Advertisement
ಸಾಗರದ ಷಾಹಿ ಗಾಮೇಂಟ್ಸ್‌ಗೆ ಮಾಸೂರು ಕೆಳದಿ, ಕೆಳದಿಪುರ ಗ್ರಾಮದಿಂದ ನಾಲ್ವರು ಕೆಲಸಕ್ಕೆ ಕಾರಿನಲ್ಲಿ ಬರುತ್ತಿದ್ದರು. ಈ ಸಂದರ್ಭದಲ್ಲಿ ಸುಳಗೋಡು ಗ್ರಾಮದ ಸಮೀಪ ಕಾರಿನ ಬ್ರೇಕ್ ಫೇಲ್ ಆಗಿದೆ. ಹಾಗಾಗಿ ಓಮ್ನಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿ ಬಸ್‌ಗೆ ಕಾಯುತ್ತಾ ನಿಂತಿದ್ದ ಐವರಿಗೆ ಡಿಕ್ಕಿ ಹೊಡೆದಿದೆ.
Related Articles
Advertisement
ದುರದೃಷ್ಟಕರ ದಿನ: ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ ಮಾತನಾಡಿದ ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು, ಉಪವಿಭಾಗೀಯ ಆಸ್ಪತ್ರೆಯಲ್ಲಿ ದಾಖಲಾಗಿರುವ ಎಲ್ಲರಿಗೂ ಉತ್ತಮ ಚಿಕಿತ್ಸೆ ಕೊಡಿಸಲಾಗುತ್ತದೆ. ನಾಲ್ವರು ವೈದ್ಯರು ಸೇವೆ ನೀಡುತ್ತಿದ್ದಾರೆ. ಈ ನಡುವೆ ಷಾಹಿ ಗಾರ್ಮೆಂಟ್ಸ್‌ನ ವ್ಯವಸ್ಥಾಪಕರ ಜೊತೆ ಮಾತುಕತೆ ನಡೆಸಿದ್ದು, ಅಪಘಾತದಿಂದ ಗಾಯಗೊಂಡವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಅವರಿಗೆ ವೆಚ್ಚ ಭರಿಸಲು ಒಪ್ಪಿಗೆ ನೀಡಿದ್ದಾರೆ. ಈ ರೀತಿ ಅಪಘಾತಗಳಾಗಬಹುದಾದ ಹಿನ್ನೆಲೆಯಲ್ಲಿ ವಿಮೆ ಹಾಗೂ ಇತರ ದಾಖಲೆಗಳನ್ನು ಹೊಂದಿರಬೇಕು. ಕೆಲಸದ ಸ್ಥಳ ಸೇರಲು ಕೊನೆ ಕ್ಷಣದ ಗಡಿಬಿಡಿ ಮಾಡುವ ಬದಲು ಕಾಲು ಅರ್ಧ ಘಂಟೆ ಮೊದಲೇ ಹೊರಡಲು ವ್ಯವಸ್ಥೆ ಮಾಡಿಕೊಳ್ಳಬೇಕು. ಒಟ್ಟಿನಲ್ಲಿ ಸಾಗರದ ಪಾಲಿಗೆ ಈ ಭಾನುವಾರ ದುರದೃಷ್ಟಕರ ದಿನ ಎಂದು ತಿಳಿಸಿದರು.
ಸೂಕ್ತ ಚಿಕಿತ್ಸೆಯ ಒತ್ತಾಯ: ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿ ಮಾತನಾಡಿದ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಕೊಡಲು ವೈದ್ಯರ ಬಳಿ ಮನವಿ ಮಾಡಲಾಗಿದೆ. ಮೃತಪಟ್ಟ ಚಾಲಕನಿಗೆ ಪರಿಹಾರ ಕೊಡಬೇಕು ಮತ್ತು ಗಾಯಗೊಂಡವರಿಗೆ ಷಾಹಿ ಗಾರ್ಮೇಂಟ್ಸ್‌ನಿಂದ ಚಿಕಿತ್ಸೆ ಜೊತೆಗೆ ಪರಿಹಾರ ಸಹ ಕೊಡಲು ಒತ್ತಾಯಿಸುತ್ತಿದ್ದೇನೆ ಎಂದರು.