Advertisement

ಭಾರೀ ಮಳೆ: ಮನೆ ಮೇಲೆ ಮರ ಕುಸಿತ

07:19 PM Jun 15, 2021 | Team Udayavani |

ಸಕಲೇಶಪುರ: ತಾಲೂಕಿನಲ್ಲಿ ಕಳೆದ 2 ದಿನಗಳಿಂದ ಭರ್ಜರಿಯಾಗಿ ಮಳೆ ಸುರಿಯುತ್ತಿದ್ದು, ಹಲವೆಡೆ ಮರಗಳು ಬಿದ್ದು ಹೋಗಿರುವ ಪ್ರಕರಣ ವರದಿಯಾಗಿದೆ.ತಾಲೂಕಿನ ಹೆತ್ತೂರು ಸಮೀಪದ ಹಳ್ಳಿಗಳ ಗ್ರಾಮದಲ್ಲಿ ಮನೆ ಮೇಲೆ ಮರ ಬಿದ್ದುನಷ್ಟ ಸಂಭವಿಸಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

Advertisement

ಗ್ರಾಮದ ಆಕಾಶಎಂಬುವವರ ಮನೆ ಮೇಲೆ ಮನೆಯ ಹಿಂಭಾಗವಿದ್ದ ಭಾರೀಗಾತ್ರದ ಮರವೂಂದು ಮನೆ ಮೇಲೆ ಬಿದ್ದ ಪರಿಣಾಮ ಚಾವಣಿಗೆ ಹಾನಿಯಾಗಿದೆ. ಅದೃಷ್ಟವಷಾತ್‌ ಯಾವುದೇ ಪ್ರಾಣ ಹಾನಿ ಆಗಿಲ್ಲ. ಹೆತ್ತೂರು ಸೇರಿದಂತೆ ತಾಲೂಕಿನ ಎಲ್ಲ ಹೋಬಳಿಗಳಲ್ಲಿ ಸೋಮವಾರ ಉತ್ತಮ ಮಳೆಯಾಗಿದೆ. ಭಾನುವಾರ ತಡರಾತ್ರಿವರೆಗೂ ಆರ್ಭಟಿಸಿದ್ದ ಮಳೆ ನಸುಕಿನಲ್ಲಿತುಸು ಬಿಡುವು ನೀಡಿತು.

ಬೆಳಗ್ಗೆ ಪ್ರಾರಂಭವಾದ ಮಳೆ ದಿನ ಪೂರ್ತಿ ಧಾರಾಕಾರವಾಗಿ ಸುರಿದು ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಬಳಿಕ ಸಂಜೆಯವರೆಗೂ ಆಗೊಮ್ಮೆ, ಈಗೊಮ್ಮೆ ತುಂತುರು ಮಳೆಸುರಿಯುತ್ತಲೇ ಇತ್ತು. ಸಂಜೆಯ ವೇಳೆಗೆಮತ್ತೆ ,ಗಾಳಿ ಮಳೆ ಬಿರುಸು ಪಡೆದಿತ್ತು. ಮಲೆನಾಡಿನಲ್ಲಿ ಮಳೆ ಸುರಿಯು ತ್ತಿರುವುದರಿಂದ ಕೃಷಿ ಚಟುವಟಿಕೆ ಗರಿಗೆದರಿದ್ದು, ಭತ್ತದ ಗದ್ದೆಗಳಲ್ಲಿ ಸಸಿಮಡಿನಿರ್ಮಾಣ, ಹಸಿ ಮೆಣಸಿನಕಾಯಿ ಕಟಾವು ಕಾರ್ಯಗಳು ನಡೆಯುತ್ತಿದೆ. ಕಾಫಿ ತೋಟಗಳಲ್ಲಿ ಗೊಬ್ಬರ ಹಾಕುವಚಟುವಟಿಕೆ ಬಿರುಸುಗೊಂಡಿವೆ. ಜಿಲ್ಲೆಯಲ್ಲಿ ಲಾಕ್‌ಡೌನ್‌ ಇರುವುದರಿಂದ ಕೃಷಿಕಾರ್ಯಕ್ಕೆ ಹಿನ್ನಡೆಯಾಗಿದ್ದು, ಹೊರಭಾಗದಿಂದ ಕಾರ್ಮಿಕರನ್ನು ಕರೆ ತರುವುದು ಕಷ್ಟವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next