Advertisement

ಬೇಲಿಗೆ ಕತ್ತು ಸಿಲುಕಿ ಜಿರಾಫೆ ಸಾವು

01:53 PM Sep 20, 2021 | Team Udayavani |

ಆನೇಕಲ್‌: ಕಬ್ಬಿಣದ ಮೆಶ್‌ಗೆ ಕತ್ತು ಸಿಲುಕಿ ಜಿರಾಫೆ ಸಾವನ್ನಪ್ಪಿರುವ ಘಟನೆ ಭಾನುವಾರ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಂಭವಿಸಿದೆ.

Advertisement

ಕಳೆದ ವರ್ಷ ಕೊರೊನಾ ಸಂದರ್ಭದಲ್ಲಿ ಮೈಸೂರಿನಿಂದ ತರಲಾಗಿದ್ದ ಜಿರಾಫೆಗೆಮೂರುವರೆ ವರ್ಷ ವಯಸ್ಸಾಗಿತ್ತು.ಯದುನಂದನ್‌ ಹೆಸರಿನ ಈ ಜಿರಾಫೆಆಹಾರ ತಿನ್ನಲು ಜಿರಾಫೆ ಸಲಹುತ್ತಿದ್ದಜಾಗದಿಂದ ಚಿಕಿತ್ಸಾ ಭಾಗಕ್ಕೆ ಹೋಗಿದೆ.ಅದು ಚಿಕಿತ್ಸಾ ಭಾಗವಾಗಿದ್ದರಿಂದ ಕಬ್ಬಿಣದ ಮೆಶ್‌ಗಳು ಸಣ್ಣದಾಗಿತ್ತು.

ಆಲ್ಲಿ ಮೆಸ್‌ನಭಾಗದಿಂದ ತಲೆ ಹೊರ ಹಾಕಿ ಆಹಾರಸೇವೆಸಲು ಮುಂದಾಗಿ ತಲೆ ಹಿಂದಿರುಗಿತೆಗೆದುಕೊಳ್ಳಲಾಗದೆ ಕತ್ತು ಸಿಲುಕಿಕೊಂಡುಉಸಿರಾಡಲು ಸಾಧ್ಯವಾಗದೆ ಗಂಡುಜಿರಾಫೆ ಸ್ಥಳದಲ್ಲೇ ಮೃತಪಟ್ಟಿದೆ.ಕಳೆದ ವರ್ಷ ಹೆಣ್ಣು ಜಿರಾಫೆ ಒಂದೇಬನ್ನೇರುಘಟ್ಟದಲ್ಲಿ ಇತ್ತು ಎನ್ನುವ ಕಾರಣಕ್ಕೆಜೋಡಿ ತಂದು ಅದನ್ನು ಸಂತಾನ ಹೆಚ್ಚಿಸಲು ಪ್ರಾಣಿ ವಿನಿಮಯ ಯೋಜನೆಯಡಿ ಮೈಸೂರಿನಿಂದ ಜಿರಾಫೆಯನ್ನು ತರಲಾಗಿತ್ತು.

ಭಾನುವಾರ ಮಧ್ಯಾಹ್ನ ಕೀಪರ್‌ಊಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಈಘಟನೆ ನಡೆದಿದ್ದು, ಕೀಪರ್‌ ಊಟ ಮಾಡಿಬರುತ್ತಿದ್ದಾಗ ಜಿರಾಫೆ ಕತ್ತನ್ನು ಹೊರ ತೆಗೆಯಲು ಒದ್ದಾಡುತ್ತಿತ್ತು. ಈ ಸಂದರ್ಭ ದಲ್ಲಿ ಬೇರೆ ಸಿಬ್ಬಂದಿ ಕರೆಸಿಕೊಂಡು ಸ್ಥಳಕ್ಕೆ ಹೋಗುವಷ್ಟರಲ್ಲಿ ಜಿರಾಫೆ ಸಾವನ್ನಪ್ಪಿದೆ ಎಂದುಬನ್ನೇರುಘಟ್ಟ ಜೈವಿಕ ಉದ್ಯಾ ನವನದಕಾರ್ಯನಿರ್ವಹಣಾಧಿಕಾರಿ ವನಶ್ರೀವಿಪಿನ್‌ಸಿಂಗ್‌ ತಿಳಿಸಿದ್ದಾರೆ. ಮೃತಪಟ್ಟಜಿರಾಫೆಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮರಣೋತ್ತರ ಪರೀಕ್ಷೆನಡೆಸಿ ಅಂತಿಮ ಕಾರ್ಯ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next