ಬೆಂಗಳೂರು: ಗೂಡ್ಸ್ ಟೆಂಪೋದಲ್ಲಿ ತರಕಾರಿಚೀಲಗಳ ಒಳಗೆ ಹಾಗೂ ಅವುಗಳ ಕೆಳಗೆ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ತಮಿಳುನಾಡಿಗೆ ಕೊಂಡೊಯ್ಯುತ್ತಿದ್ದ ಇಬ್ಬರುಆರೋಪಿಗಳು ಬುಧವಾರ ಸಿಟಿ ಮಾರುಕಟ್ಟೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ತಮಿಳುನಾಡಿನ ತಿರುವಣ್ಣಮಲೈನರಾಮಕೃಷ್ಣನ್ (24) ಮತ್ತು ರಾಜಕುಮಾರ್ (27) ಬಂಧಿತರು. ಅವರಿಂದಲಕ್ಷಾಂತರ ರೂ. ಮೌಲ್ಯದ 509ಲೀಟರ್‌ನ 59 ಬಾಕ್ಸ್ ಮದ್ಯದಬಾಟಲಿಗಳು ಮತ್ತು ವಾಹನ ವಶಕ್ಕೆಪಡೆಯಲಾಗಿದೆ.ಆರೋಪಿಗಳು ನಿತ್ಯ ತಮಿಳುನಾಡಿನಿಂದ ತರಕಾರಿ ಕೊಂಡೊಯ್ಯುವ ನೆಪದಲ್ಲಿ ಸಿಟಿ ಮಾರುಕಟ್ಟೆಗೆ ಬರುತ್ತಿದ್ದರು.ಬಳಿಕ ಇಲ್ಲಿನ ಮದ್ಯ ಮಾರಾಟಗಾರರಬಳಿ ಒಂದೂವರೆ ಪಟ್ಟ ಕೊಟ್ಟು ಮದ್ಯ ಖರೀದಿಸಿ ಅವುಗಳನ್ನು ತರಕಾರಿಗಳ ಚೀಲಗಳ ಅಡಿ ಮತ್ತುಅವುಗಳ ಒಳಗಡೆ ತುಂಬಿ ಮೇಲ್ಭಾಗದಲ್ಲಿತರಕಾರಿಗಳನ್ನು ತುಂಬಿ ತಮಿಳುನಾಡಿಗೆ ಕೊಂಡೊಯ್ಯು ತ್ತಿದ್ದರು ಎಂದು ಪೊಲೀಸರು ಹೇಳಿದರು.
ತಪಾಸಣೆ ವೇಳೆ ಪತ್ತೆ: ಮಾರುಕಟ್ಟೆ ವ್ಯಾಪ್ತಿಯ ಚೆಕ್‌ಪೋಸ್ಟ್ ನಲ್ಲಿ ಇನ್‌ಸ್ಪೆಕ್ಟರ್ ಕುಮಾರಸ್ವಾಮಿ ನೇತೃತ್ವದತಂಡ ವಾಹನಗಳ ತಪಾಸಣೆಯಲ್ಲಿ ತೊಡಗಿತ್ತು.ಇದೇ ವೇಳೆ ಬಾತ್ಮೀದಾರಿಂದ ತಮಿಳುನಾಡಿನಿಂದನಿತ್ಯ ಬರುವ ವಾಹನದಲ್ಲಿ ಪೂರ್ಣ ಪ್ರಮಾಣದಲ್ಲಿತರಕಾರಿ ತುಂಬು ವುದಿಲ್ಲ. ಬದಲಿಗೆಬೇರೆ ಬಾಕ್ಸ್ ಗಳನ್ನು ತುಂಬಲಾಗುತ್ತದೆಎಂಬ ಖಚಿತ ಮಾಹಿತಿ ಸಿಕ್ಕಿತ್ತು. ಈಹಿನ್ನೆಲೆಯಲ್ಲಿ ವಾಹನ ತಪಾಸಣೆ ವೇಳೆಆರೋಪಿಗಳು ತರಕಾರಿ ಕೊಂಡೊಯ್ಯುತ್ತಿರುವುದಾಗಿ ಹೇಳಿದರು.ಅನುಮಾನದ ಮೇರೆಗೆ ಚೀಲಗಳನ್ನುತೆರವುಗೊಳಿಸಿದಾಗ ಮದ್ಯದ ಬಾಕ್ಸ್ ಗಳುಪತ್ತೆಯಾಗಿವೆ. ಬಳಿಕ ಇಬ್ಬರನ್ನು ವಶಕ್ಕೆಪಡೆದು ವಿಚಾರಣೆ ನಡೆಸಿದಾಗ ಅಕ್ರಮವಾಗಿ ಮದ್ಯದವನ್ನು ಕೊಂಡೊಯ್ಯುತ್ತಿರುವುದಾಗಿ ಹೇಳಿದ್ದಾರೆ.
ಆದರೆ, ಆರೋಪಿಗಳಿಗೆ ಯಾರಿಗೆ ಮದ್ಯದ ಬಾಕÕ…ಗಳನ್ನುಪೂರೈಕೆ ಮಾಡುತ್ತಿದ್ದರು ಎಂಬುದುಗೊತ್ತಾ ಗಿಲ್ಲ. ವಿಚಾರಣೆ ನಡೆಯುತ್ತಿದೆ ಎಂದುಪೊಲೀಸರು ಹೇಳಿದರು.
6-10 ಪಟ್ಟು ಬೆಲೆಗೆ ಮಾರಾಟ: ತಮಿಳುನಾಡಿಗೆಕೊಂಡೊಯ್ಯುತ್ತಿದ್ದ ಮದ್ಯದ ಬಾಟಲಿಗಳನ್ನುಆರರಿಂದ ಹತ್ತು ಪಟ್ಟು ಹೆಚ್ಚಿನ ಬೆಲೆಗೆಮಾರಾಟ ಮಾಡುತ್ತಿದ್ದರು ಎಂದು ಪೊಲೀಸರುಮಾಹಿತಿ ನೀಡಿದರು.