ಬೆಂಗಳೂರು: ಬಾಂಗ್ಲಾ ದೇಶದ ಯುವತಿಮೇಲಿನ ಸಾಮೂಹಿಕ ಅತ್ಯಾಚಾರಪ್ರಕರಣದಲ್ಲಿ ಪೊಲೀಸರಿಂದ ಗುಂಡೇಟು ತಿಂದ ಆರೋಪಿಗಳ ಪೈಕಿ ರಿದಾಯ್ ಬಾಬು ಬಾಂಗ್ಲಾದೇಶದಲ್ಲಿ ಪ್ರಸಿದ್ಧ ಟಿಕ್‌ಟಾಕ್ ಸ್ಟಾರ್ ಆಗಿದ್ದ.
ಜತೆಗೆ ಈ ಮೂಲಕಯುವತಿಯರನ್ನು ಮಾನವಕಳ್ಳ ಸಾಗಣೆ ಮಾಡುತ್ತಿದ್ದ ಎಂಬುದು ತನಿಖೆಯಲ್ಲಿಬೆಳಕಿಗೆ ಬಂದಿದೆ. ಟಿಕ್ ಟಾಕ್ ಮೂಲಕ ಜನಪ್ರಿಯತೆಗಳಿಸಿದ್ದ ಆರೋಪಿ,ತನ್ನ ವಿಡಿಯೋಗಳನ್ನು ಮೆಚ್ಚಿಸಂಪರ್ಕಿಸುತ್ತಿದ್ದ ಯುವತಿಯರ ಜತೆ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದ. ಅವರ ವಿಶ್ವಾಸಗಳಿಸುತ್ತಿದ್ದ. ಆಯ್ದ ಯುವತಿಯರ ಡೇಟಿಂಗ್ ಮಾಡುತ್ತಿದ್ದ. ಅಲ್ಲದೆ, ಅವರ ಆರ್ಥಿಕ ಪರಿಸ್ಥಿತಿ ಬಗ್ಗೆತಿಳಿದುಕೊಂಡು ಸಹಾಯ ಮಾಡುವನೆಪದಲ್ಲಿ ಬ್ಯೂಟಿಪಾರ್ಲರ್‌ಗಳಲ್ಲಿ ಕೆಲಸಕೊಡಿಸುವುದಾಗಿ ನಂಬಿಸಿ ಭಾರತಕ್ಕೆಅಕ್ರಮವಾಗಿ ಮಧ್ಯವರ್ತಿಗಳ ಮೂಲಕ ಕಳುಹಿಸುತ್ತಿದ್ದ.
ಕೆಲವೊಮ್ಮೆ ಈತನೇ ಕರೆತರುತ್ತಿದ್ದ. ಬಳಿಕ ಕರ್ನಾಟಕ, ಕೇರಳ,ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಿಗೆಕಳುಹಿಸಿ ಬ್ಯೂಟಿಪಾರ್ಲರ್‌ಗಳಲ್ಲಿ ಕೆಲಸಕೊಡಿಸುತ್ತಿದ್ದ. ಅನಂತರ ನಿಧಾನವಾಗಿಅವರನ್ನು ವೇಶ್ಯಾವಾಟಿಕೆ ದಂಧೆಗೆದೂಡುತ್ತಿದ್ದ. ಅದಕ್ಕೆ ಸಂತ್ರಸ್ತೆಯರೂಸಹಕಾರ ನೀಡುತ್ತಿದ್ದರು ಎಂದುಹೇಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
10 ಪುಟಗಳ ಹೇಳಿಕೆ
ಪ್ರಕರಣಕ್ಕೆ ಸಂಬಂಧ ಲೈಂಗಿಕ ದೌರ್ಜನ್ಯ, ಹಲ್ಲೆ ಹಾಗೂ ಸಾಮೂಹಿಕ ಆತ್ಯಾಚಾರ¨ ಬಗ್ಗೆ ಪೊಲೀಸರು ಸಂತ್ರಸ್ಥೆಯಿಂದ ಹೇಳಿಕೆ ದಾಖಲಿಸಿ ಕೊಂಡಿದ್ದಾರೆ. ಸಂತ್ರಸ್ಥೆಯ ವೈದ್ಯಕೀಯ ಪರೀಕ್ಷೆ ವರದಿ ಬಂದ ಬಳಿಕ, ಕೋರ್ಟ್ ಅನುಮತಿ ಪಡೆದು ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 164 ಅಡಿಯಲ್ಲಿ ಹೇಳಿಕೆ ದಾಖಲಿಸುತ್ತೇವೆ ಎಂದು ಮೂಲಗಳುತಿಳಿಸಿವೆ.