ಆನೇಕಲ್: ರೆಮಿಡಿಸಿವರ್ ಔಷಧಿಯನ್ನುಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಜಿಗಣಿಯಸುಹಾಸ್ ಆಸ್ಪತ್ರೆಯ ಮೇಲೆ ಪೊಲೀಸರು ದಾಳಿನಡೆಸಿ, ದಂಧೆಯಲ್ಲಿ ತೊಡಗಿಸಿದ್ದ ಇಬ್ಬರನ್ನುಬಂಧಿಸಿದ್ದು, ಆಸ್ಪತ್ರೆಯ ಮೇಲೆ ದೂರುದಾಖಲಿಸಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ಹೋದರೋಗಿಯ ಕುಟುಂಬಸ್ಥರು ಜಿಗಣಿಯ ಸುಹಾಸ್‌ಆಸ್ಪತ್ರೆಯವರನ್ನು ಸಂಪರ್ಕಿಸಿದಾಗ ಒಂದುಡೋಸ್‌ಗೆ 15 ಸಾವಿರ ರೂ.ನಂತೆ ಮಾರಾಟಮಾಡಲು ಆಸ್ಪತ್ರೆ ಮಾಲಿಕ ಜಗದೀಶ್ ಹಿರೇಮಠಹಾಗೂ ಆಸ್ಪತ್ರೆಯ ಆಡಳಿತ ಮಂಡಳಿ ಮುಂದಾಗಿದೆಎನ್ನಲಾಗಿದೆ.
ಇಬ್ಬರ ಬಂಧನ: ಶಾಂತಿನಗರದಿಂದ ರೆಮಿಡಿಸಿವರ್‌ಔಷಧಿಯನ್ನು ತರಿಸಿಕೊಡುತ್ತೇನೆಂದು ಹೇಳಿಎರಡು ಇಂಜೆಕ್ಷನ್‌ಗೆ 30 ಸಾವಿರ ರೂ. ನೀಡುವಂತೆಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಖಚಿತ ಮಾಹಿತಿಪಡೆದ ಬೆನ್ನಲ್ಲೇ ಜಿಗಣಿ ಇನ್ಸ್‌ಪೆಕ್ಟರ್ ಶೇಖರ್‌ನೇತೃತ್ವದ ತಂಡ ಸುಹಾಸ್ ಆಸ್ಪತ್ರೆ ಮೇಲೆ ದಾಳಿನಡೆಸಿ, ಕಾಳಸಂತೆಯಲ್ಲಿ ರೆಮಿಡಿಸಿವರ್ ಮಾರಾಟಕ್ಕೆಮುಂದಾಗಿದ್ದ ವೈದ್ಯ ಫಾರ್ಮನ್ ಅಲಿ(33)ಹಾಗೂ ಸಿಬ್ಬಂದಿ ರಕ್ಷಿತ್(27) ಅವರನ್ನುಬಂಧಿಸಿದ್ದಾರೆ.
ಮಾಹಿತಿ ಕಲೆ ಹಾಕಿದ ತಂಡ: ಕಳೆದ ಹಲವುದಿನಗಳಿಂದ ಜಿಗಣಿಯ ಸುಹಾಸ್ ಆಸ್ಪತ್ರೆಯಲ್ಲಿರೆಮಿಡಿಸಿವರ್ ಕಾಳಸಂತೆಯಲ್ಲಿ ಮಾರಾಟಮಾಡುತ್ತ ರೋಗಿಗಳಿಗೆ ಕಿರುಕುಳ ನೀಡುತ್ತಿದ್ದಾರೆಎಂಬ ದೂರುಗಳ ಮೇರೆಗೆ ಜಿಗಣಿ ಠಾಣೆಯ ಇನ್Õಪೆಕ್ಟರ್ ಬಿ.ಕೆ.ಶೇಖರ್ ನೇತೃತ್ವದಲ್ಲಿ ಕ್ರೈಂ ತಂಡ ರಚಿಸಿಕಾರ್ಯಾಚರಣೆಗೆ ಮುಂದಾಗಿತ್ತು.
ಇದೇಸಂದರ್ಭದಲ್ಲಿ ಬಿ.ಕೆ.ಶೇಖರ್ ಅವರಿಗೆ ಕೊರೊನಾಪಾಸಿಟಿವ್ ಆದ ಕಾರಣ ಬನ್ನೇರುಘಟ್ಟ ಠಾಣೆಯಇನ್ಸ್‌ಪೆಕ್ಟರ್ ಗೋವಿಂದ ಹಾಗೂ ಹೆಬ್ಬಗೋಡಿಠಾಣೆಯ ಇನ್ಸ್‌ಪೆಕ್ಟರ್ ಗೌತಮ್ ನೇತೃತ್ವದಲ್ಲಿಮಾಹಿತಿ ಕಲೆ ಹಾಕಲಾಗಿತ್ತು. ಭಾನುವಾರಮಧ್ಯಾಹ್ನ ಆಸ್ಪತ್ರೆಯವರು ಹಣ ಪಡೆಯುವಾಗದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಇದಕ್ಕೂ ಮೊದಲೇ ಮಫ್ತಿಯಲ್ಲಿ ಕ್ರೈಮ್‌ಪೊಲೀಸರು ಆಸ್ಪತ್ರೆಗೆ ಕರೆ ಮಾಡಿ ರೆಮಿಡಿಸಿವರ್‌ಔಷಧಬೇಕೆಂದು ಕೇಳಿದ್ದಕ್ಕೆ ಆಸ್ಪತ್ರೆಯಿಂದ ನಮ್ಮಲ್ಲಿಸ್ಟಾಕ್ ಇಲ್ಲ, ಶಾಂತಿನಗರದಿಂದತರಿಸಿಕೊಡಬೇಕಾಗುತ್ತದೆ. ಇದಕ್ಕೆ 30 ಸಾವಿರ ರೂ.ಬೇಕಾಗುತ್ತದೆ ಎಂದು ಹೇಳಿದ್ದ ಮಾಹಿತಿಯನ್ನುದಾಖಲೆ ಮಾಡಿ, ಆಸ್ಪತ್ರೆಯವರ ಮೇಲೆ ದಾಳಿನಡೆಸಿದ್ದಾರೆ. ಈ ವೇಳೆ ಹಣವನ್ನು ಪಡೆಯುತ್ತಿದ್ದಾಗರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.ಎಂಡಿಪಿಎಸ್ ಕಾಯ್ದೆ ಉಲ್ಲಂಘನೆ ಅಡಿಯಲ್ಲಿದೂರು ದಾಖಲು ಮಾಡಲಾಗಿದೆ. ಜಿಗಣಿಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬಿ.ಕೆ.ಶೇಖರ್‌ಕೋವಿಡ್ ಸೋಕಿನಿಂದ ಬಳಲುತ್ತಿದ್ದರೂ ಇಂತಹಕಾರ್ಯಚರಣೆ ನಡೆಸಿದ್ದರ ಬಗ್ಗೆ ಪ್ರಸಂಶೆವ್ಯಕ್ತವಾಗಿದೆ.