Advertisement

ಅಕ್ಕ-ತಂಗಿಗೆ ತಾಳಿ ಕಟ್ಟಿದ್ದವನ ಮೇಲೆ ಕೇಸು!

10:51 AM May 17, 2021 | Team Udayavani |

ಮುಳಬಾಗಿಲು: ಅಕ್ಕ-ತಂಗಿಗೆ ಒಂದೇ ಮಂಟಪದಲ್ಲಿ ತಾಳಿ ಕಟ್ಟುವ ಮೂಲಕ ಎಲ್ಲರ ಗಮನ ಸೆಳೆದಿದ್ದಯುವಕ, ಬಾಲಕಿ ಮದುವೆಯಾಗಿದ್ದಾನೆ ಎಂದು ಸಿಡಿಪಿಐ ನೀಡಿದ ದೂರಿನಂತೆ ನಂಗಲಿ ಠಾಣೆಯಲ್ಲಿ 7ಮಂದಿ ಮೇಲೆ ಕೇಸು ದಾಖಲಿಸಿದ್ದು, ಬಂಧನ ಭೀತಿಯಿಂದ ಆರೋಪಿಗಳೆಲ್ಲರೂ ಪರಾರಿಯಾಗಿದ್ದಾರೆ.

Advertisement

ತಾಲೂಕಿನ ಮುದಿಗೆರೆ ಮ.ಗಡ್ಡೂರು ಗ್ರಾಪಂವ್ಯಾಪ್ತಿಯ ಚಿನ್ನಬಾಲೇಪಲ್ಲಿ ಗ್ರಾಮದ ದೊಡ್ಡಲಕ್ಷ್ಮಮ್ಮ ಮತ್ತು ಚಿಕ್ಕಚನ್ನರಾಯಪ್ಪ ಅವರ ಪುತ್ರ ಉಮಾಪತಿ,ತಿಮ್ಮರಾವುತನಹಳ್ಳಿ ಗ್ರಾಪಂ ವ್ಯಾಪ್ತಿಯ ವೇಗಮಡಗುಗ್ರಾಮದ ನಾಗರಾಜಪ್ಪ ಮತ್ತು ರಾಣೆಮ್ಮ ದಂಪತಿಯಪುತ್ರಿಯರಾದ ಸುಪ್ರಿಯಾ ಮತ್ತು ಲಲಿತಾ ಅವರೊಂದಿಗೆ ಮೇ 7ರಂದು ಚಿನ್ನಬಾಲೇಪಲ್ಲಿ ಗ್ರಾಮದ ಚನ್ನರಾಯಸ್ವಾಮಿ ದೇಗುಲದಲ್ಲಿ ಸರಳವಾಗಿ ವಿವಾಹವಾಗಿದ್ದರು.

ವೈರಲ್‌ ಆಗಿದ್ದ ಫೋಟೋ: ಅಂತೆಯೇ ಮೇ 7ರಂದು ವೇಗಮಡಗು ಗ್ರಾಮದಲ್ಲಿ ವಧುವಿನ ಮನೆಯಲ್ಲಿ ಆರತಕ್ಷತೆ ನಡೆದಿದ್ದು, ಆಮಂತ್ರಣ ಪತ್ರಿಕೆಯಲ್ಲಿವರನು ಇಬ್ಬರು ಯುವತಿಯರ ಜೊತೆ ವಿವಾಹವಾಗಿರುವ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿತ್ತು.

ಇದನ್ನೂ ಓದಿ:ಟಗ್ ಸಿಬ್ಬಂದಿ ರಕ್ಷಣಾ ಕಾರ್ಯ: ಕೋಸ್ಟ್ ಗಾರ್ಡ್ ಡಿಐಜಿ ಜತೆ ಕೋಟ, ಕಟೀಲ್, ಡಿಸಿ ಚರ್ಚೆ

ಮದುವೆ ಆಗಲು ಹೆಣ್ಣು ಸಿಗದೇಎಷ್ಟೋ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ತಾಲೂಕಿನ ಯುವಕನೊಬ್ಬ ಒಂದೇ ಮಂಟಪದಲ್ಲಿ ಅಕ್ಕ-ತಂಗಿ ಇಬ್ಬರನ್ನೂ ವಿವಾಹವಾಗಿರುವುದು ಎಲ್ಲರ ಗಮನ ಸೆಳೆದಿತ್ತು.ಈಗ ಮದುವೆ ಆಗಿರುವ ಯುವತಿಯರಲ್ಲಿಲಲಿತಾ ಮೂಕಿ ಎನ್ನಲಾಗಿದೆ. ತನ್ನ ತಂಗಿಯನ್ನುಮದುವೆ ಯಾದರೆ ಮಾತ್ರ ಮದುವೆ ಆಗುತ್ತೇನೆಂದುಸುಪ್ರಿಯಾ ಪಟ್ಟು ಹಿಡಿದ ಕಾರಣ, ಇಬ್ಬರನ್ನು ಉಮಾಪತಿ ಮದುವೆ ಆಗಿದ್ದನು. ಆದರೆ, ಲಲಿತಾಗೆ ಇನ್ನೂ 16ವರ್ಷ ಎಂದು ಹೇಳಲಾಗುತ್ತಿದೆ.

Advertisement

ಅಧಿಕಾರಿಗಳು ಭೇಟಿ: ಯುವತಿಯರ ಜೊತೆವಿವಾಹ ವಾಗಿರುವ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಮಾಧ್ಯಮಗಳಲ್ಲೂ ಸುದ್ದಿಪ್ರಕಟ ವಾಗಿತ್ತು. ಇದರಿಂದ ಎಚ್ಚೆತ್ತ ತಹಶೀಲ್ದಾರ್‌ರಾಜ ಶೇಖರ್‌, ಸಿಡಿಪಿಒ ರಮೇಶ್‌, ತಾಯಲೂರುಹೋಬಳಿ ಉಪ ತಹಶೀಲ್ದಾರ್‌ ಮಂಜುನಾಥ್‌,ರಾಜಸ್ವ ನಿರೀಕ್ಷಕ ಸತೀಶ್‌ರಾಜ್‌ ಮತ್ತು ಗ್ರಾಮ ಲೆಕ್ಕಿಗದೇವರಾಜ್‌ ಒಳಗೊಂಡ ಅಧಿಕಾರಿಗಳ ತಂಡ ವೇಗಮಡಗು ಗ್ರಾಮದ ಯುವತಿಯ ಮನೆಗೆ ಭೇಟಿನೀಡಿ ಕುಟುಂಬಸ್ಥರೊಂದಿಗೆ ಚರ್ಚಿಸಿ ಯುವತಿಯವಯಸ್ಸಿನ ದಾಖಲೆ ಪರಿಶೀಲಿಸಿದಾಗ ಲಲಿತಾ ಅಪ್ರಾಪ್ತೆಳೆಂದು ದೃಢಪಟ್ಟಿದೆ.

ಕೇಸು ದಾಖಲು: ಬಾಲಕಿಯೊಂದಿಗೆ ವಿವಾಹವಾಗಿರುವ ಉಮಾಪತಿ ಮತ್ತು ಅವರ ತಂದೆ ಚಿಕ್ಕಚನ್ನರಾಯಪ್ಪ, ತಾಯಿ ದೊಡ್ಡಲಕ್ಷ್ಮಮ್ಮ, ಬಾಲಕಿಯ ತಂದೆನಾಗರಾಜಪ್ಪ, ತಾಯಿ ರಾಣೆಮ್ಮ ಮತ್ತು ಬಾಲ್ಯವಿವಾಹದ ಲಗ್ನಪತ್ರಿಕೆ ಮುದ್ರಿಸಿದ ಮುಳಬಾಗಿಲುಗಾಯತ್ರಿ ಆಫ್ಸೆಟ್‌ ಪ್ರಿಂಟರ್ ಮಾಲಿಕ, ಚನ್ನರಾಯಸ್ವಾಮಿ ದೇಗುಲ ಅರ್ಚಕರ ವಿರುದ್ಧ ಬಾಲ್ಯವಿವಾಹನಿಷೇಧ ಹಾಗೂ ಪೋಕೊÕà ಕಾಯ್ದೆ ಅನ್ವಯ ಪ್ರಕರಣದಾಖಲಿಸುವಂತೆ ಸಿಡಿಪಿಒ ರಮೇಶ್‌ ನಂಗಲಿ ಠಾಣೆಗೆದೂರು ನೀಡಿದ್ದರು.

ಅದರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಾಲಕಿಯನ್ನು ವಶಕ್ಕೆ ಪಡೆದುನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. 7ಆರೋಪಿಗಳ ಪತ್ತೆಗೆ ಪಿಎಸ್‌ಐ ಚೌಡಪ್ಪ ಮತ್ತು ಪೇದೆಗ‌ಳಾದ ಸುರೇಶ್‌, ಪ್ರಕಾಶ್‌, ಮಂಜುನಾಥ್‌,ಮೋಹನ್‌ ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next