ಮದ್ದೂರು: ತಾಲೂಕು ಕೊಪ್ಪ ಠಾಣೆ ವ್ಯಾಪ್ತಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವೆ ಏರ್ಪಟ್ಟ ಮಾತಿನಚಕಮಕಿ ವಿಕೋಪಕ್ಕೆ ತಿರುಗಿ ವ್ಯಕ್ತಿಯೋರ್ವನಿಗೆಮಾರಕಾಸ್ತ್ರದಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ.ಕೊಪ್ಪ ಗ್ರಾಮದ ಜೋಗಿಗೌಡ ಅವರ ಪುತ್ರ ಶಶಿಧರ್,ಜೆಡಿಎಸ್ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿದ್ದು ಮಂಡ್ಯಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕೊಪ್ಪ ಗ್ರಾಮದವರೇ ಆದ ಮರಿಕಾಳಯ್ಯ ಅವರ ಪುತ್ರಪ್ರತಾಪ್ ಅಲಿಯಾಸ್ ಜೋಗಿ ಹಾಗೂ ಪ್ರಶಾಂತ್‌ಎಂಬವರು ಹಲ್ಲೆ ನಡೆಸಿದ್ದಾರೆಂದು ಗಾಯಾಳು ಶಶಿಧರ್‌ನೀಡಿದ ದೂರಿನ ಮೇರೆಗೆ ಕೊಪ್ಪ ಠಾಣೆಯಲ್ಲಿಪ್ರಕರಣ ದಾಖಲಾಗಿದೆ. ಆರೋಪಿಗಳಿಬ್ಬರ ಪೈಕಿ ಪ್ರತಾಪ್‌ಅಲಿಯಾಸ್ ಜೀಗಿಯನ್ನು ಬಂಧಿಸಿರುವ ಪೊಲೀಸರು,ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮತ್ತೋರ್ವಆರೋಪಿ ಪ್ರಶಾಂತ್ ತಲೆ ಮರೆಸಿಕೊಂಡಿದ್ದು ಬಂಧನಕ್ಕೆಕ್ರಮವಹಿಸಲಾಗಿದೆ.
ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರಹುಟ್ಟು ಹಬ್ಬದ ಪ್ರಯುಕ್ತ ಕೊಪ್ಪ ಗ್ರಾಮದಲ್ಲಿ ಕಳೆದೆರಡುದಿನಗಳ ಹಿಂದೆ ಬಡವರಿಗೆ ಆಹಾರ ಕಿಟ್ ವಿತರಿಸುತ್ತಿದ್ದ ವೇಳೆಕಾರ್ಯಕ್ರಮ ಕುರಿತಾಗಿ ಕಾಂಗ್ರೆಸ್ ಕಾರ್ಯಕರ್ತರು,ಜಾಲ ತಾಣದಲ್ಲಿ ಅವಹೇಳನಕಾರಿಯಾಗಿ ಸುದ್ದಿ ಹರಿಬಿಟ್ಟಿದ್ದರು ಎನ್ನಲಾಗಿದೆ.
ಹೀಗಾಗಿ ಜೆಡಿಎಸ್ ಕಾರ್ಯಕರ್ತರುಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ್ ವಿರುದ್ಧ ಇಲ್ಲಸಲ್ಲದವಿಚಾರವಾಗಿ ಮಾತನಾಡಿದ್ದರು ಎಂದು ಹೇಳಲಾಗಿದೆ.ಕಾಂಗ್ರೆಸ್ ಕಾರ್ಯಕರ್ತರು ಪ್ರತಾಪ್ ಮತ್ತು ಪ್ರಶಾಂತ್‌ರ ನಿವಾಸಕ್ಕೆ ತೆರಳಿ ಚರ್ಚೆಗೆ ಮುಂದಾದ ವೇಳೆ ಪರಸ್ಪರ ಕೈ ಕೈಮಿಲಾಯಿಸಿ ಕಾಂಗ್ರೆಸ್ ಮುಖಂಡ ಶಶಿಧರ್ ಮೇಲೆಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಗಾಯಗೊಳಿಸಿರುವುದಾಗಿತಿಳಿದು ಬಂದಿದೆ. ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ,ಡಿವೈಎಸ್‌ಪಿ ಲಕ್ಷ್ಮೀನಾರಾಯಣಪ್ರಸಾದ್, ಮದ್ದೂರು ವೃತ್ತನಿರೀಕ್ಷಕ ಬಿ.ಆರ್.ಗೌಡ ಭೇಟಿ ನೀಡಿದ್ದರು.