ಹನೂರು: ಅರಿಶಿಣ ಬೆಳೆಯ ಮಧ್ಯೆ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಜಮೀನಿನ ಮೇಲೆ ದಾಳಿ ನಡೆಸಿ 40 ಕೆ.ಜಿ ಹಸಿಗಾಂಜಾ ವಶಪಡಿಸಿಕೊಳ್ಳುವಲ್ಲಿ ಹನೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಹನೂರು ತಾಲೂಕಿನ ಶಾಗ್ಯ ಗ್ರಾಮದ ರಾಚಪ್ಪ ಎಂಬಾತನೇ ಗಾಂಜಾ ಬೆಳೆದಿರುವ ಆರೋಪಿಯಾಗಿದ್ದು, ಈತ ಜಮೀನಿನಲ್ಲಿ ಅರಿಶಿಣ ಬೆಳೆಯ ಮಧ್ಯೆ ಗಾಂಜಾ ಬೆಳೆದಿರುವುದಾಗಿ ಖಚಿತ ಮಾಹಿತಿ ದೊರೆತಿದೆ.
ಮಾಹಿತಿ ಹಿನ್ನೆಲೆ ಕೊಳ್ಳೇಗಾಲ ಉಪವಿಭಾಗದ ಡಿವೈಎಸ್ಪಿ ನಾಗರಾಜು ಅವರ ಮಾರ್ಗದರ್ಶನದಲ್ಲಿ ಸಿಪಿಐ ಸಂತೋಷ್ ಕಶ್ಯಪ್ ಮತ್ತು ಸಿಬ್ಬಂದಿ ತಂಡ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಆರೋಪಿಯು ಪರಾರಿಯಾಗಿದ್ದು ಜಮೀನಿನಲ್ಲಿ ಬೆಳೆದಿದ್ದ 40 ಕೆ.ಜಿ ತೂಕದ 45 ಗೊಂಡೆ ಮಿಶ್ರಿತ ಹಸಿಗಾಂಜಾ ಸೊಪ್ಪನ್ನು ವಶಪಡಿಸಿಕೊಂಡು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ:ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ
ದಾಳಿಯಲ್ಲಿ ಎಎಸ್‍ಐ ಕೃಷ್ಣ, ರಾಘವೇಂದ್ರ, ಶಿವಮೂರ್ತಿ, ಪ್ರದೀಪ್‍ಕುಮಾರ್, ಪ್ರಭು, ಶಿವಕುಮಾರ್ ಭಾಗವಹಿಸಿದ್ದರು.