Advertisement

ಶಾಸಕರು-ವೈದ್ಯರ ಜಟಾಪಟಿಗೆ ತೆರೆ

06:20 PM Jun 03, 2021 | Team Udayavani |

ಹಾಸನ: ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಜಿಲ್ಲಾಆರೋಗ್ಯಾಧಿಕಾರಿ ಡಾ.ಸತೀಶ್‌ ಕುಮಾರ್‌ ಅವರನ್ನುನಿಂದಿಸಿದರೆನ್ನಲಾದ ಪ್ರಕರಣಕ್ಕೆ ತೆರೆ ಬಿದ್ದಿದೆ.

Advertisement

ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಸುದ್ದಿಗಾರರೊಂ ದಿಗೆ ಮಾಹಿತಿ ನೀಡಿ,ಪ್ರವಾಸಿ ಮಂದಿರಕ್ಕೆ ವೈದ್ಯಾ ಧಿಕಾರಿಗಳಸಂಘದ ಪದಾಧಿಕಾರಿಗ ಳನ್ನು ಕರೆಸಿಶಾಸ ಕರ ಸಮ್ಮುಖದಲ್ಲಿ ವಿವರ ಪಡೆದುವಿವಾದ ಬೆಳೆಸಬೇಡಿ. ಶಾಸಕರು ತಮ್ಮಕ್ಷೇತ್ರದ ಆಸ್ಪತ್ರೆಗಳಿಗೆ ವೈದ್ಯರ ನೇಮಕಾತಿಆಗದಿದ್ದಾಗ ಅಸಮಾಧಾನ ವ್ಯಕ್ತಪಡಿಸುವುದು ಸಹಜ.ಅಂದಿನ ಸಭೆಯಲ್ಲಿ ಶಾಸಕ ಶಿವಲಿಂಗೇಗೌಡ ಅವರು ಡಿಎಚ್‌ಒಗೆಅವಾಚ್ಯ ಪದ ಬಳಸಿ ನಿಂದಿಸಿಲ್ಲ.ವೈದ್ಯಾಧಿಕಾರಿಗಳಿಗೆ ತಪ್ಪು ಮಾಹಿತಿರವಾನೆಯಾಗಿರಬೇಕು ಎಂದುವೈದ್ಯರಿಗೆ ಮಾಹಿತಿ ನೀಡಿದೆ ಎಂದರು.

ಮುಖ್ಯಮಂತ್ರಿಯವತ ವಿಡಿಯೋಸಂವಾದದ ಸಭೆಯಲ್ಲಿ ನಡೆದಬೆಳವಣಿಗೆಯನ್ನು ಮನವರಿಕೆಮಾಡಿಕೊಟ್ಟ ನಂತರ ಮಾಹಿತಿಕೊರತೆಯಿಂದ ತಾವು ಪ್ರತಿಭಟನೆಮಾಡಿದ್ದೇವೆಎಂದುವೈದ್ಯರುಹೇಳಿದ್ದಾರೆ.ವೈದ್ಯರು ಇನ್ನು ಮುಂದೆ ಪ್ರತಿಭಟನೆಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆಎಂದು ಹೇಳಿದರು.ಶಾಸಕರು, ವೈದ್ಯರು ಹಾಗೂಅಧಿಕಾರಿಗಳು ಒಗ Yಟ್ಟಿನಿಂದ ಕೊರೊನಾಸೋಂಕು ಹರಡುವುದನ್ನು ನಿಯಂತ್ರಿಸೋಣ ಎಂದು ಹೇಳಿದ್ದೇನೆ.

ಶಾಸಕಶಿವಲಿಂಗೇಗೌಡ ಮತ್ತು ವೈದ್ಯರ ನಡುವೆಇದ್ದ ವಿವಾದ ಬಗೆಹರಿಸಿದ್ದೇವೆ ಎಂದರು.ಶಾಸಕ ಪ್ರೀತಂ ಜೆ.ಗೌಡ ಅವರು ಮಾತನಾಡಿ, ಡಿಎಚ್‌ಒ ಅವರು ಉತ್ತಮವಾಗಿಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆಶಿವಲಿಂಗೇಗೌಡರು ಕೆಟ್ಟದಾಗಿ ಮಾತನಾಡಿಲ್ಲ. ಶಾಸಕರು ತಮ್ಮ ಕ್ಷೇತ್ರದ ವೈದ್ಯರಕೊರತೆ ಬಗ್ಗೆ ಮಾತನಾಡುವುದು ಸಹಜ.ಈಗ ಪರಿಸ್ಥಿತಿ ತಿಳಿಯಾಗಿದೆ ಎಂದುಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next