ಬೇತಮಂಗಲ: ಇಲ್ಲಿನ ಕಮ್ಮಸಂದ್ರ ಗ್ರಾಪಂಯ ನಾಗಶೆಟ್ಟಿಹಳ್ಳಿ ಕೆರೆ ಕೋಡಿಯಿಂದ ಹರಿಯುವ ನೀರಿನಲ್ಲಿ ಮೀನು ಹಿಡಿಯಲು ಹೋಗಿದ್ದ ಕೋಡಿಹಳ್ಳಿ ಕೃಷ್ಣಪ್ಪ(54) ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳಗಿ ಮೃತಪಟ್ಟಿರುವ ಘಟನೆ ಭಾನುವಾರ ಬೆಳಗ್ಗೆ 11 ಗಂಟೆಯಲ್ಲಿ ನಡೆದಿದೆ.
ನಾಗಶೆಟ್ಟಿಹಳ್ಳಿ ಕೆರೆಯಿಂದ ಬೇತಮಂಗಲದ ಗೋಸಿನ ಕೆರೆಗೆ ವೇಗವಾಗಿ ಬರುತ್ತಿದ್ದ ನೀರಿನ ಸಮೀಪದಲ್ಲೇ ಇದ್ದ ಪರಸೇಪಲ್ಲಿ ಕುಂಟೆಯ ಬಳಿ ಮೀನು ಹಿಡಿಯಲು ಹೋಗಿದ್ದ ವೇಳೆ ಆಯ ತಪ್ಪಿ ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತ ಕೃಷ್ಣಪ್ಪ ಕೂಲಿ ಮಾಡಿ ಜೀವನ ನಡೆಸುತ್ತಿದ್ದರು ಇತನಿಗೆ 2 ಗಂಡು ಮಕ್ಕಳು ಪತ್ನಿಯನ್ನು ಆಗಲಿದ್ದಾರೆ.
ಬೇತಮಂಗಲ ಪೊಲೀಸಲು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಲ ಕಾಲ ಮೃತ ದೇಹ ಸಿಕ್ಕಿರಲಿಲ್ಲ ಆದರೆ ಅದೃಷ್ಠವಾತ್ ಗಿಡ ಒಂದಕ್ಕೆ ಸಿಕ್ಕಿಕೊಂಡಿದ್ದರಿಂದ ಮೃತ ದೇಹ ದೊರಕಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಇದನ್ನೂ ಓದಿ:ಪಾಕ್ – ಚೀನಾ ಹೆಸರು ಹೇಳಲು ಮೋದಿಗೆ ಭಯವೇಕೆ ? ಕಾಂಗ್ರೆಸ್ ಪ್ರಶ್ನೆ
ಕಳೆದ 15 ದಿನಗಳಿಂದ ಕ್ಷೇತ್ರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೆರೆಗಳು ಸಹ ಭರ್ತಿಯಾಗಿ ಕೊಡಿ ಹರಿದಿವೆ. ಜಿಲ್ಲೆಯ 2ನೇ ಅತಿ ದೊಡ್ಡ ಬೇತಮಂಗಲ ಪಾಲಾರ್ ಕೆರೆಯೂ 1 ದಿನದಲ್ಲಿ ಕೋಡಿ ಹರಿಯುವ ಸೂಚನೆ ಇದ್ದು, ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಕಟ್ಟೆಚ್ಚರ ವಹಿಸಲು ಜಿಲ್ಲಾಡಳಿತ ಮತ್ತು ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕೆಂದು ನಾಗರೀಕರು ಒತ್ತಾಯಿಸಿದ್ದಾರೆ.