Advertisement

ಮೀನಿಗಾಗಿ ಮುಗಿಬಿದ್ದ ಜನ: ಲಾಠಿ ಪ್ರಹಾರ

02:51 PM May 17, 2021 | Team Udayavani |

ಮಂಡ್ಯ: ಜಿಲ್ಲೆಯಲ್ಲಿ ಪ್ರತಿದಿನ ಕೊರೊನಾದಿಂದ 5ರಿಂದ10 ಮಂದಿ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಅಲ್ಲದೆ,ಒಂದು ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕುಹರಡುತ್ತಿದ್ದರೂ ಜನರು ಮಾತ್ರ ಎಚ್ಚೆತ್ತುಕೊಳ್ಳುವ ಲಕ್ಷಣಕಾಣುತ್ತಿಲ್ಲ. ಸಾರ್ವಜನಿಕರು ಪ್ರತಿದಿನ ಮೀನು, ಮಾಂಸಹಾಗೂ ದಿನಸಿ ಸಾಮಗ್ರಿ ಖರೀದಿಗೆ ಮುಗಿಬೀಳುತ್ತಿರುವುದು ಸೋಂಕಿನ ಭೀತಿಗೆ ಕಾರಣವಾಗಿದೆ.

Advertisement

ಲಾಕ್‌ಡೌನ್‌ ಹಿನ್ನೆಲೆ ಜನರಿಗೆ ಬೆಳಗ್ಗೆ ಹೊತ್ತು ಮಾತ್ರಅಗತ್ಯ ವಸ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಆಸಮಯದಲ್ಲಿಯೇ ಸಾರ್ವಜನಿಕರು ಸೋಂಕು ವಾಹಕರಾಗುತ್ತಿದ್ದಾರೆ. ದಿನಸಿ ಅಂಗಡಿ, ಹಣ್ಣು, ಹೂವು, ತರಕಾರಿ,ಮಾಂಸದಂಗಡಿಗಳ ಮುಂದೆ ಸಾಮಾಜಿಕ ಅಂತರವಿಲ್ಲದೆಕ್ಯೂ ನಿಲ್ಲುತ್ತಿದ್ದಾರೆ. ನಿಯಮ ಉಲ್ಲಂ ಸುತ್ತಿದ್ದಾರೆ.

ಮೀನಿಗಾಗಿ ಜನಸಂದಣಿ: ‌ ಲಾಠಿ ಪ್ರಹಾರ ನಗರದಹೊಸಹಳ್ಳಿಯಲ್ಲಿರುವ ಮೀನು ಮಾರುಕಟ್ಟೆಯಲ್ಲಿಭಾನುವಾರ ಜನಜಂಗುಳಿ ಸೇರಿತ್ತು. ಕೆಲವರು ಮಾಸ್ಕ್ಧರಿಸಿದ್ದರೆ, ಇನ್ನೂ ಕೆಲವರು ಮಾಸ್ಕ್ ಧರಿಸದೆ, ಯಾವುದೇಸಾಮಾಜಿಕ ಅಂತರವನ್ನು ಕಾಪಾಡದೆ ಗುಂಪು ಗುಂಪಾಗಿನಿಂತಿದ್ದರು‌ . ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿಗ್ರಾಹಕರನ್ನು ಲಾಠಿ ಪ್ರಹಾರ ಮಾಡಿ ಚದುರಿಸಿದರು.ಅಲ್ಲದೆ, ಸಾಮಾಜಿಕ ಅಂತರ, ಮಾಸ್ಕ್ ಧರಿಸುವಂತೆಜಾಗೃತಿ ಮೂಡಿಸಿದರು.

ದಂಡ ವಿಧಿಸುವ ಎಚ್ಚರಿಕೆನೀಡಿದರು. ಸೋಂಕಿನ ಭಯದ ಹಿನ್ನೆಲೆಯಲ್ಲಿ ಮೀನುಮಾರುಕಟ್ಟೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕುಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next