Advertisement

ಬಾಂಗ್ಲಾದಂಥ ಘಟನೆಗಳು ಇಸ್ಲಾಮಿಕ್‌ ದೇಶಗಳಲ್ಲಿ ಸಾಮಾನ್ಯ: ಕಂಗನಾ

09:32 PM Aug 06, 2024 | Team Udayavani |

ಹೊಸದಿಲ್ಲಿ: ಬಾಂಗ್ಲಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ಇತರೆ ಧರ್ಮಗಳನ್ನು ನಾಶ ಮಾಡಲು ಪ್ರಯತ್ನಿಸುವ ಇಸ್ಲಾಮಿಕ್‌ ಗಣರಾಜ್ಯಗಳನ್ನು ಹೋಲುತ್ತವೆ ಎಂದು ಸಂಸದೆ, ನಟಿ ಕಂಗನಾ ರಣೌತ್‌ ಗಂಭೀರ ಆರೋಪ ಮಾಡಿದ್ದಾರೆ.

Advertisement

ಬಾಂಗ್ಲಾ ಪರಿಸ್ಥಿತಿಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕಂಗನಾ, ಬ್ರಿಟನ್‌ನಲ್ಲಿ ನಡೆಯುತ್ತಿರುವ ವಲಸಿಗ ವಿರೋಧಿ ಹೋರಾಟವನ್ನು ಉಲ್ಲೇಖೀಸಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು. ಅಲ್ಲದೇ ಬಾಂಗ್ಲಾ ಇನ್ನು ಭಾರತ ಸ್ನೇಹಿ ಆಗಿರುವುದಿಲ್ಲ. ಆದ್ದರಿಂದ ಭಾರತವು ತನ್ನ ವಿರೋಧಿ ಅಂತರಾಷ್ಟ್ರೀಯ ಶಕ್ತಿಗಳನ್ನು ಎಚ್ಚರಿಕೆಯಿಂದ ಎದುರಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next