅಲ್ಲೇ ಉಳಿದುಬಿಡುತ್ತದೆ. ಇದರಿಂದ ನಿಮ್ಮ ಮಾಹಿತಿಗಳು ಬೇರೆಯವರ ಪಾಲಾಗುವ ಸಾಧ್ಯತೆಯೂ ಇರುತ್ತದೆ.
ಆನ್ ಲೈನ್ ಬ್ಯಾಂಕಿಂಗ್ ವಹಿವಾಟು ಮಾಡುವಾಗಲೂ ಈ ಇನ್‘ಕಾಗ್ನಿಟೋ ಮೋಡ್ ಬಳಸುವುದು ಅತ್ಯವಶ್ಯಕ. ಈ ಮೋಡ್ ಹ್ಯಾಕರ್‘ಗಳಿಂದ, ಕಂಪ್ಯೂಟರ್ ವೈರಸ್ ತಂತ್ರಾಂಶಗಳಿಂದ, ಖಾಸಗಿತನಕ್ಕೆ ಧಕ್ಕೆಯಾಗದಂತೆ ಬಹುಪಾಲು ರಕ್ಷಿಸುತ್ತದೆ.
ಹಲವು ಅಕೌಂಟ್ ಗಳಿಗೆ ಸೈನ್‘ಇನ್ ಆಗುವ ಅವಕಾಶ: ಉದಾ: ಗೂಗಲ್ ಕ್ರೊಮ್‘ನಲ್ಲಿ ವಾಟ್ಸಾಪ್ ವೆಬ್ ಬಳಸುತ್ತಿದ್ದೀರಾ ಎಂದಿಟ್ಟುಕೊಳ್ಳಿ. ಅದೇ ಕ್ಷಣದಲ್ಲಿ ಮತ್ತೊಂದು ವಾಟ್ಸಾಪ್ ವೆಬ್ ಬಳಸುವ ಅವಶ್ಯಕತೆ ಎದುರಾದರೆ ಇನ್‘ಕಾಗ್ನಿಟೋ ಮೋಡ್ ಬಳಸಬಹುದು. ಅಂದರೇ ಒಂದೇ ವೇಳೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಅಕೌಂಟ್‘ಗಳಿಗೆ ಲಾಗಿನ್ ಆಗುವ ಅವಕಾಶವನ್ನು ಕಲ್ಪಿಸಿಕೊಡುತ್ತದೆ.
ಗೂಗಲ್ ಮ್ಯಾಪ್‘ನಲ್ಲಿ ಕೂಡ ಇನ್‘ಕಾಗ್ನಿಟೋ ಮೋಡ್ ಅನ್ನು ಪರಿಚಯಿಸಲಾಗಿದೆ. ಈ ಮೋಡ್ ಬಳಸಿ ಉಪಯೋಗಿಸಿದರೆ ನಿಮ್ಮ ಲೊಕೇಶನ್ ಹಿಸ್ಟರಿ ಅಥವಾ ಗೂಗಲ್ ಮ್ಯಾಪ್ ಹುಡುಕಾಟದ ವಿವರವನ್ನು ಅದು ಶೇಖರಿಸಿಟ್ಟುಕೊಳ್ಳುವುದಿಲ್ಲ.
ಪತ್ತೆದಾರನ ಮುಖದ ಹಿಂದಿನ ಸೀಕ್ರೇಟ್ ಏನು ? ಕ್ರೋಮ್, ಇಂಟರ್ನೆಟ್ ಎಕ್ಸ್ ಪ್ಲೋರರ್, ಮೋಜಿಲ್ಲಾ ಅಥವಾ ಇನ್ಯಾವುದೇ ಬ್ರೌಸರ್ ಮೂಲಕ ಇನ್‘ಕಾಗ್ನಿಟೋ ಮೋಡ್ ತೆರೆದರೆ ಕನ್ನಡಕಧಾರಿ ಪತ್ತೆದಾರನ ಮುಖದ ಐಕಾನ್ ಕಾಣಿಸುತ್ತದೆ. ಈ ಪತ್ತೆದಾರ ನಿಮ್ಮ ಮಾಹಿತಿಯನ್ನು ಇನ್ನೊಬ್ಬರ ಪಾಲಾಗದಂತೆ ತಡೆದು ಸುಳಿವು ದೊರಕದಂತೆ ಮಾಡುತ್ತಾನೆ. ಹಾಗಾಗಿ ಪ್ರೈವೇಟ್ ಮೋಡ್ ಗೆ ಪತ್ತೆದಾರನ ಐಕಾನ್ ಬಳಸಿಕೊಳ್ಳಲಾಗಿದೆ.