ಇಸ್ಲಾಮಾಬಾದ್ : ಕೇಬಲ್ ತುಂಡಾಗಿ ಪಾಕಿಸ್ತಾನದ ಖೈಬರ್-ಪಖ್ತುಂಖ್ವಾ ಪ್ರಾಂತ್ಯದಲ್ಲಿ ಆರು ಮಕ್ಕಳು ಸೇರಿದಂತೆ ಒಟ್ಟು ಎಂಟು ಮಂದಿ ಸುಮಾರು 900 ಅಡಿ ಎತ್ತರದಲ್ಲಿ ಸಿಲುಕಿಕೊಂಡಿರುವ ಘಟನೆ ಅಲ್ಲೈ ಜಿಲ್ಲೆಯ ಅಲ್ಲೈ ತೆಹಸಿಲ್‌ನಲ್ಲಿ ನಡೆದಿದೆ.
ಘಟನೆ ಬೆಳಿಗ್ಗೆ ಎಂಟು ಗಂಟೆಗೆ ನಡೆದಿದ್ದು ಮಕ್ಕಳು ಶಾಲೆಗೆ ತೆರಳಲು ಕೇಬಲ್ ಕಾರ್ ನಲ್ಲಿ ತೆರಳುತ್ತಿದ್ದ ವೇಳೆ ಕೇಬಲ್ ಕಾರಿನ ತಂತಿ ತುಂಡಾಗಿ ಸುಮಾರು 900 ಅಡಿ ಎತ್ತರದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದು
ಖೈಬರ್ ಪಖ್ತುಂಖ್ವಾ (ಕೆಪಿ) ಸಿಎಂ ಅಜಂ ಖಾನ್ ಘಟನೆಯ ಬಗ್ಗೆ ಗಮನ ಸೆಳೆದಿದ್ದು ಕೇಬಲ್ ಕಾರಿನಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಹೆಲಿಕಾಪ್ಟರ್ ಅನ್ನು ಕಳುಹಿಸಲು ಆದೇಶಿಸಿದ್ದಾರೆ. ಆ ಬಳಿಕ ರಕ್ಷಣಾ ತಂಡ ಕೇಬಲ್ ಕಾರಿನಲ್ಲಿ ಸಿಲುಕಿದ್ದ ಎಂಟು ಮಂದಿಯ ರಕ್ಷಣೆ ಮಾಡುವ ಕಾರ್ಯಾಚರಣೆ ನಡೆಯುತ್ತಿದೆ.
ಕಣಿವೆ ಪ್ರದೇಶವಾದ ಖೈಬರ್ – ಪಖ್ತುಂಖ್ವಾ ಇಲ್ಲಿ ಜನ ಕೇಬಲ್ ಕಾರ್ ಬಳಸಿಕೊಂಡೇ ಹೋಗುವುದು ಅನಿವಾರ್ಯ ಹಾಗಾಗಿ ಮಕ್ಕಳು ಸೇರಿದಂತೆ ಎಲ್ಲರು ದಿನನಿತ್ಯ ಕೇಬಲ್ ಕಾರ್ ಬಳಸುತ್ತಾರೆ. ಹಾಗಾಗಿ ಮಂಗಳವಾರವೂ ಮಕ್ಕಳು ಶಾಲೆಗೆ ಹೋಗಲು ಕೇಬಲ್ ಕಾರ್ ಮೂಲಕ ಪ್ರಯಾಣಿಸುವಾಗ ಕಣಿವೆಯ ಮಧ್ಯ ಭಾಗದಲ್ಲಿ ಕೇಬಲ್ ಕಾರ್ ನ ತಂತಿ ತುಂಡಾಗಿ 900 ಅಡಿ ಎತ್ತರದಲ್ಲಿ ಸಿಲುಕಿಕೊಂಡಿತ್ತು.