ಚಿಂತಾಮಣಿ: 2ನೇ ಮಗು ಬೇಕೆಂದು ಗರ್ಭಕೋಶಶಸ್ತ್ರಚಿಕಿತ್ಸೆ ಮಡಿಸಿಕೊಂಡ 26 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಕುಟುಂಬಸ್ಥರು ಆಸ್ಪತ್ರೆಯಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದರು.
ತಾಲೂಕಿನ ಕೆಂಚಾರ್ಲಹಳ್ಳಿ ಗ್ರಾಪಂ ವ್ಯಾಪ್ತಿಯಗುಡಸಲಹಳ್ಳಿ ಗ್ರಾಮದ ಗೌರಮ್ಮ(26) ಮೃತ ಮಹಿಳೆ.ಗೌರಮ್ಮ ಪತಿ ಸಿವಿಲ್ ಎಂಜಿನಿಯರ್ ಆಗಿಶಿಡ್ಲಘಟ್ಟದಲ್ಲಿ ಕೆಲಸ ನಿರ್ವಸುತ್ತಿದ್ದರು. ಗೌರಮ್ಮಗೆಹೆಣ್ಣು(3)ಮಗುವಿದ್ದು, ಎರಡನೇಯ ಮಗುಬೇಕೆಂದು ಗರ್ಭಕೋಶ ಶಸ್ತ್ರಚಿಕಿತ್ಸೆಗಾಗಿ ನಗರದ ಆರ್‌ಎಸ್‌ಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಕಳೆದ ಜೂ. 6 ರಂದು ಆಸ್ಪತ್ರೆಗೆ ದಾಖಲಾಗಿದ್ದು ಜೂ 7ರಂದು ವೈದ್ಯರ ಸಲಹೆಯಂತೆ ಶಸ್ತ್ರ ಚಿಕಿತ್ಸೆಯಶಸ್ವಿಯಾಗಿ ನಡೆದಿದೆ. ಆದರೆ ನಂತರ ಗೌರಮ್ಮಉಸಿರಾಟದ ತೊಂದರೆಯಿಂದ ಪರಿತಪಿಸಿದ್ದಾರೆ.ಆರ್‌ಎಸ್‌ಎಲ್ ಆಸ್ಪತ್ರೆಯ ವೈದ್ಯಾಧಿಕಾರಿಗಳೇಅವರನ್ನು ಹೊಸಕೋಟೆಯ ಎಂವಿಜೆಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆಫಲಕಾರಿಯಾಗದೆ ಸೋಮವಾರತಡರಾತ್ರಿ ಗೌರಮ್ಮ ಮೃತರಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸುವ ಆಸ್ಪತ್ರೆಯವೈದ್ಯಾಧಿಕಾರಿ ಜೈರಾಜ್, ಗರ್ಭಕೋಶದಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದ್ದುಶಸ್ತ್ರಚಿಕಿತ್ಸೆಯಲ್ಲಿ ಯಾವುದೇತೊಂದರೆಯಾಗಿಲ್ಲ ಉಸಿರಾಟದ ತೊಂದರೆಯೇಸಾವಿಗೆ ಕಾರಣ ಎಂದಿದ್ದಾರೆ. ನಗರದ ಆರ್‌ಎಸ್‌ಎಲ್‌ಆಸ್ಪತ್ರೆಯ ವೈದ್ಯರ ನಿರ್ಲಕ್ಷದಿಂದಲ್ಲೆ ಈ ದುರ್ಘಟನೆಸಂಭವಿಸಿದೆ ಎಂದು ಆರೋಪಿಸಿ ಆಕ್ರೋಶಗೊಂಡ ಕುಟುಂಬಸ್ಥರು ನಗರದ ಆರ್‌ಎಸ್‌ಎಲ್ ಆಸ್ಪತ್ರೆಯ ಮುಂಭಾಗ ದಲ್ಲಿಶವವನ್ನು ಇಟ್ಟು ಕೆಲಕಾಲ ಪ್ರತಿಭಟನೆನಡೆಸಿದರು.
ಈ ವೇಳೆ ನಗರದ ಸರ್ಕಲ್‌ಇನ್ಸ್ ಪೆಕ್ಟರ್ ಆನಂದ ಕುಮಾರ್ ಸ್ಥಳಕ್ಕೆಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನಹೇಳಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳುವ ಭರವಸೆ ನೀಡಿದ ಮೇಲೆ ವಿರುದ್ಧಕಾನೂನು ಕ್ರಗಿಸಲಾಗುವುದು ಎಂದು ಭರವಸೆನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು.