Advertisement

ಆರೋಗ್ಯ ಸಚಿವರ ಸ್ವ ಕ್ಷೇತ್ರದಲ್ಲಿ ಅಸ್ಪೃಶ್ಯ‌ತೆ ಜೀವಂತ!

05:59 PM May 08, 2021 | Team Udayavani |

ಚಿಕ್ಕಬಳ್ಳಾಪುರ: ಕೇವಲ ದಲಿತ ಎಂಬ ಕಾರಣಕ್ಕೆಕಾರ್ಯಕರ್ತೆಯನ್ನು ಗ್ರಾಮದ ಅಂಗನವಾಡಿಕೇಂದ್ರಕ್ಕೆ ಪ್ರವೇಶ ನಿರ್ಬಂಧಿ ಸಿದ್ದಲ್ಲದೆ,ಆವರಣಕ್ಕೆ ತಂತಿ ಬೇಲಿಯನ್ನೂ ಹಾಕಲಾಗಿತ್ತು. ಸದ್ಯ ಪೊಲೀಸರ ಮಧ್ಯೆ ಪ್ರವೇಶದಿಂದ ಸಮಸ್ಯೆಇತ್ಯರ್ಥಗೊಂಡಿದೆ.

Advertisement

ಏನಿದು ಘಟನೆ: ಚಿಕ್ಕಬಳ್ಳಾಪುರ ತಾಲೂಕಿನನಕ್ಕನಹಳ್ಳಿಯಲ್ಲಿ 40 ವರ್ಷದಿಂದ ಅಂಗನವಾಡಿಇದ್ದು, ಸೀತಾ ಮಹಾಲಕ್ಷ್ಮೀ  ಅವರು ಕಾರ್ಯಕರ್ತೆಆಗಿದ್ದರು. ಅವರ ನಿವೃತ್ತಿ ಬಳಿಕ ಅದೇ ಗ್ರಾಮದಮಮತಾ ಅವರನ್ನು ನೇಮಕ ಮಾಡಲಾಗಿತ್ತು.

ಎರಡು ಮೂರು ದಿನ ಕೆಲಸವನ್ನೂ ಮಾಡಿದ್ದಾರೆ.ಆದರೆ, ದಲಿತ ಮಹಿಳೆ ಎಂಬ ಕಾರಣ ಗ್ರಾಮದ ಮೇಲ್ವರ್ಗದವರು ರಾತ್ರೋರಾತ್ರಿ ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿ, ಆವರಣಕ್ಕೆ ಮುಳ್ಳು ತಂತಿಹಾಕಿ, ಕಾರ್ಯಕರ್ತೆಯ ಕರ್ತವ್ಯಕ್ಕೆಅಡ್ಡಿಪಡಿಸಿದ್ದರು.

ಗ್ರಾಮಕ್ಕೆ ಅಧಿಕಾರಿಗಳ ಭೇಟಿ: ಈ ವಿಚಾರವನ್ನುಕಾರ್ಯಕರ್ತೆ ಮಮತಾ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದು, ಮಕ್ಕಳಿಗೆ ಬಂದಿದ್ದ ಪೌಷ್ಟಿಕಆಹಾರವನ್ನು ಬೀದಿಯಲ್ಲೇ ವಿತರಿಸಿದ್ದಾರೆ.ಡಿವೈಎಸ್ಪಿ ರವಿಶಂಕರ್‌, ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆ ಉಪನಿರ್ದೇಶಕನಾರಾಯಣಸ್ವಾಮಿ, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಉಸ್ಮಾನ್‌, ಸಿಡಿಪಿಒ ನೌತಾಜ್‌ ಗ್ರಾಮಕ್ಕೆಭೇಟಿ ನೀಡಿ, ಮುಳ್ಳುತಂತಿ ತೆರವುಗೊಳಿಸಿ,ಇಬ್ಬರು ಮಹಿಳಾ ಪೊಲೀಸರನ್ನು ಭದ್ರತೆಗೆನಿಯೋಜಿಸಿ, ಕರ್ತವ್ಯ ನಿರ್ವಹಿಸಲು ಅನುವುಮಾಡಿಕೊಟ್ಟಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next