Advertisement
ಘಟನೆಯ ಕುರಿತಾಗಿ ಮಾಹಿತಿ ನೀಡಿರುವ ಪೊಲೀಸರು ಕಳೆದ ಫ್ರೆಬ್ರವರಿ 19 ರಂದು ತನ್ನ ಮನೆಯ ಬಳಿಯ ಹೊಲವೊಂದರಲ್ಲಿ ಆಟವಾಡುತ್ತಿದ್ದ 5 ವರ್ಷದ ಬಾಲಕಿಯ ಮೇಲೆ 21 ವರ್ಷ ವಯಸ್ಸಿನ ಯುವಕನೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಘಟನೆ ನಡೆದ ಬಳಿಕ ಬಾಲಕಿಯ ಜೊತೆಯಲ್ಲಿ ಆಟವಾಡುತ್ತಿದ್ದ ಮಕ್ಕಳು ಆಕೆಯ ಪೋಷಕರ ಬಳಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಬಾಲಕಿಯ ಪೋಷಕರು ಆಕೆಗಾಗಿ ಹುಡುಕಾಟ ನಡೆಸಿದಾಗ ಆಕೆ ನಿರ್ಜನ ಪ್ರದೇಶದಲ್ಲಿ ಸಿಕ್ಕಿದ್ದಳು ಎಂದಿದ್ದಾರೆ.
Related Articles
Advertisement
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಪೊಲೀಸ್ ಇಲಾಖೆಯನ್ನು ಶ್ಲಾಘಿಸಿರುವ ನ್ಯಾಯಾಲಯವು ಇದು ಯಾವುದೇ ಪ್ರಕರಣಗಳನ್ನು ವ್ಯವಸ್ಥಿತವಾಗಿ ನಡೆಸುವಲ್ಲಿ ಮಾದರಿ ತನಿಖೆಯಾಗಿದ್ದು, ಈ ತನಿಖೆಯಲ್ಲಿ ಇಲಾಖೆಯು ವೈಜ್ಞಾನಿಕ, ತಂತ್ರಜ್ಞಾನ ಹಾಗೂ ಸಾಂದರ್ಭಿಕ ಆದಾರಗಳನ್ನು ಕಲೆಹಾಕಿರುವುದಾಗಿ ತಿಳಿಸಿದ್ದಾರೆ.
ಈ ಕುರಿತಾಗಿ ತಮ್ಮ ಟ್ವೀಟ್ ಸಂದೇಶದ ಮೂಲಕ ಮಾಹಿತಿ ಹಂಚಿಕೊಂಡಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಘಟನೆ ನಡೆದ ಕೇವಲ ಒಂಭತ್ತು ದಿನದ ಒಳಗೆ ಪೊಲೀಸರು ಜಾರ್ಜ್ ಶೀಟ್ ಹಾಕಿದ್ದು, ಕೇವಲ 26 ದಿನಗಳಲ್ಲಿ ಕೋರ್ಟ್ ವಿಚಾರಣೆ ನಡೆಸಿ ಅಪರಾಧಿಗೆ ಶಿಕ್ಷೆ ವಿಧಿಸಿದೆ.ಇದು ಪೊಲೀಸ್ ಇಲಾಖೆ, ನ್ಯಾಯಾಂಗ ವ್ಯವಸ್ಥೆ ಕಾರ್ಯ ಕ್ಷಮತೆ ಹಾಗೂ ಸರ್ಕಾರದ ಬದ್ದತೆಯನ್ನು ಎತ್ತಿಹಿಡಿಯುವ ಅಂಶವಾಗಿದೆ ಎಂದಿದ್ದಾರೆ.