ಆಲೂರು : ಕೂಲಿ ಕಾರ್ಮಿಕನ ಮೇಲೆ ಗ್ರಾಮ ಪಂಚಾಯಿತಿ ಅಧ್ಯಕ್ಷನೊಬ್ಬ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಆಲೂರು ಪಟ್ಟಣದಲ್ಲಿ ನಡೆದಿದೆ.
ಗಾಯಗೊಂಡ ಟಿ.ತಿಮ್ಮನಹಳ್ಳಿ ಗ್ರಾಮದ ಹರೀಶ್ ಬಾರ್ ಬೆಂಡಂಗ್ ಕೆಲಸ ಮಾಡುತ್ತಿದ್ದು ತಮ್ಮ ಕೆಲಸ ಮುಗಿಸಿ ತನ್ನ ಸಹದ್ಯೋಗಿ ಕಾರ್ಮಿಕ ಮಲ್ಲೇಶಪುರ ಗ್ರಾಮದ ರವಿ ಜೊತೆ ರಾತ್ರಿ 8.30 ರ ಸುಮಾರಿಗೆ ಆಲೂರು ಪಟ್ಟಣದಲ್ಲಿರುವ ಲಕ್ಷೀ ಬಾರ್ ಅ್ಯಂಡ್ ರೆಸ್ಟೋರೆಂಟ್ ನಲ್ಲಿ ಮದ್ಯ ಸೇವೆನೆ ಮಾಡಲು ಹೋದ ಸಂದರ್ಭದಲ್ಲಿ ಬೈರಾಪುರ ಗ್ರಾ.ಪಂಚಾಯಿತಿ ಅಧ್ಯಕ್ಷ ಕೆಂಚನಹಳ್ಳಿ ರವಿ ಹಾಗೂ ಅವರ ಜೊತೆಯಲ್ಲಿದ್ದ ಕೆಲವರು ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಬಾರ್ ಬೆಂಡಂಗ್ ಹರೀಶ್ ಸ್ನೇಹಿತ ರವಿಯೊಂದಿಗೆ ಜಗಳ ತಗೆದು ಹೊಡೆಯಲು ಮುಂದಾಗಿದ್ದಾರೆ.
ಆ ಸಂದರ್ಭದಲ್ಲಿ ಹರೀಶ್ ಅವನಿಗೆ ತಲೆ ಅಪರೇಷನ್ ಆಗಿದೆ ಎಂದು ಬಿಡಿಸಲು ಹೋಗಿದ್ದಾನೆ ಆ ಸಮಯದಲ್ಲಿ ಗ್ರಾ.ಪಂಚಾಯಿತಿ ಅಧ್ಯಕ್ಷ ಕೆಂಚನಹಳ್ಳಿ ರವಿ ಹಾಗೂ ಆತನ ಜೊತೆಯಲ್ಲಿದ್ದವರು ಬಿಡಿಸಲು ಹೋದ ಹರೀಶ್ ಮೇಲೆ ಹಲ್ಲೆ ನಡೆಸಿದ್ದಾರೆ ಆತನಿಗೆ ಮೂಗಿನ ಹೊಡೆದು ರಕ್ತಶ್ರಾವವಾಗಿದ್ದರು ಬಿಡದೇ ಮರ್ಮಾಂಗಕ್ಕೆ ಒದ್ದಿದ್ದರಿಂದ ನೋವು ತಾಳಲಾರದೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡದು ಮನೆಗೆ ಹೋಗಲು ಆಸ್ಪತ್ರೆಯಿಂದ ಹೊರ ಬಂದಾಗ ಪುನಃ ಆಸ್ಪತ್ರೆ ಮುಂಭಾಗ ಹಾಗೂ ರಸ್ತೆಯಲ್ಲಿ ಎಳೆದಾಡಿ ಹಿಗ್ಗಾಮುಗ್ಗ ತಳಿಸಿದ್ದಾರೆ.
ಇದನ್ನೂ ಓದಿ:ಮೆಸ್ಕಾಂ ನಿರ್ಲಕ್ಷ್ಯ: ವಿದ್ಯುತ್ ಕೊಡದೆ ಕುಟುಂಬವನ್ನು ಕತ್ತಲಲ್ಲಿ ಕೂರಿಸಿದ ಇಲಾಖೆ
ಬೈರಾಪುರ ಗ್ರಾ.ಪಂಚಾಯಿತಿ ಅಧ್ಯಕ್ಷ ಕೆಂಚನಹಳ್ಳಿ ರವಿ ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆದಾರರ ಬಳಿ ನಾನು ಗ್ರಾ.ಪಂಚಾಯಿತಿ ಅಧ್ಯಕ್ಷ ತಿಂಗಳ ಮಾಮೂಲು ನೀಡುವಂತೆ ಒತ್ತಾಯಿಸಿದ್ದಾನೆ ಅದರೆ ಅವರು ಹಣ ಕೊಡದಿದ್ದಾಗ ಅವರ ಹಿಟಾಚಿ ಅಪರೇಟರ್ ನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟ ದೂರಿನ ಮೇಲೆ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಸರ್ಕಲ್ ಇನ್ಸ್ಪೆಕ್ಟರ್ ವೆಂಕಟೇಶ್ ಬಂದಿಸಿ ತಪ್ಪೋಪ್ಪಿಗೆ ಹೇಳಿಕೆ ಪಡೆದು ಬಿಟ್ಟು ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಹಲ್ಲೆಗೊಳಗಾದ ಹರೀಶ್ ಮಾತನಾಡಿ ಬೆಳಿಗ್ಗೆಯಿಂದ ಸಂಜೆವರೆಗೆ ಕೆಲಸ ಮಾಡಿ ಅಯಾಸಗೊಂಡಿದ್ದರಿಂದ ಮದ್ಯ ಸೇವೆನೆ ಮಾಡಲು ಬಾರ್ ಹೋಗಿದ್ದು ನಿಜ ಅದರೆ ಸಣ್ಣ ವಿಚಾರಕ್ಕೆ ಜಗಳ ತಗೆದು ನನ್ನ ಸ್ನೇಹಿತ ರವಿಯ ಮೇಲೆ ಹಲ್ಲೆ ಮಾಡಲು ಮುಂದಾದರೂ ಅವನನ್ನು ರಕ್ಷಣೆ ಮಾಡಲು ಮುಂದಾದೆ ಅವರೆಲ್ಲರೂ ನನ್ನ ಮೇಲೆಯೇ ಹಲ್ಲೆ ಮಾಡಿದಲ್ಲದೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಹೊರ ಬಂದಾಗ ಪುನಃ ಹಿಗ್ಗಾಮುಗ್ಗ ಹಲ್ಲೆ ಮಾಡದರು ಎಂದು ತಿಳಿಸಿದರು.
ಈ ಕುರಿತು ಆಲೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ಮುಂದುವರಿಸಿದ್ದಾರೆ.