Advertisement

ಬರಸಿಡಿಲಿನ ಹೊಡೆತಕ್ಕೆ  ತತ್ತರಿಸಿದ ಬಡಕುಟುಂಬ

05:40 PM Apr 28, 2021 | Team Udayavani |

ಚಿಂತಾಮಣಿ: ಸಿಡಿಲು ಬಡಿದು ಬೆಂಗಳೂರಿನವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದತಾಲೂಕಿನ ಸೂಮಯಾಜಲಹಳ್ಳಿಯ ಮತ್ತಿಬ್ಬರುಮಕ್ಕಳು ಮೃತಪಟ್ಟಿದ್ದು, ಇದರೊಂದಿಗೆ ತಂದೆ ಸೇರಿಮೂವರು ಮಕ್ಕಳು ದುರಂತ ಅಂತ್ಯಕಂಡಿದ್ದಾರೆ. ಈಘಟನೆ ಇಡೀ ಗ್ರಾಮವನ್ನು ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ.

Advertisement

ಒಂದೆಡೆ ಕೊರೊನಾ, ಮತ್ತೂಂದೆ ಈ ದುರುಂತಗ್ರಾಮದ ಜನರಿಗೆ ಶಾಕ್‌ ಮೇಲೆ ಶಾಕ್‌ ನೀಡಿದಂತೆಆಗಿದೆ. ಮೊದಲೇ ಬಡತನದ ಬೇಗೆಯಲ್ಲಿಬೆಯ್ಯುತ್ತಿದ್ದ ಇಡೀ ಕುಟುಂಬ ತಲ್ಲಣಗೊಂಡಿದೆ.ಮನೆಯ ಯಜಮಾನನ ಜೊತೆ ಕುಟುಂಬದವಂಶೋದ್ಧಾರಕ, ಇಬ್ಬರು ಹೆಣ್ಣು ಮಕ್ಕಳುಮೃತಪಟ್ಟಿರುವುದನ್ನು ನೋಡಿದರೆ ಪ್ರಕೃತಿಗೆಕರುಣೆಯೇ ಇಲ್ಲವೇ ಎಂದು ಶಪಿಸಬೇಕಿನಿಸುತ್ತದೆ.ತಾಲೂಕಿನ ಮುರುಗಮಲ್ಲ ಹೋಬಳಿಯಸೋಮಯಾಜಲಹಳ್ಳಿ ಗ್ರಾಮದಲ್ಲಿ ಏ.22ರಂದುಸುರಿದ ಮಳೆಯ ಜೊತೆಗೆ ಬಡಿದ ಸಿಡಿಲು ಅಂಬರೀಶ್‌ ಅವರ ಕಲ್ಲು ಚಪ್ಪಡಿ ಮನೆಯನ್ನು ಕೆಡವಿಹಾಕಿತ್ತು.

ಈ ವೇಳೆ ಅಂಬರೀಶ್‌ ಸೇರಿ ಈತನ ಪತ್ನಿಗಾಯತ್ರಮ್ಮ, ಮಕ್ಕಳಾದ ವಾಣಿಶ್ರೀ (7), ಲಾವಣ್ಯಾ(6), ದರ್ಶನ್‌ (12), ಗೌತಮ್‌ (4) ಹಾಗೂಜಗನ್‌ (70)(ಅಂಬರೀಶ್‌ ಅವರ ತಂದೆ) ಅವರಿಗೆಗಂಭೀರ ಸ್ವರೂಪದ ಸುಟ್ಟಗಾಯಗಳಾಗಿತ್ತು.ಈ ವೇಳೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆಗಾಯಗೊಂಡಿದ್ದ ಇಡೀ ಕುಟುಂಬವನ್ನೇ ಸೇರಿಸಲಾಗಿತ್ತು.

ಇದರಲ್ಲಿ ಚಿಕಿತ್ಸೆ ಫ‌ಲಕಾರಿಯಾಗದೇಭಾನುವಾರ ಬೆಳಗಿನ ಜಾವ ಪುಟ್ಟ ಬಾಲಕ ಗೌತಮ್‌ನಿಧನ ಹೊಂದಿದ್ದು, ಭಾನುವಾರ ಸಂಜೆ ಆತನ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಇದರ ಬೆನ್ನಲ್ಲೇ ಅದೇದಿನ ಸಂಜೆ ಮನೆಯ ಯಜಮಾನನಾಗಿದ್ದಅಂಬರೀಶ್‌ ಮೃತಪಟ್ಟಿದ್ದಾರೆ. ಸೋಮವಾರಅಂಬರೀಶ್‌ ಅವರ ಅಂತ್ಯ ಸಂಸ್ಕಾರ ನೆರವೇರಿಸಿದನಂತರ ಇವರ ದೊಡ್ಡಮಗಳು ವಾಣಿಶ್ರೀ, ಅದೇದಿನ ರಾತ್ರಿ 12 ಗಂಟೆಯಲ್ಲಿ ಚಿಕ್ಕಮಗಳು ಲಾವಣ್ಯಾಚಿಕಿತ್ಸೆ ಫ‌ಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಸರಣಿಯಂತೆ ತಂದೆ ಮಕ್ಕಳು ಸಾವನ್ನಪಿರುವುದಕ್ಕೆಸೋಮಯಾಜಲಹಳ್ಳಿ ಗ್ರಾಮದ ಜನತೆ ಶೋಕದಮಡುವಿನಲ್ಲಿ ಮುಳುಗಿದೆ.ಇನ್ನೂ ಆಸ್ಪತ್ರೆಯಲ್ಲಿ ಅಂಬರೀಶ್‌ ಅವರ ಪತ್ನಿಗಾಯತ್ರಮ್ಮ, ಈಕೆಯ ಅಕ್ಕನ ಮಗ ದರ್ಶನ್‌,ಅಂಬರೀಶ್‌ ಅವರ ತಂದೆ ಜಗನ್‌ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಸ್ವಲ್ಪಚೇತರಿಕೆ ಕಂಡು ಬಂದಿದೆ ಎಂದು ತಿಳಿದು ಬಂದಿದೆ.

Advertisement

ಕುಟುಂಬಕ್ಕೆ ಪ್ರೋತ್ಸಾಹಧನ: ಅಂತ್ಯ ಸಂಸ್ಕಾರಕಾರ್ಯದಲ್ಲಿ ತಹಶೀಲ್ದಾರ್‌ ಹನುಮಂತರಾಯಪ್ಪಹಾಗೂ ಸಿಬ್ಬಂದಿ ಭಾಗವಹಿಸಿ ಸಂತಾಪ ಸೂಚಿಸಿ,ಶವಸಂಸ್ಕಾರಕ್ಕಾಗಿ 10 ಸಾವಿರ ರೂ., ತಾಪಂನಿಂದ25 ಸಾವಿರ ರೂ. ಅನ್ನು ಉಪಾಧ್ಯಕ್ಷನಾರಾಯಣಸ್ವಾಮಿ ವಿತರಣೆ ಮಾಡಿದರು. ಬೋವಿಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಗುರ್ರಪ್ಪ ಕೂಡಮೃತರ ಕುಟುಂಬಕ್ಕೆ 10 ಸಾವಿರ ರೂ. ನೀಡಿದರು.ಕಳೆದ ಸೋಮವಾರದಂದು ಸೋಮಯಾಜನಹಳ್ಳಿಗೆ ಭೇಟಿ ನೀಡಿದ ಮಾಜಿ ಶಾಸಕ ಎಂ.ಸಿ.ಸುಧಾಕರ್‌ ಮೃತರ ಕುಟುಂಬಕ್ಕೆ ಧೈರ್ಯ ಹೇಳಿಸಂತಾಪ ಸೂಚಿಸಿದರು. ಈ ವೇಳೆ ಗ್ರಾಮದಜನರು ಮಾಸ್ಕ್ ಧರಿಸಿ ಅಂತ್ಯಸಂಸ್ಕಾರದಲ್ಲಿಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next