Advertisement

ಕಾಲೇಜಿನಲ್ಲಿ ಪರೀಕ್ಷೆ ವೇಳೆ ಕುಸಿದ ಛಾವಣಿಗಾರೆ

04:01 PM Feb 11, 2021 | Team Udayavani |

ಮೈಸೂರು: ನಗರದ ಮಹಾರಾಜ ಕಾಲೇಜಿನ ಕೊಠಡಿಯೊಂದರ ಛಾವಣಿಯ ಗಾರೆ ಕುಸಿದು ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಬುಧವಾರ ಕಾಲೇಜಿನ ನ್ಯಾಯ ವಿಜ್ಞಾನ ಮತ್ತು ಅಪರಾಧ ಶಾಸ್ತ್ರ ವಿಭಾಗದ ಕೊಠಡಿಯಲ್ಲಿ 24 ಮಂದಿ ವಿದ್ಯಾರ್ಥಿಗಗಳು ಅಂತರಿಕ ಪರೀಕ್ಷೆ ಬರೆಯುತ್ತಿರುವಾಗ ಛಾವಣಿಯೆ ಗಾರೆ ಕುಸಿದು ಬಿದ್ದಿದೆ.

Advertisement

ಈ ಸಂದರ್ಭದಲ್ಲಿ ಎಂಎಸ್‌ಸಿ ಕ್ರಿಮಿನಾಲಜಿ ವಿಭಾಗದ ವಿಶಾಲ್‌, ಯಶವಂತ್‌, ಎ.ಸಲೀಂ ಗಾಯಗೊಂಡಿದ್ದಾರೆ. ಛಾವಣಿಯ ಒಂದು ಭಾಗದ ಸುಮಾರು ಮೂರು ಅಡಿಯ ಗಾರೆ ಕುಸಿದು ವಿದ್ಯಾರ್ಥಿಗಳ ಮೇಲೆ ಬಿದ್ದ ಪರಿಣಾಮ ವಿದ್ಯಾರ್ಥಿಗಳ ತಲೆ, ಕೈ ಹಾಗೂ ಭುಜದ ಭಾಗಕ್ಕೆ ಪೆಟ್ಟಾಗಿದೆ. ತಕ್ಷಣವೇ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಿ ಕಾಮಾಕ್ಷಿ ಆಸ್ಪತ್ರೆಗೆ ದಾಖಲಿಸಲಾಯಿತು. ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಯಿತು.

ಕುಲಪತಿ ಪರಿಶೀಲನೆ: ಮಹಾರಾಜ ಕಾಲೇಜಿನಲ್ಲಿ ಛಾವಣಿ ಗಾರೆ ಕುಸಿತ ವಿಷಯ ತಿಳಿದು ಮೈಸೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್‌ ಹಾಗೂ ಕುಲಸಚಿವ ಪ್ರೊ.ಆರ್‌.ಶಿವಪ್ಪ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು. ನೂರು ವರ್ಷಕ್ಕೂ ಹೆಚ್ಚು ಹಳೆಯದಾದ ಕಟ್ಟಡ ಇದಾಗಿದ್ದು, ಇದನ್ನು ಪಾರಂಪರಿಕ ಕಟ್ಟಡ ಪಟ್ಟಿಗೆ ಸೇರಿಸಲಾಗಿದೆ. ಹಾಗಾಗಿ ತಜ್ಞರನ್ನು ಸಂಪರ್ಕಿಸಿ ಕಾಮಗಾರಿ ಕೈಗೊಳ್ಳ ಲಾಗುವುದು ಎಂದು ಹೇಳಿದರು.

ಕಟ್ಟಡದ ಹೊರಭಾಗದಲ್ಲಿ ಗಿಡಗಳನ್ನು ತೆರವು ಮಾಡಲಾಗುತ್ತಿದೆ. ಮೈಸೂರು ವಿವಿ ಆವರಣದಲ್ಲಿರುವ ಜಯಲಕ್ಷ್ಮೀವಿಲಾಸ ಅರಮನೆಯಲ್ಲಿ ಕೂಡ ಇದೇ ರೀತಿ ಅಗಿದ್ದು, ತಜ್ಞರ ಸಮಿತಿ ರಚಿಸಿ ವರದಿ ಕೇಳಿದ್ದೇವೆ. ಅದರೊಂದಿಗೆ ಈ ಕಟ್ಟಡದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗುವುದು. ಸದ್ಯಕ್ಕೆ\ ಪರೀಕ್ಷೆ ಮುಂದೂಡಿ ತರಗತಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದು ಎಂದು ಹೇಳಿದರು. ಛಾವಣಿ ಮೇಲ್ಭಾಗ ಶಿಥಿಲಗೊಂಡಿದ್ದರಿಂದ ದುರಸ್ತಿ ಕಾರ್ಯ ನಡೆಯುತ್ತಿತ್ತು. ದುರಸ್ತಿ ಕಾರ್ಯ ನಡೆಯುತ್ತಿರುವಾಗಲೇ ಕೆಳ ಭಾಗದಲ್ಲಿ ಛಾವಣಿ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next