Advertisement

ಪಾದಚಾರಿ ಮಹಿಳೆ ಸಾವು ಪ್ರಕರಣ: ಅಪರಾಧಿಗೆ ಆರು ತಿಂಗಳು ಶಿಕ್ಷೆ ಪ್ರಕಟ

06:12 PM Apr 05, 2022 | Team Udayavani |

ಭಾಲ್ಕಿ: ತಾಲೂಕಿನ ಶಿವಣಿ-ಕಾಕನಾಳ ರಸ್ತೆ ಮಾರ್ಗದಲ್ಲಿ ಮೋಟಾರ್‌ ಸೈಕಲ್‌ ಡಿಕ್ಕಿ ಹೊಡೆದು ಪಾದಚಾರಿ ಮಹಿಳೆಯೊಬ್ಬಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಅಪರಾಧಿಗೆ 6 ತಿಂಗಳ ಶಿಕ್ಷೆ ಮತ್ತು 1 ಸಾವಿರ ರೂ ದಂಡ ವಿಧಿಸಿದೆ.

Advertisement

ರಫೀಕ್‌ ಗುಲಾಬಖಾನ್‌ ಶಿಕ್ಷೆಗೊಳಗಾದವ. 2017ರ ಆಗಸ್ಟ್‌ 24ರಂದು ಸಂಜೆ 7 ಗಂಟೆ ಸುಮಾರಿಗೆ ಶಿವಣಿ- ಕಾಕನಾಳ ರಸ್ತೆಯ ಶನಿ ಮಹಾತ್ಮ ಮಂದಿರ ಸಮೀಪ ವೈಜಿನಾಥ ಹೂಗಾರ್‌ ಮತ್ತು ಆತನ ಪತ್ನಿ ಮೈತ್ರಾ ಅವರು ಕೃಷಿ ಚಟುವಟಿಕೆ ಮುಗಿಸಿಕೊಂಡು ಮನೆಗೆ ಮರಳುತ್ತಿರುವ ಸಂದರ್ಭದಲ್ಲಿ ಕಾಕನಾಳ ಕಡೆಯಿಂದ ಬಂದ ಮೋಟಾರ್‌ ಸೈಕಲ್‌ ಮೈತ್ರಾ ಎಂಬ ಮಹಿಳೆಗೆ ಡಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡಿದ್ದ ಮೈತ್ರಾ ಅವರು ಚಿಕಿತ್ಸೆಗೆ ಸ್ಪಂದಿಸದೇ 2017ರ ಆಗಸ್ಟ್‌ 25ರಂದು ಮೃತಪಟ್ಟಿದ್ದರು. ಈ ಕುರಿತು ಮೃತ ಮಹಿಳೆಯ ಪತಿ ವೈಜಿನಾಥ ಹೂಗಾರ್‌ ಅವರು ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ವೃತ್ತ ನಿರೀಕ್ಷಕ ಎಲ್‌.ಆರ್‌.ಮಾಸಗುಪ್ಪಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಾಧಿಧೀಶ ಪ್ರಶಾಂತ ಬಾದವಾಡಗಿ ಅಪರಾಧಿಗೆ ಐಪಿಸಿ 279ರ ಅಡಿ 6 ತಿಂಗಳ ಸಾದಾ ಶಿಕ್ಷೆ, 1 ಸಾವಿರ ರೂ ದಂಡ, ಐಪಿಸಿ 304ರ ಅಡಿ 1 ವರ್ಷ ಸಾದಾ ಶಿಕ್ಷೆ ಮತ್ತು 5ಸಾವಿರ ರೂ ದಂಡ ಮತ್ತು ಮೋಟಾರ್‌ ವಾಹನ ಕಾಯ್ದೆಯ 187ರ ಅಡಿ 500 ರೂ ದಂಡ ತಪ್ಪಿದಲ್ಲಿ 3 ತಿಂಗಳು ಸಾದಾ ಶಿಕ್ಷೆ ವಿಧಿಸಿದ್ದಾರೆ. ಸಹಾಯಕ ಸರಕಾರಿ ಅಭಿಯೋಜಕ ಬಾಲಾಜಿ ಆದೆಪ್ಪ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next