Advertisement

ಮಂಡ್ಯ ನಗರದಲ್ಲಿ ಅವಾಂತರ ಸೃಷ್ಟಿಸಿದ ವರುಣ

06:03 PM May 20, 2021 | Team Udayavani |

ಮಂಡ್ಯ: ಬುಧವಾರ ಸಂಜೆ ಸುರಿದಮಳೆಯಿಂದ ಮಂಡ್ಯ ನಗರ ಸೇರಿದಂತೆವಿವಿಧೆಡೆ ಮಳೆರಾಯ ಅವಾಂತರಸೃಷ್ಟಿಸಿದ್ದಾನೆ. ಆದರೆ, ಅದೃಷ್ಟ ವಶಾತ್‌ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Advertisement

ಮಧ್ಯಾಹ್ನ 3.35ರಲ್ಲಿ ಪ್ರಾರಂಭವಾದಮಳೆ, ಭಾರೀ ಬಿರುಗಾಳಿ ಸಹಿತಜೋರಾಗಿ ಸಂಜೆ 4.45ರವರೆಗೆಸುರಿಯಿತು. ಇದರಿಂದ ನಗರದನೂರಡಿ ರಸ್ತೆಯಲ್ಲಿ ಎರಡು ಮರಗಳು ಬುಡ ಸಮೇತ ಧರೆಗುರುಳಿವೆ.ಅದರಂತೆ ಆರ್‌.ಪಿ.ರಸ್ತೆ, ಹೌಸಿಂಗ್‌ಬೋರ್ಡ್‌, ಚಂದಗಾಲು ಲೇಔಟ್‌,ಹೊಸಹಳ್ಳಿ, ಗಾಂಧಿನಗರ ಸೇರಿದಂತೆ ವಿವಿಧೆಡೆ ಮರಗಳು ಧರೆಗುರುಳಿದ್ದು,ಅಂಗಡಿ, ಮನೆಗಳಿಗೆ ಹಾನಿಯಾಗಿದೆ. ಮರಗಳು ರಸ್ತೆಗೆ ಉರುಳಿದ್ದರಿಂದ ರಸ್ತೆಸಂಚಾರ ಬಂದ್‌ ಆಗಿದೆ. ಅಲ್ಲದೆ, ವಿವಿರಸ್ತೆ, ಸರ್‌ಎಂವಿ ಕ್ರೀಡಾಂಗಣ, ವಿವೇಕಾನಂದರಸ್ತೆ, ಪೊಲೀಸ್‌ ಗ್ರೌಂಡ್‌ಗಳಲ್ಲಿ ನೀರು ತುಂಬಿಕೊಂಡು ಕೆರೆಯಂತಾಗಿತ್ತು.

ವಿದ್ಯುತ್‌ ಕಡಿತ: ಮರಗಳು ವಿದ್ಯುತ್‌ಕಂಬಗಳು, ತಂತಿಗಳ ಮೇಲೆಬಿದ್ದಿದ್ದರಿಂದ ಕಂಬಗಳು ನೆಲಕ್ಕುರುಳಿವೆ.ಇದರಿಂದ ಬಹುತೇಕ ಮಂಡ್ಯನಗರದಲ್ಲಿ ವಿದ್ಯುತ್‌ ವ್ಯತ್ಯಯವಾಗಿದೆ.ನೂರಡಿ ರಸ್ತೆ, ಹೌಸಿಂಗ್‌ ಬೋರ್ಡ್‌,ಸುಭಾಷ್‌ನಗರ, ಆರ್‌.ಪಿ.ರಸ್ತೆಗಳಲ್ಲಿಮರಗಳು ವಿದ್ಯುತ್‌ ಕಂಬ ಹಾಗೂಮನೆಗಳ ಮೇಲೆ ಬಿದ್ದಿದ್ದು, ಹಾನಿಉಂಟಾಗಿದೆ.ನೆಲಕ್ಕುರುಳಿದ ಬ್ಯಾರಿಕೇಡ್‌ಗಳು:ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಗರದವಿವಿಧ ಪ್ರಮುಖ ರಸ್ತೆಗಳನ್ನುಬ್ಯಾರಿಕೇಡ್‌ಗಳನ್ನು ಹಾಕಿ ಬಂದ್‌ಮಾಡಲಾಗಿತ್ತು. ಆದರೆ ಜೋರಾಗಿಬೀಸಿದ ಬಿರುಗಾಳಿಗೆ ಬ್ಯಾರಿಕೇಡ್‌ಗಳು ನೆಲಕ್ಕುರುಳಿದ್ದವು.

ಪೊಲೀಸರು ಕುಳಿತುಕೊಳ್ಳಲು ಹಾಕಿಕೊಂಡಿದ್ದ ಚೇರ್‌ಗಳು ಗಾಳಿಯಲ್ಲಿ ತೇಲಿ ಹೋದವು.ನೂರಡಿ ರಸ್ತೆಯಲ್ಲಿದ್ದ ಕುರ್ಚಿಯೊಂದುವಿದ್ಯುತ್‌ ಲೈನ್‌ಗೆ ಸಿಲುಕಿಕೊಂಡಿತು.ಅಲ್ಲದೆ, ಅಂಗಡಿಗಳ ಮುಂದೆಹಾಕಲಾಗಿದ್ದ ಜಂಕ್‌ಶೀಟ್‌ಗಳುಗಾಳಿಯಲ್ಲಿ ಹಾರಿ ಹೋಗಿವೆ.ನಾಮಫಲಕಗಳುಕೆಳಗೆ ಬಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next