ಮದ್ದೂರು: ತಾಲೂಕಿನ ಆತಗೂರು ಹೋಬಳಿ ಕಂಪ್ಲಾಪುರ ಗೇಟ್ ಗ್ರಾಮದ ಶ್ರೀಮತಿ ಸುಮಿತ್ರಾ ಅವರ ಮನೆಯಲ್ಲಿ ಹಗಲು ವೇಳೆಯಲ್ಲೇ ಮನೆ ಬಾಗಿಲು ಮುರಿದು ಅಪಾರ ಪ್ರಮಾಣದ ಚಿನ್ನ ಒಡವೆ ನಗದನ್ನು ದೋಚಿ ಪರಾರಿಯಾಗಿದ್ದ ಆರೋಪಿಗಳನ್ನು ಮದ್ದೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಹೋಬಳಿಯ ಆಲ್ದಳ್ಳಿ ಗ್ರಾಮದ ಕೊತ್ತತ್ತಿ ರವಿ ಮದ್ದೂರು ತಾಲ್ಲೂಕಿನ ದುಂಡನಹಳ್ಳಿ ಗ್ರಾಮದ ಮಂಜ ಎಂಬ ಇಬ್ಬರು ಬಂಧಿತ ಆರೋಪಿಗಳಾಗಿದ್ದಾರೆ.
ಈ ಇಬ್ಬರು ಆರೋಪಿಗಳು ಕೆಸ್ತೂರು ಬೆಸಗರಹಳ್ಳಿ, ಮದ್ದೂರು ಕಿರುಗಾವಲು ಮನೆಕಳ್ಳತನ ಪ್ರಕರಣಗಳಲ್ಲಿ ಹಾಗೂ ಮದ್ದೂರು ಬಸರಾಳು ಬಸರಾಳು ಮಳವಳ್ಳಿ ಮೇಲುಕೋಟೆ ದೇವಾಲಯಗಳಲ್ಲಿ ಕಳವು ಮಾಡಿರುವುದಾಗಿ ತಿಳಿದು ಬಂದಿದೆ.
ಬಂಧಿತ ಆರೋಪಿಗಳಿಂದ 218 ಗ್ರಾಂ ಚಿನ್ನ 3ಕೆ ಜಿ ಹಾಗೂ ದೀಪಾಳ ಕಂಬಗಳು ಸೇರಿದಂತೆ 6ಸಾವಿರ ರೂ. ನಗದನ್ನು ವಶಪಡಿಸಿಕೊಂಡಿದ್ದು ಕಳ್ಳತನಕ್ಕೆ ಉಪಯೋಗಿಸುತ್ತಿದ್ದ ಲೂನ ಕಬ್ಬಿಣದ ರಾಡ್ ಹಾಗೂ 13ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ:ಐಪಿಎಲ್ ನಲ್ಲಿ ಹೊಸ ದಾಖಲೆ ಬರೆದ ಜಮ್ಮು ಕಾಶ್ಮೀರದ ಉಮ್ರಾನ್ ಮಲಿಕ್
ಮಳವಳ್ಳಿ ಡಿವೈಎಸ್ ಪಿ ಎಚ್ ಲಕ್ಷ್ಮೀನಾರಾಯಣ ಪ್ರಸಾದ್ ಮಾರ್ಗದರ್ಶನದಲ್ಲಿ ಮದ್ದೂರು ವೃತ್ತನಿರೀಕ್ಷಕ ಭರತ್ ಗೌಡ ನೇತೃತ್ವದಲ್ಲಿ ಪಿಎಸ್ ಐಗಳಾದ ದಯಾನಂದ್ ಲೋಕೇಶ್ ಹಾಗೂ ಸಿಬ್ಬಂದಿಗಳಾದ ಪ್ರಭುಸ್ವಾಮಿ ಚಿರಂಜೀವಿ ಕರಿಗಿರಿಗೌಡ ಕ್ವಿಂಟಲ್ ಶರಿಗಾರ್ ಪ್ರಶಾಂತ್ ಧನಂಜಯ ಸ್ವಾಮಿ ನಟರಾಜು ಕಿಶೋರ್ ಇತರರು ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿಬ್ಬಂದಿಗಳನ್ನು ಶ್ಲಾಘಿಸಿದ್ದಾರೆ.